ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.22 : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಚೇರಿ, ಬೆಂಗಳೂರು ದಕ್ಷಿಣ ಹಿಂದಿ ದಿವಸ್ ಆಚರಣೆಯನ್ನು ಆಯೋಜಿಸಿತ್ತು.
ಬೆಂಗಳೂರಿನ ವಲಯ ಮುಖ್ಯಸ್ಥರಾದ ಶ್ರೀ ನವನೀತ್ ಕುಮಾರ್ ಉದ್ಘಾಟಿಸಿದರು.ಅಏರಿಯಾ ಮುಖ್ಯಸ್ಥರಾದ ಅಸೀಮ್ ಕುಮಾರ್ ಪಾಲ್ ಮಾತನಾಡಿ, ಕನ್ನಡ ಭಾಷೆಯ ಮೂಲಕ ಹಿಂದಿಯನ್ನು ಬೆಳೆಸಬೇಕು. ಅಂದಾಗ ಮಾತ್ರ ನಾವು ಆಡಳಿತ ಭಾಷೆಯ ಜೊತೆಗೆ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರೋಹನ್ ಕುಮಾರ್ ಸಿಂಗ್ ಸ್ವಾಗತಿಸಿದರು. ಅಧಿಕೃತ ಭಾಷಾ ಪ್ರಭಾರಿ ರಾಜೇಶ್ ಕೆ ಅವರು ಅಧಿಕೃತ ಭಾಷಾ ವರದಿಯನ್ನು ಮಂಡಿಸಿದರು.
ಹಿಂದಿ ದಿವಸ್ ಸಂದರ್ಭದಲ್ಲಿ 12 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 75 ಪ್ರಶಸ್ತಿಗಳನ್ನು ನೀಡಲಾಯಿತು.
ಇದರಲ್ಲಿ ಹಿಂದಿ ಪ್ರಚಾರ ಯೋಜನೆ ಮತ್ತು ಹಿಂದಿ ಉತ್ಸವ ಅಭಿಯಾನದ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಉಪ ವಲಯ ಮುಖ್ಯಸ್ಥರು, ಇತರೆ ಕಾರ್ಯನಿರ್ವಾಹಕರು, ಶಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.