ಸುದ್ದಿಮೂಲ ವಾರ್ತೆ
ನೆಲಮಂಗಲ,ಅ.24: ತಾಲೂಕಿನ ದಾಬಸ್ ಪೇಟೆಯ ಲೀಲಾವತಿ ವೀರಾಚಾರರವರು ನವರಾತ್ರಿಯಂದು ವೀಶೇಷವಾಗಿ ದೇವಿಯನ್ನು ಕೂರಿಸಿ ಪ್ರತಿನಿತ್ಯ ವಿವಿಧ ರೀತಿಯ ಪೂಜೆಯನ್ನು ಮಾಡಿ ಬರುವ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತಾರೆ.
ನವರಾತ್ರೀಯಂದು ಶೈಲೇಂದ್ರ ಪುತ್ರಿ, ಬ್ರಹ್ಣಚಾರಣಿದೇವಿ, ಚಂದ್ರಘಂಟಾದೇವೆ, ಕುಷ್ನಾಡದೇವಿ,
ಸ್ಕಂದಮಾತ, ಕಾತ್ಯಾಯಣಿದೇವಿ, ಕಾಳರಾತ್ರಿ, ದುರ್ಗಷ್ಠಾಮಿ, ಮಹಾಗೌರಿ, ರನ್ನು ಪೂಜೆ ಮಾಡಬೇಕಾದರೆ ದಿನ ನಿತ್ಯ ಬೆಳೆಗ್ಗೆ ಸಂಜೆ ಪೂಜೆಯನ್ನು ಮಾಡಿ ವಿಷೇಶವಾಗಿ ಪೂಜೆಯನ್ನು ಮಾಡುತ್ತಾರೆ.
ದಿನ ನಿತ್ಯ ಮಹಾಭಾರತ, ರಾಮಾಯಣ, ಭಗವದ್ಗೀತೆ, ದೇವಿ ಕಥೆಯನ್ನು ಓದುತ್ತೇವೆ, ಪ್ರತಿದಿವಸ ಪ್ರಸಾದ ವಿತರಣೆ ನಡೆಯುತ್ತದೆ. ವಿವಿಧ ಹಣ್ಣುಗಳು, ಕರಿದ ತಿಂಡಿಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
ಲೀಲಾವತಿ ವೀರಾಚಾರ್ ಮಾತನಾಡಿ ಸುಮಾರು 20 ವರ್ಷಗಳಿಂದ 9 ದೇವರನ್ನು ಕೂರಿಸಿ ಪೂಜೆ ಮಾಡುತ್ತೇವೆ. ಇದರಿಂದ ಪ್ರತಿನಿತ್ಯ ಪೂಜೆ ಹಾಗು ಸಂಜೆ ಪೂಜೆಯನ್ನು ಮಾಡಿ ಹಾಗು ಮಹಾನವಮಿ ದಿವಸ ಬನ್ನಿಮರವನ್ನು ಕತ್ತರಿಸಿ ನವರಾತ್ರಿಯನ್ನು ಮಾಡಲಾಗುತ್ತದೆ, ಪ್ರತಿ ನಿತ್ಯ ದೇವೀಯ ಕಥೇಗಳನ್ನು ಪಠಣ ಮಾಡುತ್ತೇವೆ ಎಂದು ಹೇಳಿದರು.