ಸುದ್ದಿಮೂಲ ವಾರ್ತೆ
ಚೇಳೂರು, ಅ.24: ಚಿಕ್ಕಬಳ್ಳಾಪುರದ ಚೇಳೂರಿನ ಪುಲಿಗಲ್ ಗ್ರಾಮದ ನಡು ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಅಧಿಕಾರಿಗಳನ್ನು ಕೋರಿದ್ದಾರೆ.
ಚೇಳೂರು, ಚಾಕವೇಲು ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು. ಪ್ರತಿ ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಗ್ರಾಮದ ರಸ್ತೆ ಅಕ್ಕಪಕ್ಕ ಮನೆಗಳು ಇದ್ದು. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದ ಪರಿಣಾಮ ಓಡಾಡಕ್ಕೆ ಕಿರಿಕಿರಿ ಹಾಗು ತೊಂದರೆ ಆಗುತ್ತಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ದೊಡ್ಡ ದೊಡ್ಡ ವಾಹನಗಳು ಓಡಾಡುವ ರಭಸಕ್ಕೆ ಗುಂಡಿಗಳಲ್ಲಿನ ನೀರು ಮೆನೆಗಳಿಗೆ ನುಗ್ಗುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಪುಲಿಗಲ್ ಗ್ರಾಮ. ಪಂಚಾಯ್ತಿ ಕಚೇರಿ ಇರುವ ಗ್ರಾಮ. ಈ ಗ್ರಾಮದ ಪರಿಸ್ಥಿತಿ ಹೀಗಾದರೆ ಬೇರೆ ಹಳ್ಳಿಗಳ ಪರಿಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮ್ಮ ಇಲಾಖೆಗೆ ರಸ್ತೆ ಸೇರಲ್ಲ ಲೋಕೋಪಯೋಗಿ ಇಲಾಖೆ ರಸ್ತೆ ಸರಿ ಮಾಡಬೇಕು ಎಂದು ಸಬೂಬು ಹೇಳುತ್ತಾರೆ. ಸರ್ಕಾರಿ ಅಧಿಕಾರಿಗಳು ಹೀಗೆ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳದೆ ಮೊದಲು ಗುಂಡಿ ಮುಚ್ಚುವ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಎಂದು ಇಲ್ಲಿನವರು ಆಗ್ರಹಿಸಿದ್ದಾರೆ.