ಸುದ್ದಿಮೂಲವಾರ್ತೆ
ಕೊಪ್ಪಳ,ಅ.25:ನರೇಗಾ ನಡಿಗೆ, ಸುಸ್ಥಿರತೆಯಡೆಗೆ ಅಭಿಯಾನದ ಪ್ರಯುಕ್ತ ಇಂದರಗಿ ಗ್ರಾ.ಪಂ ಇಂದಿರಾನಗರ ತಾಂಡಾದಲ್ಲಿ ನರೇಗಾ ಕೂಲಿಕಾರರು, ಮಹಿಳೆಯರಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಜರುಗಿತು.
ತಾಂಡಾದ ಒಟ್ಟು 30 ಜನ ಕೂಲಿಕಾರ ಮಹಿಳೆಯರು ಸೇವಾಲಾಲ್ ದೇವಸ್ಥಾನದಿಂದ ಜಾಥಾ ಪ್ರಾರಂಭಿಸಿ ಸಂಚರಿಸಿ ಗ್ರಾಮದ ಪ್ರತಿ ಮನೆ ಮನೆಗೆ ಮಾಹಿತಿ ತಲುಪುವಂತೆ
ಗಂಡು-ಹೆಣ್ಣಿಗೆ ಸಮಾನ ಕೂಲಿ, ಮಹಿಳೆಯರಿಗೆ ಅರ್ಧದಷ್ಟು ಕೆಲಸ ಇತ್ಯಾದಿ ಸೇರಿದಂತೆ ವೈಯಕ್ತಿಕ ಕಾಮಗಾರಿ ಸೌಲಭ್ಯ ದೊರೆಯುವ ಕುರಿತು ವಿವಿಧ ಮಾಹಿತಿಯುಳ್ಳ ಸ್ಲೋಗನ್ ಗಳನ್ನು ಘೋಷಿಸಿದರು.
ಜಾಥಾದಲ್ಲಿ ಗ್ರಾಮ ಕಾಯಕ ಮಿತ್ರ ಯಮುನಾ ಪೂಜಾರ, ಕಾಯಕ ಬಂಧುಗಳಾದ ನಾಗರಾಜ, ಪರಸಪ್ಪ ರಾಠೋಡ, ಹನಮಂತಪ್ಪ, 30 ಜನ ಮಹಿಳಾ ಕೂಲಿಕಾರರು* ಭಾಗವಹಿಸಿದ್ದರು.