ಸುದ್ದಿಮೂಲವಾರ್ತೆ
ಕೊಪ್ಪಳ,ಅ.26: ಅಳವಂಡಿ- ಬೆಟಗೇರಿ ಏತ ನೀರಾವರಿಯ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ವಿಳಂಭ ಮಾಡುತ್ತಿರುವದನ್ನು ಖಂಡಿಸಿ ಇಂದು ಅಳವಂಡಿ ಬೆಟಗೇರಿ ಏತ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಇಂದಿನಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಅಳವಂಡಿಯ ನಾಡಕಾರ್ಯಾಲಯದ ಮುಂದೆ ಪ್ರತಿಭಟನೆ ಆರಂಭಿಸಿದ ರೈತರು ಏತ ನೀರಾವರಿಗಾಗಿ ರೈತರ 131 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳಲಾಗಿದೆ. ರೈತರಿಗೆ ಭೂಮಿ ಪರಿಹಾರಕ್ಕಾಗಿ ಸರಕಾರದಿಂದ ಉಪವಿಭಾಗಾಧಿಕಾರಿಗಳ ಖಾತೆಗೆ 10.40 ಕೋಟಿ ರೂಪಾಯಿ ಜಮಾ ಆಗಿದೆ. ಆದರೂ ರೈತರಿಗೆ ಪರಿಹಾರ ನೀಡುತ್ತಿಲ್ಲ. ಜಿಲ್ಲಾಡಳಿತದ ಕಾಲಹರಣ ನೀತಿ ಖಂಡಿಸಿ ಹೋರಾಟ ಆರಂಭಿಸಿದ್ದು. ಪರಿಹಾರ ನೀಡುವವರೆಗೂ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಶರಣಪ್ಪ ಜಡಿ, ದೇವಪ್ಪ ಕಟ್ಟಿಮನಿ, ನಾಗಪ್ಪ ಸವಡಿ, ಭೀಮರಡ್ಡಿ ಗದ್ದಿಕೇರಿ, ಚಂದ್ರಪ್ಪ ಜಂತ್ಲಿ, ಗುರುಬಸವರಾಜ ಬೋಚನಳ್ಳಿ, ಮಲ್ಲಣ್ಣ ಯರಾಸಿ, ಮಾರುತಿ ತಳವಾರ, ಫಕೀರೇಶ ಕುರ್ತಕೋಟಿ, ಶೇಷರಡ್ಡಿ ಮಾದನೂರು, ವೆಂಕಣ್ಣ ಗ್ಯಾನಪ್ಪನವರ, ಚೆನ್ನಪ್ಪ ಮುತ್ತಾಳ, ಪರಪ್ಪ ನಾಗರಳ್ಳಿ. ರಮೇಶ ಭಾವಿಹಳ್ಳಿ ಸೇರಿ ಹಲವರಿದ್ದರು.