ಸುದ್ದಿಮೂಲ ವಾರ್ತೆ
ನೆಲಮಂಗಲ,ಅ.27: ರಾಜ್ಯದಲ್ಲಿ ಹುಲಿಯ ಉಗುರಿನ ಲಾಕೇಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಈ ನಡುವೆ ಬೆಂಗಳೂರು ಹೊರವಲಯ ನೆಲಮಂಗಲ ಅರಣ್ಯ ಅಧಿಕಾರಿಗಳು ದೂರಿನ ಹಿನ್ನೆಲೆ ನೆಲಮಂಗಲ ನಗರದ ಸಾಯಿಕೃಪ ಬಡಾವಣೆಯ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಉದ್ಯಮಿ ಚೇತನ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ್ದು ಚೇತನ್ ಸಚಿವ ಬೈರತಿ ಸುರೇಶ್ ಸಬಂದಿ ಎಂದು ತಿಳಿಯಲಾಗಿದೆ,
ಸಾರ್ವಜನಿಕರ ದೂರಿನ ಹಿನ್ನೆಲೆ ನೆಲಮಂಗಲ RFO ಶ್ರೀಧರ್ ನೇತೃತ್ವದ ತಂಡದ ಅಧಿಕಾರಿಗಳಿಂದ ದಾಳಿ ನಡೆಸಿ ಚೇತನ್ ಮನೆಯಲ್ಲಿ ಹುಲಿ ಉಗುರಿನ ಡಾಲರ್ ಗಾಗಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಹುಲಿ ಉಗುರಿನ ಡಾಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದ್ದು, ಮನೆ ಸರ್ಚ್ ವಾರೆಂಟ್ ನೊಂದಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಒಂದು ಲಾಕೇಟ್ ಅನ್ನ ವಶಕ್ಕೆ ಪಡೆದು ಪ್ರಯೋಗಕ್ಕೆ ಪರೀಕ್ಷೆಗಾಗಿ ಕಳಿಸುವುದಾಗಿ ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದು ನೋಟೀಸ್ ನೀಡಿದ್ದಾರೆ.