ಸುದ್ದಿಮೂಲ ವಾರ್ತೆ
ತುಮಕೂರು, ಅ.27 : ರಾಜ್ಯದಲ್ಲಿ 5.25ಲಕ್ಷ ಸರ್ಕಾರಿ ನೌಕರರಿದ್ದು, 2.50ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನು 5 ವರ್ಷದೊಳಗಾಗಿ ಈ ಎಲ್ಲಾ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
7ನೇ ವೇತನ ಆಯೋಗ ಸಂಬಂಧ ರಚಿಸಲಾಗಿರುವ ಸಮಿತಿಯು ನ. 23ರೊಳಗಾಗಿ ವರದಿ ನೀಡಿದ ನಂತರ ಇನ್ನುಳಿದ ಶೇ.23ರಷ್ಟು ವೇತನ ಸವಲತ್ತುಗಳನ್ನು ನೀಡಲು ಕ್ರಮವಹಿಸಲಾಗುವುದು. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎನ್ಪಿಎಸ್ನಿಂದ ಓಪಿಎಸ್ ಸಂಬಂಧ ರಚಿಸಲಾಗಿರುವ ಸಮಿತಿಯು ವರದಿ ನೀಡಿದ ನಂತರ ತಪ್ಪದೆ ನೀಡಿದ ಭರವಸೆಯಂತೆ ಎನ್ಪಿಎಸ್ನಿಂದ ಓಪಿಎಸ್ಗೆ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ರಾಜ್ಯದಲ್ಲಿ 2.60ಲಕ್ಷ ಹುದ್ದೆಗಳು ಖಾಲಿ ಇದ್ದು, ರಾಜ್ಯ ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಜನಪರ ಯೋಜನೆಗಳ ಲಾಭವನ್ನು ಕಟ್ಟಕಡೆಯ ಜನರಿಗೂ ಸಹ ತಲುಪಿಸಲು ಸರ್ಕಾರಿ ನೌಕರರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಸರ್ಕಾರಿ ನೌಕರರಿಗೆ 7ನೇವೇತನ ಆಯೋಗದ ಸವಲತ್ತುಗಳನ್ನು ಮುಂಬರುವ ಏಪ್ರಿಲ್ 22, 2024ರೊಳಗಾಗಿ ಒದಗಿಸಿಕೊಡಬೇಕು ಮತ್ತು ಎನ್.ಪಿ.ಎಸ್. ರದ್ದಾಗಬೇಕು. ಒಪಿಎಸ್ ಜಾರಿಯಾಗಬೇಕು. ಎಲ್ಲಾ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಸೌಲಭ್ಯ ದೊರಕಬೇಕು. ಇದರಿಂದಾಗಿ 6ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಗಳಿಗೆ ಅ ಎಂದರು.