ಸುದ್ದಿಮೂಲ ವಾರ್ತೆ
ದಾಬಸ್ ಪೇಟೆ, ಅ. 28 : ವಾಲ್ಮೀಕಿಯವರು ಬರೆದ ರಾಮಯಾಣ ಕೇವಲ ಕಥೆ ಅಲ್ಲ.ಅದು ಮನುಕುಲದ ಕಥೆ ಎಂದು ಸೋಂಪುರ ಗ್ರಾ. ಪಂ. ಸದಸ್ಯ ಜಿ.ಅಶೋಕ್ ತಿಳಿಸಿದರು.
ಸೋಂಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಮಹರ್ಷೀ ವಾಲ್ಮೀಕಿ ಜಯಂತಿಯನ್ನು ಆಚರಿಸಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿ ತಮ್ಮ ಕಾವ್ಯದಲ್ಲಿ ಕೌಟುಂಬಿಕ, ಸಾಮಾಜಿಕ ಮೌಲ್ಯಗಳ 24 ಸಾವಿರ ಶ್ಲೋಕಗಳನ್ನು ಕಟ್ಟಿಕೊಟ್ಟಿದ್ದಾರೆ. ವಿಶ್ವಕ್ಕೆ ಅಳಿಯದ ರಾಮಾಯಣ ಕಥೆಯನ್ನು ನೀಡಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ಇವರು ಸರ್ವಜನಾಂಗದ ಕಣ್ಣಣಿ, ಮಾನವೀಯ ಮೌಲ್ಯಗಳನ್ನು, ದೇಶಪ್ರೇಮ, ಪಿತೃವಾಕ್ಯ ಪರಿಪಾಲನೆ, ಸಹೋದರ ಅನುಬಂಧದ ಬಗ್ಗೆ ಹೇಗಿರಬೇಕು ಎಂಬುದರ ಬಗ್ಗೆ ಮಹಾಕಾವ್ಯದಲ್ಲಿ ಏಳೆ
ಏಳೆಯಾಗಿ ಹೇಳೆದಿದ್ದಾರೆ ಎಂದರು.
ಕಾರ್ಯದರ್ಶಿ ಎಚ್.ಹನುಮಂತರಾಜು, ಸದಸ್ಯರಾದ ಶಿಲ್ಪ ರಂಗಸ್ವಾಮಿ, ಬಿಲ್ ಕಲೆಕ್ಟರ್ ರಾಮಕೃಷ್ಣಪ್ಪ, ಬಸಂತ ಕುಮಾರ, ಕೃಷ್ಣಮೂರ್ತಿ, ಮಂಜುನಾಥ ಸಿಬ್ಭಂದಿ ನರಸಿಂಹಮೂರ್ತಿ, ಶ್ರೀನಿವಾಸ, ಗೋಪಾಲಯ್ಯ, ಜಯಮ್ಮ ಇದ್ದರು.