ಸುದ್ದಿಮೂಲವಾರ್ತೆ
ಕೊಪ್ಪಳ. 30: ರೈತರನ್ನು ಉತ್ಪಾದಕ ಉದ್ಯಮಿಯನ್ನಾಗಿ ಮಾಡುವ ಉದ್ದೇಶದಿಂದ ಕೊಪ್ಪಳದಲ್ಲಿ ಅಯೋದ್ಯ ಕ್ರಾಪ್ ಆಕಾಡೆಮಿ ಸ್ಥಾಪನೆಯಾಗಲಿದೆ ಎಂದು ಸಂಸ್ಥಾಪಕ ಸಿಇಒ ಮಹಾಂತೇಶ ಪಾಟೀಲ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ರೈತರೊಂದಿಗೆ ನಿರಂತರ ಸಂಪರ್ಕ ಹೊಂದಿ. ರೈತರನ್ನು ಡಿಜಿಟಲಿಕರಣ ಮಾಡಿ ಉದ್ಯಮಿಯಾಗಿ ಬೆಳೆಸುವ ಬ್ರಾಂಡ್ ತಯಾರಿಸಲಾಗುವುದು ಎಂದು ಹೇಳಿದರು.
ಅವರು ದಿನಗಳನ್ನು ಸಂಸ್ಕರಿಸಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಶೇಂಗಾ ಬೆಳೆಗೆ ಹೆಚ್ಚಿಸುವ ಉದ್ದೇಶ. ಶೇಂಗಾವು ಅಮೆರಿಕಾದಲ್ಲಿ ಪ್ರತಿ ಎಕರೆಗೆ 18 ಕ್ವಿಂಟಾಲ್ ಮಾದರಿಯಲ್ಲಿ ರಾಜ್ಯದಲ್ಲಿ ಉತ್ಪಾದನೆ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಪ್ರತಿ 25 ಜನರಿಂದ 100 ಜನರ ಗುಂಪುಗಳನ್ನು ಕಟ್ಟಿ, ಶೇಂಗಾ, ಉಳ್ಳಾಗಡ್ಡಿ, ಕಡಲೆ ಬೆಳೆಗಾರರ ಗುಂಪು ತಯಾರಿಸಿ ಅವರಿಗೆ ಎಲ್ಲಾ ಹಂತದಲ್ಲಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಈ ಕಾರಣಕ್ಕೆ ಕೊಪ್ಪಳದಲ್ಲಿ ಆಯೋದ್ಯಾ ಕ್ರಾಪ್ ಆಕಾಡೆಮಿ ಕಚೇರಿ ಆರಂಬಿಸಲಾಗುವುದು. ನ 1 ರಂದು ಉದ್ಘಾಟಿಸಲಾಗಯವುದು. ನಿವೃತ್ತ ಅರವಿಂದ ದಳವಾಯಿಯವರು ಉದ್ಘಾಟಿಸಲಿದ್ದಾರೆ. ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಸಾನಿದ್ಯ ವಹಿಸಲಿದ್ದಾರೆ. ಬಸವರಾಜ ಪಾಟೀಲ ಸೇಡಂ. ಮನೋಹರ ಮಸ್ಕಿ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಳಿಗಾರ. ವಿಜಯಮಹಾಂತೇಶ ಬಳಿಗಾರ ಇದ್ದರು.