ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.30; ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಶಭೆಯ ಸಂದೇಶಗಳನ್ನು ಸಾರಲು ಮತ್ತು ಎಲ್ಲರನ್ನೊಳಗೊಂಡಂತೆ ಪ್ರಧಾನಿ ನರೇಂದ್ರಮೋದಿ ಅವರ ಸಂದೇಶಗಳನ್ನು ಸಾರಲು ಅಕ್ಟೋಬರ್ 28 ರಂದು ಮುಂಬೈಯಿನಿಂದ ಆರಂಭಿಸಿದ್ದ ಜಿ20 ನವೋದ್ಯಮ ಕುರಿತ ರೈಲು ಯಾತ್ರೆ ಬೆಂಗಳೂರು ತಲುಪಿದೆ. ಜಿ20 ರಾಷ್ಟ್ರಗಳಿಂದ 70 ಪ್ರತಿನಿಧಿಗಳು ಸೇರಿ ಬೆಂಗಳೂರು ತಲುಪಿದ 450 ಪ್ರತಿನಿಧಿಗಳು 8 ಸಾವಿರ ಕಿಲೋಮೀಟರ್ ಸಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಈ ಪ್ರತಿನಿಧಿಗಳು 150ಕ್ಕೂ ಅಧಿಕ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು.
ಜಾಗೃತಿ ಯಾತ್ರಾದ ಸಂಸ್ಥಾಪಕರಾದ ಶಶಾಂಕ್ ಮಣಿ ಮಾತನಾಡಿ, “”ಯಾತ್ರೆ ಮತ್ತು ಯಾತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ ಆಧುನಿಕ ಭಾರತದ ಪ್ರತಿಬಿಂಬವಾಗಿದ್ದಾರೆ. ಇದು ತನ್ನ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲು ಕಾಯುತ್ತಿರುವ ನವ ಭಾರತವಾಗಿದೆ. 2 ಮತ್ತು 3 ನೇ ಶ್ರೇಣಿಯ ನಗರಗಳ ಯಾತ್ರಿಗಳು ದೇಶ ತನ್ನ ಯುವಕರಿಗೆ ಒದಗಿಸುವ ಅವಕಾಶಗಳ ಮೊದಲ ಅನುಭವವನ್ನು ಪಡೆಯುತ್ತಾರೆ” ಎಂದು ಹೇಳಿದರು.
ಎಸ್.ಬಿ.ಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, “ನಾವು ಜಿ20 ನವೋದ್ಯಂ 20ಯಾತ್ರದ ಭಾಗವಾಗಲು ಸಂತಸವಾಗುತ್ತಿದೆ. ಮಹಿಳೆಯರನ್ನೊಳಗೊಂಡಂತೆ ಉದ್ಯಮಶೀಲತೆಯನ್ನು ದೇಶದಲ್ಲಿ ಬೆಳೆಸಲು ಒತ್ತು ನೀಡಲಾಗುತ್ತಿದೆ. ಇದರಿಂದ ಸಾಮಾಜಿಕ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ” ಎಂದು ಹೇಳಿದರು.