ಸುದ್ದಿಮೂಲವಾರ್ತೆ
ಕೊಪ್ಪಳ,ಅ.31:ರಾಜ್ಯ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯಲು ಅರ್ಜಿ ಹಾಕಿ ಯತ್ನ ಮಾಡುವವರು ಹೆಚ್ಚು. ಈ ಮಧ್ಯೆ ಅರ್ಜಿಯನ್ನು ಹಾಕದೆ ಇರುವ ಸಮಾಜ ಸೇವಕಿ ಕೊಪ್ಪಳ ತಾಲೂಕಿನ ಕುಣಿಕೇರಿಯ ಹುಚ್ಚಮ್ಮ ಚೌದ್ರಿಗೆ ನೀಡಿದೆ. ಪ್ರಶಸ್ತಿಯ ಬಗ್ಗೆ ಗೌರವದ ಬಗ್ಗೆ ಯಾವುದು ಗೊತ್ತಿಲ್ಲದ ಅನಕ್ಷರಸ್ಥ ಅಜ್ಜಿ ಹುಚ್ಚಮ್ಮ ಚೌದ್ರಿಗೆ ಸಂದಿದೆ. ಹುಚ್ಚಮ್ಮ ಚೌದ್ರಿಯ ಸಮಾಜ ಸೇವೆಗೆ ಅತಿ ಗೌರವ ಮನ್ನಣೆ ಸಿಕ್ಕಿದೆ.
ಕೊಪ್ಪಳ ತಾಲೂಕಿನ ಕುಣಿಕೇರಿ ಹುಚ್ಚಮ್ಮ ಚೌದ್ರಿ ಎಂಬ ಸುಮಾರು 68 ವರ್ಷದ ಅಜ್ಜಿ. ಆಕೆಗೆ ಮಕ್ಕಳಾಗಲಿಲ್ಲ. ಇರುವ ಭೂಮಿ ಕೇವಲ 2 ಎಕರೆ ಕುಣಿಕೇರಿ ಸುತ್ತಮುತ್ತ ಬೃಹತ್ ಕಾರ್ಖಾನೆಗಳು ಬಂದಿವೆ. ಇಲ್ಲಿಯ ಭೂಮಿಗೆ ಬಂಗಾರದ ಬೆಲೆ.ಇಂಥ ಸಂದರ್ಭದಲ್ಲಿ ತನ್ನ ಬಳಿಯಲ್ಲಿದ್ದ ಎರಡು ಎಕರೆ ಭೂಮಿಯನ್ನು ತನ್ನೂರಿನ ಶಾಲೆಗೆ ದಾನವಾಗಿ ನೀಡಿದ್ದಾರೆ. ತನ್ನ ಜೀವನಕ್ಕೆ ಇದೇ ಶಾಲೆಯಲ್ಲಿ ಬಿಸಿಯೂಟ ತಯಾರಕರಳಾಗಿ ಕೆಲಸ ಮಾಡುತ್ತಿದ್ದಳು.
ತನಗೆ ಮಕ್ಕಳು ಇಲ್ಲ ಎಂಬ ಕೊರಗನ್ನು ತನ್ನೂರಿನ ಶಾಲಾ ಮಕ್ಕಳು ತನ್ನ ಮಕ್ಕಳೆಂದು ತಿಳಿದು ಸಂತೋಷದಿಂದ ಇದ್ದಾಳೆ. ಹುಚ್ಚಮ್ಮನಿಗೆ ನಾಡಿನ ಮಠಗಳು. ಸಂಘ ಸಂಸ್ಥೆಗಳು ತಾನಾಗಿಯೇ ಹುಡುಕಿಕೊಂಡು ಬಂದು ಪ್ರಶಸ್ತಿ ನೀಡಿ ಗೌರವಿಸಿವೆ. ಈ ಮಧ್ಯೆ ರಾಜ್ಯ ಸರಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯೂ ಹುಡುಕಿಕೊಂಡು ಬಂದಿದೆ. ಅಜ್ಜಿ ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ. ತನಗೆ ಪ್ರಶಸ್ತಿ ಎಂದರೆ ಏನು ಎಂಬ ಬಗ್ಗೆ ಕಲ್ಪನೆಯೂ ಇಲ್ಲ. ಇಂಥವರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು ಖುಷಿಯಾಗಿದೆ.
ಸರಕಾರ ನೀಡುವ ನೀಡುವ ಪ್ರಶಸ್ತಿ ಹಣ ತನ್ನ ಮುಂದಿನ ಉಪಜೀವನಕ್ಕಾಗಿ ಆಗುತ್ತದೆ ಎಂದು ಹೇಳುವ ಅಜ್ಜಿ ನವಂಬರ್ ಒಂದರಂದು ಮುಖ್ಯಮಂತ್ರಿಗಳು ಪ್ರಶಸ್ತಿ ಪಡೆಯುತ್ತಿದ್ದಾರೆ. ಇದು ಖುಷಿಯಾಗಿದೆ ಎಂದು ಹುಚ್ಚಮ್ಮ ಹೇಳಿದರು.