ಸುದ್ದಿಮೂಲ ವಾರ್ತೆ
ಸಿರುಗುಪ್ಪ. ಅ-31: ತಾಲೂಕಿನ ತೆಕ್ಕಲಕೋಟೆಯ ರೈತರು ಮಂಗಳವಾರ ನಗರದ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿ ತಹಶೀಲ್ದಾರರಿಗೆ ಮನವಿ ನೀಡಿದರು.
ಬಾಗೇವಾಡಿ ಕಾಲುವೆಯ ಕೆಳಭಾಗದ ರೈತರುಗಳು ತಹಶೀಲ್ದಾರರಿಗೆ ಮನವಿ ನೀಡಿದ್ದು ಮನವಿಯಲ್ಲಿ ನಾವು ಅಧೀಕೃತ ನೀರಾವರಿ ಸೌಲಭ್ಯ ಹೊಂದಿರುವ ರೈತರಾಗಿದ್ದು ನಮ್ಮ ಮೇಲ್ಭಾಗದಲ್ಲಿ ಮೀನು ಸಾಕಾಣಿಕೆಯವರು ಅನಧಿಕೃತವಾಗಿ ಕಳ್ಳತನದಿಂದ ಮುಖ್ಯ ಕಾಲುವೆಗೆ ಅಡ್ಡಲಾಗಿ ವಡ್ಡುಗಳನ್ನು ಹಾಕಿ 100ಕ್ಕೂ ಹೆಚ್ಚು ಡೀಜಲ್ ಪಂಪ್ ಸೆಟ್ಟುಗಳಿಂದ ಮತ್ರು ಕೆಲವರು ಕಾಲುವೆಗೆ ರಾತ್ರಿವೇಳೆಯಲ್ಲಿ ಕಿಂಡಿ ಕೊರೆದು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿರುವುದರಿಂದ ನಮಗೆ ನೀರು ಬರುತ್ತಿಲ್ಲ.
ಅಧಿಕಾರಿಗಳಾದ ಸುರೇಶ್ ಪೂಜಾರ್ ಇವರಿಗೆ ಕಳೆದ ಅನೇಕ ವರ್ಷಗಳಿಂದ ದೂರು ಸಲ್ಲಿಸುತ್ತಿದಗದರೂ ಸೂಕ್ತ ಕ್ರಮ ವಹಿಸುತ್ತಿಲ್ಲ. ಮೇಲಾಧಿಕಾರಿಗಳಿಗೆ ತಿಳಿಸಿ ಎನ್ನತ್ತಾರೆ. ಪೊಲೀಸರು ಗಸ್ತು ತಿರುಗುವಾಗ ವ್ಯಕ್ತಿಗಳು ತಪ್ಪಿಸಿಕೊಂಡಿದ್ದು ದ್ವಿಚಕ್ರ ವಾಹನಗಳು ಸಿಕ್ಕಿವೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಸಹಾಯಕ ಆಯುಕ್ತರು ಆಗಮಿಸಿ ಅನಧಿಕೃತ ಪಂಪ್ ಸೆಟ್ಟುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ತಾವುಗಳು ಸಹ ಸಂಭಂಧಿತ ಅಧಿಕಾರಿಗಳೊಂದಿಗೆ ಆಗಮಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿದರು.
ಈವೇಳೆ ರೈತರು ಕಾಳುಕಟ್ಟದೆ ಒಣಗಿಹೋಗುತ್ತಿರುವ ಭತ್ತದ ಪೈರಿನೊಂದಿಗೆ ಆಗಮಿಸಿ ತಹಶೀಲ್ದಾರರಿಗೆ ಪ್ರತ್ಯಕ್ಷವಾಗಿ ತೋರಿಸಿ ಈಬೆಳೆಯನ್ನು ಉಳಿಸಿಕೊಡುವಂತೆ ಇಲ್ಕವೇ ಸಂಪೂರ್ಣ ನಷ್ಠ ಪರಿಹಾರ ಕೊಡುವಂತೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು
ಈ ಮನವಿ ಸಲ್ಲಿಕೆ ವೇಳೆ ಬಂದೇನವಾಜ್, ಜ್ಞಾನೇಂದ್ರ ಸ್ವಾಮಿ, ಬೆಳಗಲ್ ಮಲ್ಲಿಕಾರ್ಜುನ ಗೌಡ, ಜ್ಞಾನಾನಂದ ಸ್ವಾಮಿ ಎಸ್ ನಾಗರಾಜ, ಕೇಶವಪ್ಪ, ವೀರೇಶ್ , ಪಾಂಡುರಂಗ, ಭಂಡಾರಿ, ಷಾಶಾವಲಿ, ಬಿ ಹೇಮಣ್ಣ, ಹನುಮಣ್ಣ, ಜಿ ಬಸವರಾಜ, ಗಾದಿಲಿಂಗ, ಹುಸೇನಿ, ನಾಗಪ್ಪ, ವೀರೇಶ, ಭೀಮೇಶ ಸೇರಿದಂತೆ ಅನೇಕರು ಇದ್ದರು