ಸುದ್ದಿಮೂಲ ವಾರ್ತೆ
ಮೈಸೂರು, ನ. 2 : ಇಲ್ಲಿನ ಅಟ್ಲಾಂಟಿಕ್ ಸ್ಪಿನಿಂಗ್ ಮಿಲ್ ಆಡಳಿತ ಮಂಡಳಿ ನ್ಯಾಯಾಂಗ ನಿಂದನೆ ಮಾಡಿರುವುದಲ್ಲದೆ ಕಾರ್ಮಿಕರಿಗೆ ಪರಿಹಾರ ಬರುವ ವಿಚಾರದಲ್ಲಿ ವಿಳಂಬ ಮಾಡುವ ಉದ್ದೇಶದಿಂದ ಮತ್ತೆ ಪ್ರಕರಣ ದಾಖಲಾಗುವಂತೆ ಮಾಡಿ ವಿರೋಧಿಸಿ ಶ್ರೀಕೃಷ್ಣರಾಜೇಂದ್ರ ಮಿಲ್ಸ್ ಕಾರ್ಮಿಕರು ಪ್ರತಿಭಟಿಸಿದರು.
ಕಾರ್ಮಿಕರಿಗೆ ಶ್ರೀಕೃಷ್ಣರಾಜೇಂದ್ರ ಮಿಲ್ಸ್ 1928 ರಲ್ಲಿ ಶ್ರೀಕೃಷ್ಣರಾಜೇಂದ್ರ ಒಡೆಯರ್ ರವರು ಸಾರ್ವಜನಿಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸ್ಥಾಪಿಸಿದ ಉದ್ಯಮವಾಗಿದೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿ ಭೇಟಿ ನೀಡಿದ ಇತಿಹಾಸ ಹೊಂದಿದ್ದು, ಕಾರ್ಖಾನೆ ಹಲವಾರು ಕಾರಣದಿಂದಾಗಿ 1984 ರಲ್ಲಿ ಮುಚ್ಚಲ್ಪಟಿತು. ಅಂದಿನಿಂದ ಇಂದಿನವರೆಗೂ ಈ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರಿಗೆ ಪರಿಹಾರ ದೊರೆತಿಲ್ಲ ಎಂದು ಹೇಳಿದರು.
ಈ ಕಾರ್ಖಾನೆ 1991 ರಲ್ಲಿ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕೆಎಸ್ ಐಐಡಿಸಿ ರವರ ನೇತೃತ್ವದಲ್ಲಿ 1994 ರಲ್ಲಿ ಅಟ್ಲಾಂಟಿಕ್ ಸ್ಪಿನ್ನಿಂಗ್ ರವರಿಗೆ 7.10 ಕೋಟಿರೂಗಳಿಗೆ 3 ತಿಂಗಳಿನಲ್ಲಿ ಕಾರ್ಖಾನೆಯನ್ನು ಪುನರಾರಂಭಿಸಿ ಕಾರ್ಮಿಕರಿಗೆ ಉದ್ಯೋಗ ನೀಡುವ ಷರತ್ತಿನ ಮೇಲೆ ಅಡಮಾನ ಮಾಡಲಾಯಿತು. ಅದಾದ ನಂತರ ಬೆಳವಣಿಗೆಯಲ್ಲಿ ಮತ್ತೆ ಕಾರ್ಮಿಕರಿಗೆ ಅನ್ಯಾಯ ಮಾಡಲಾಯಿತು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಇದಾದ 25 ವರ್ಷಗಳ ನಂತರ ಕೆ.ಆರ್.ಮಿಲ್ಸ್ ಆವರಣಕ್ಕೆ ಸ್ಥಳ ಪರಿಶೀಲನೆಗಾಗಿ 3 ತಿಂಗಳ ಹಿಂದೆ ಎರಡು ಬಾರಿ ಆಗಮಿಸಿದ ಹಿನ್ನೆಲೆಯಲ್ಲಿ ಜುಲೈನಲ್ಲಿ 8.2 ಎಕರೆ ಪ್ರಕರಣ ಅಂತಿಮಗೊಂಡು ಲಿಕ್ವಿಡೇಟರ್ ಪರ ಅಂತಿಮ ಆದೇಶ ದೊರೆತಿದೆ. ಆದರೂ ಮತ್ತೆ ನ್ಯಾಯಾಲಯಕ್ಕೆ ಹೋಗಲಾಗಿದೆ. ಈಗ ಆಗಿರುವ ವಿಳಂಬವನ್ನು ಪರಿಗಣಿಸಿ ನೀಡಿರುವ ತೀರ್ಪನ್ನೇ ಅಂತಿಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಸಿದ್ದಲಿಂಗಪುರದ ಹಿರಿಯ ನಾಗರಿಕ ಕಾರ್ಮಿಕ ಒಕ್ಕೂಟ ಹಿರಿಯನಾಗರಿಕ ಒಕ್ಕೂಟದ ಎಚ್.ಆರ್.ನಾಗರಾಜು, ಲೇಟ್ ಶಂಕರ್ ಮೂರ್ತಿ, ಸ್ವಾಮಿ.ಎನ್, ರಘು ಎಸ್ ವೈ, ಅಕ್ರಂ, ಚಂದ್ರಣ್ಣ, ಮಹದೇವು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.