ಸುದ್ದಿಮೂಲ ವಾರ್ತೆ
ಚಿಂತಾಮಣಿ, ನ. 02 : ಪರಿಶಿಷ್ಟ ಜಾತಿಯ ಹಾಸ್ಟೆಲ್ ಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ಹಾಸ್ಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಆಯುಷ್ ಅಭಿಯಾನ ಅಡಿಯಲ್ಲಿ ಎಸ್ ಸಿ ಎಸ್ ಪಿ ಕಾರ್ಯಕ್ರಮದಡಿ 162 ವಿದ್ಯಾರ್ನಿಯರು, ಐವರು ಸಿಬ್ಬಂದಿಗೆ ಆರೋಗ್ಯದ ಬಗ್ಗೆ ಮಾಹಿತಿಯನ್ನು ತಿಳಿಸಿ ಅವರಿಗೆ ಆಯುಷ್ ಇಲಾಖೆ ವತಿಯಿಂದ ಔಷಧಿಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ್, ಡಾ.ಅನಿಲ್, ಡಾ. ದೀಪ ಮತ್ತು ಇಲಾಖೆಯ ಸಿಬ್ಬಂದಿಗಳಾದ ನಾಗೇಂದ್ರ ಕುಮಾರ್, ಮಂಜುನಾಥ್, ಅರುಣ್, ಕಾಶಿನಾಥ್ ಉಪಸ್ಥಿತರಿದ್ದರು.