ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ನ.4:ಝೀಕಾ ವೈರಸ್ ಪತ್ತೆಯಾದ ತಲಕಾಯಬೆಟ್ಟ ಗ್ರಾಮಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಭೇಟಿ ನೀಡಿ, ಆತಂಕದಲ್ಲಿದ್ದ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಝೀಕಾ ವೈರಸ್ ಆತಂಕದಲ್ಲಿದ್ದ ತಲಕಾಯಲಬೆಟ್ಟ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್ ,ಶಿಡ್ಲಘಟ್ಟ ಕ್ಷೇತ್ರದಲ್ಲಿ ಝೀಕಾ ವೈರಸ್ ಪತ್ತೆಯಾಗಲು ತಲಕಾಯಲಕಲಬೆಟ್ಟ ಗ್ರಾಮಲ್ಲಿರುವ ಅಸ್ವಚ್ಚತೆ ಕಾರಣ ,ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಇಲ್ಲ ಹಾಗಾಗಿ ತಲಕಾಯಲಬೆಟ್ಟದ ಪಕ್ಕದಲ್ಲೇ ಹರಿಯುವ ಪಾಲಾರ್ ನದಿ ನೀರು ನಿಂತಲ್ಲೇ ನಿಂತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿದೆ. ಕೂಡಲೇ ಸೊಳ್ಳೆಗಳ ನಿಯಂತ್ರಣ ಮಾಡಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಶಾಸಕ ಬಿ.ಎನ್ ರವಿಕುಮಾರ್ ಜೊತೆ ತಲಕಾಯಲಕೊಂಡ ಗ್ರಾಮಕ್ಕೆ ಬೇಟಿ ನೀಡಿದ ಡಿ ಎಸ್ ಹಾಗು ಚಿಕ್ಕಬಳ್ಳಾಪುರ ಆರೋಗ್ಯ ಅಧಿಕಾರಿಗಳ ಮಹೇಶ್ ಕುಮಾರ್ , ಶಿಡ್ಲಘಟ್ಟ ತಾಲ್ಲೂಕು ವೈದ್ಯಕೀಯ ಸಿಬ್ಬಂದಿ ಗ್ರಾಮಪಂಚಾಯ್ತಿ ಸದ್ಯಸ್ಯರಿಗೆ ಹಾಗು ಅಧಿಕಾರಿಗಳಿಗೆ ಸೊಳ್ಳೆ ನಿರ್ಮೂಲನೆಗಾಗಿ ಕ್ರಮಗಳನ್ನು ಸೂಚನೆ ನೀಡಿದ್ದೇವೆ. ವೈರಸ್ ಬೇರೆ ಪಂಚಾಯ್ತಿಗಳಿಗೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ದೇಶನ ನೀಡಿದ್ದಾರೆ.
ಒಟ್ಟಾರೆ ಜಿಲ್ಲೆಯ ಜನ ಝೀಕಾ ವೈರಸ್ ನಿಂದ ಆತಂಕಕ್ಕೆ ಒಳಗಾಗಿದ್ದು, ಪ್ರತಿನಿತ್ಯ ವೈದ್ಯಧಿಕಾರಿಗಳು ಆಶಾ ಕಾರ್ಯಕರ್ತರು ,ಗ್ರಾಮಪಂಚಾಯ್ತಿ ಸಿಬ್ಬಂದಿ ಮನೆ ಮನೆಗೆ ಬೇಟಿ ನೀಡಿ ಸೊಳ್ಳೆಗಳ ನಿರ್ಮೂಲನೆ ಕುರಿತು ಅರಿವು ಮೂಡಿಸುತಿದ್ದಾರೆ ,ವಿಶೇಷವಾಗಿ ಗರ್ಭಿಣಿ ಮಹಿಳೆಯರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡುತಿದ್ದಾರೆ.
ಇದೇ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಮೂರ್ತಿ, ದೇವರಾಜ್,ಪಿಡಿಓ ಶ್ರೀನಿವಾಸ್, ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಇನ್ನು ಮುಂತಾದವರು ಹಾಜರಿದ್ದರು.
ಭಯಬೇಡ, ಮುಂಜಾಗ್ರತೆವಹಿಸಿ: ಮುನಿರಾಜ
ಝೀಕಾ ವೈರಸ್ ಕಂಡು ಬಂದಿರುವಂತಹ ಪ್ರದೇಶಗಳಲ್ಲಿ ಮೊದಲಿಗೆ ಸ್ವಚ್ಛತೆಯನ್ನು ಕಾಪಾಡಲು ಮೊದಲ ಆದ್ಯತೆ ನೀಡಲಾಗುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುವಂತಹ ಸ್ಥಳಗಳಾದ ಚರಂಡಿ, ಮೋರಿ, ನೀರಿನ ಟ್ಯಾಂಕ್ಗಳ ಬಳಿ ನೀರು ನಿಲ್ಲದಂತೆ ಹಾಗೂ ತಮ್ಮ ಮನೆಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ತಿಳಿಸಿದರು.
ತಾಲ್ಲೂಕಿನ ತಲಕಾಯಾಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟರಮಣ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಝೀಕಾ ವೈರಸ್ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಆರೋಗ್ಯ ಶಿಕ್ಷಣದ ಐಇಸಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಝೀಕಾ ವೈರಸ್ ಕೇವಲ ಸೊಳ್ಳೆಗಳ ಎಂಟಮಾಲಾಜಿಸ್ಟ್ ಎಂಬ ಕೀಟದಿಂದ ಹರಡುವಂತಾಗಿದೆ ಎಂಬುವುದು ತಜ್ಞರಿಂದ ಮಾಹಿತಿ ಲಭ್ಯವಾಗಿರುತ್ತದೆ. ಯಾರೂ ಸಹ ಆತಂಕ ಪಡದೇ, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತೆಯನ್ನು ಮಾಡಿಕೊಂಡರೇ ಉತ್ತಮ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ರಥವು ತಾಲೂಕಿನ ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ, ವೆಂಕಟಾಪುರ ಗ್ರಾಮದಲ್ಲಿ ಸಂಚರಿಸಿ ಜನರಿಗೆ ಝೀಕಾ ವೈರಸ್ ಜ್ವರದ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ತಾಲ್ಲೂಕು ವೈದ್ಯಾಧಿಕಾ ವೆಂಕಟೇಶ್ ಮೂರ್ತಿ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ ಹಾಜರಿದ್ದರು.