ಸುದ್ದಿಮೂಲ ವಾರ್ತೆ
ಬೆಂಗಳೂರು,ನ.05: ಪುಲಿಕೇಶಿನಗರ ದೊಡ್ಡಗುಂಟಾದಲ್ಲಿ ಅದ್ಧೂರಿಯಾಗಿ ದಸರಾ ಮಹೋತ್ಸವ ನಡೆಯಿತು.
ಇಲ್ಲಿ ನಡೆದ ದಸರಾ ಹಬ್ಬದ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕಳೆದ ಅರವತ್ತು ವರ್ಷಗಳಿಂದ ಪುಲಕೇಶಿನಗರದ ಕಾಕ್ಸ್ ಟೌನ್ ನಲ್ಲಿ ದಸರ ನಡೆಸಲಾಗುತ್ತದೆ.
ಮೈಸೂರು ದಸರಾ ನಡೆದ ಒಂದು ವಾರಕ್ಕೆ ಇಲ್ಲಿ ದಸರಾ ಹಬ್ಬ ನಡೆಯುತ್ತೆ. ಮೆರವಣಿಗೆಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ತೇರುಗಳು ಇಲ್ಲಿ ಸಾಗುತ್ತವೆ. ಏರಿಯಾದಲ್ಲಿ ಕಳೆದ ರಾತ್ರಿ ಹಬ್ಬ ಜೋರಾಗಿತ್ತು. ತೇರುಗಳನ್ನು ಸಿಂಗಾರ ಮಾಡಿ ಮೆರೆವಣಿಗೆ ಮಾಡಲಾಗಿದೆ. ಸೇರಿದ್ದ ಜನರು ಡೋಲು ಮತ್ತು ಬ್ಯಾಂಡ್ ಸೆಟ್ ಗೆ ಭರ್ಜರಿ ಸ್ಟೆಪ್ ಹಾಕಿದರು.
ದಸರಾ ಉತ್ಸವ ಮುಗಿಯುವ ವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯು ನಿಷೇಧಾಜ್ಞೆ ಜಾರಿಗೊಳಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು.