ಸುದ್ದಿಮೂಲ ವಾರ್ತೆ
ಮೈಸೂರು, ನ.6 : ಬರುವ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಒಮ್ಮೆ ರೈತರ ಸಾಲ ಮನ್ನಾ ಮಾಡುವ ಮತ್ತು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಮಾಡುವವರಿಗೆ ಬೆಂಬಲ ನೀಡುವ ಬಗ್ಗೆ ಸೋಮವಾರ ದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಚಿಂತನೆ ನಡೆಸಲಾಯಿತು.
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ರೈತ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸುವ, 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5ಸಾವಿರ ಪಿಂಚಣಿ ನೀಡುವವರಿಗೆ ಬೆಂಬಲ ಬಗ್ಗೆ ಚರ್ಚಿಸಿ, ಕೃಷಿಪಂಪ್ ಸೆಟ್ ವಿದ್ಯುತ್ ಖಾಸಗಿಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈ ಬಿಡುವಂತೆ ಒತ್ತಾಯಿಸಲಾಯಿತು.
ಕರ್ನಾಟಕದಿಂದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರೈತ ಕುರುಬೂರು ಶಾಂತಕುಮಾರ್, ಧರ್ಮರಾಜ್ ,ದೇವನೂರು ವಿಜೇಂದ್ರ ಚುಂಚರಾಯನಹುಂಡಿ ಗಿರಿ, ಮಹದೇವಸ್ವಾಮಿ, ಪಂಜಾಬ್ ಜಗಜಿತ್ ಸಿಂಗ್ ದಲೈವಾಲಾ, ಮಧ್ಯ ಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್, ಕೇರಳ ಕೆ ವಿ ಬಿಜು, ಗುಜರಾತಿನ ಜೆ ಕೆ ಪಟೇಲ್ಉತ್ತರ ಪ್ರದೇಶ ಒರಿಸ್ಸಾ ಆರುಣಕುಮಾರ ಹಿಮಾಚಲ ಪ್ರದೇಶ ಮಹಾರಾಷ್ಟ್ರ ಬಿಹಾರ್ ಮುಂತಾದ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು.