ಸುದ್ದಿಮೂಲ ವಾರ್ತೆ
ಬೆಂಗಳೂರು,ನ.7; ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಚಂದ್ರೇಗೌಡ ಅವರು ರಾಜಕಾರಣದಲ್ಲಿ ಬಹಳ ದೀರ್ಘಕಾಲ ಇದ್ದವರು. ಕಾಂಗ್ರೆಸ್ ಬಿಟ್ಟು ಜನತಾ ಪಕ್ಷ ಸೇರಿದ್ದರು. ವಿಧಾನಸಭಾಧ್ಯಕ್ಷರಾಗಿದ್ದರು,ವಿವಿಧಪಕ್ಷದ ನಾಯಕರಾಗಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಕಾನೂನು ಸಚಿವ ರಾಗಿದ್ದರು. ಬಿಜೆಪಿಗೆ ಸೇರಿ ಸಂಸದರಾಗಿದ್ದರು. ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಅತ್ಯಂತ ಹಿರಿಯ ಹಾಗೂ ಬುದ್ದಿವಂತ ರಾಜಕಾರಣಿಯಾಗಿದ್ದ ಅವರು ಸಾಹಿತ್ಯದ ಬಗ್ಗೆಯೂ ಅಪಾರವಾಗಿ ಓದಿ ತಿಳಿದುಕೊಂಡಿದ್ದರು. ಅವರು ನಿಧನರಾಗಿರುವುದು ಕರ್ನಾಟಕದ ರಾಜಕಾರಣಕ್ಕೆ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.