ಸುದ್ದಿಮೂಲ ವಾರ್ತೆ
ಮೈಸೂರು, ನ.09:ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದ ಆನೇಕ ಕಡೆ ಹಾನಿ ಆಗಿರುವ ಪ್ರದೇಶಗಳಿಗೆ ಶಾಸಕ ಕೆ ಹರೀಶ್ ಗೌಡ ಭೇಟಿ ನೀಡಿ, ನಿವಾಸಿಗಳಿಂದ ಸಮಸ್ಯೆ ಆಲಿಸಿದರು.
ನಗರದ ಅನೇಕ ಕಡೆ ಮನೆಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದ್ದು, ಮೇಟಗಳ್ಳಿಯ ವಾರ್ಡ್ ನಂ. 7ರ ಬಿಎಂಶ್ರೀ ನಗರ, ಲೋಕನಾಯಕ ನಗರ ಮತ್ತು ಬೃಂದಾವನ ಬಡಾವಣೆಯ ಕೆಲ ಮನೆಗಳಿಗೆ ಮಳೆ ನೀರು ಮತ್ತು ಚರಂಡಿ ನೀರು ನುಗ್ಗಿದೆ. ಕೂಡಲೇ ನನಗೆ ಪಾಲಿಕೆ ಸದಸ್ಯರು ಮಾಹಿತಿ ನೀಡಿದರು. ಅಧಿಕಾರಿಗಳ ಜೊತೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.