ಸುದ್ದಿಮೂಲ ವಾರ್ತೆ
ಹೊಸಕೋಟೆ, ನ 12 : ನಗರದ ಕೆ.ಆರ್ ರಸ್ತೆ,ಹೂಮಂಡಿ ಸರ್ಕಲ್, ಫ್ಲೈಓವರ್ ವರೆಗೂ ದೀಪಾವಳಿ ಹಬ್ಬಕ್ಕೆ ಅಂಗಡಿಗಳಲ್ಲಿ ಅಲಂಕಾರಿಕ ವಸ್ತುಗಳಾದ.ನೋಮುದಾರಗಳು, ಮಣ್ಣಿನಿಂದ ಮಾಡಿದ ದೀಪದ ಹಣೆತೆಗಳು,ಹೂವ್ವು ಹಣ್ಣುಗಳು ,ಬೂದಕುಂಬಳ ಕಾಯಿಗಳು,ಬಾಳೆ ಹಣ್ಣುಗಳ ರಾಶಿ ಕಂಡುಬಂತು.
ಹಬ್ಬ ಬಂದರೆ ಸಾಕು ಹೊಸಕೋಟೆಯಲ್ಲಿ ರಸ್ತೆಗಳೆಲ್ಲಾ ಜಾಮ್ ಜಾಮ್. ಸಾರ್ವಜನಿಕರು ವಾಹನಗಳನ್ನು ಚಲಾಯಿಸಲು ಹರಸಹಾಸ ಪಡಬೇಕು. ಆ ರೀತಿ ಟ್ರಾಫಿಕ್ ಜಾಮ್ ಆಗುತ್ತದೆ ಬೆಲೆ ಏರಿಕೆ ನಡುವೆಯೂ ಕೊಳ್ಳುವವರು ಭಾರಿ ಸಂಖ್ಯೆಯಲ್ಲಿ ಸೇರಿದ್ದು ವಿಶೇಷ. ಇದರಿಂದ ರಸ್ತೆಯೆಲ್ಲ ವ್ಯಾಪಾರದ ಅಂಗಡಿಗಳಿಂದ ಬಿಎಂಟಿಸಿ ಬಸ್ಸುಗಳ ಸಂಚಾರಕ್ಕೆ ಅಡೆತಡೆಯಾಗಿತ್ತು. ಈ ಸಮಸ್ಯೆಗೆ
ಶಾಶ್ವತ ಪರಿಹಾರ ರೂಪಿಸುವಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರ ಅಳಲು.
ವ್ಯಾಪಾರಸ್ಥರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಕೆ.ಆರ್ ರಸ್ತೆ ಸಂಚಾರಕ್ಕೆ ಸುಗಮವಾಗುತ್ತದೆ ಅದನ್ನು ಬಿಟ್ಟು ರಸ್ತೆಯ ಎರಡು ಬದಿಯಲ್ಲಿ ವ್ಯಾಪಾರಕ್ಕೆ
ಅನುವು ಮಾಡಿಕೊಟ್ಟಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಕೆಲವು ಕಾರುಗಳು ಸಹ ಅರ್ಧ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿ ವ್ಯಾಪಾರ ಮಾಡಲು ಹೋಗುತ್ತಾರೆ. ಅದರಿಂದ ಇನ್ನು ಹೆಚ್ಚಿನ
ತೊಂದರೆ ಆಗಿದ್ದು, ಮುಂದಿನ ಹಬ್ಬ ಹರಿ ದಿನಗಳಲ್ಲಿ ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳು ಎಚ್ಚೆತ್ತಕೊಂಡು ಬದಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳಿಯ ಸಾರ್ವಜನಿಕರ ಒತ್ತಾಯವಾಗಿದೆ.
ಇನ್ನು ಹಬ್ಬ ಮುಗಿದರೆ ಕಸದ ರಾಶಿಗಳನ್ನು ಕ್ಲೀನ್ ಮಾಡಲು ಎರಡು ಮೂರು ದಿನಗಳು ಬೇಕು. ಬೂದಗುಂಬಳಕಾಯಿ, ಬಾಳೆದಿಂಡುಗಳು ಉಳಿದ ಹೂಗಳನ್ನು ಅಲ್ಲಿಯೆ ಬಿಟ್ಟು ಹೋಗುವ ವ್ಯಾಪಾರಸ್ಥರುಗಳು. ಇದರಿಂದ ಅದು ಕೊಳೆತು ನಾರುವ ಸ್ಥಿತಿ ಬಂದಾಗ ನಗರಸಭೆಯ ಪೌರಕಾರ್ಮಿಕರು ಸ್ವಚ್ಚಗೊಳಿಸುತ್ತಾರೆ.
ಪಟಾಕಿ ಮಳಿಗೆಗಳು ಈ ಭಾರಿ ಕಡಿಮೆ ಇದೆ ಕಾರಣ ಸರ್ಕಾರಗಳು ತಂದಿರುವ ಕಾನೂನು ಹಸಿರು ಪಾಟಾಕಿ ಮಾತ್ರ ಹೊಡೆಯಬೇಕೆಂದು ಕಟ್ಟು ನಿಟ್ಟಾದ ಆದೇಶದಿಂದ ಪಾಟಾಕಿ ಮಳಿಗೆಗಳು ಹೆಚ್ಚಾಗಿ ನಗರದಲ್ಲಿ ಕಾಣಲಿಲ್ಲ.