ಬೆಂಗಳೂರು, ನ. 15 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿ.ವಿಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಮೇಳ ನ. 17 ರಿಂದ 20 ರವರೆಗೆ ನಾಲ್ಕು ದಿನಗಳ ಕಾಲ “ಆಹಾರ – ಆರೋಗ್ಯ – ಆದಾಯಕ್ಕಾಗಿಸಿರಿಧಾನ್ಯಗಳು” ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳ ನಡೆಯಲಿದೆ.
ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿ ಕೃಷಿ ಮೇಳವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಕೃಷಿ ವಿವಿಯಲ್ಲಿ ಅಭಿವೃದ್ಧಿ ಪಡಿಸಿರೋ 5 ತಳಿಗಳನ್ನ ಬಿಡುಗಡೆ ಮಾಡಲಾಗುವುದು. ಬರಗಾಲದಲ್ಲೂ ಹೇಗೆ ಬೆಳೆಗಳನ್ನ ಬೆಳೆಯಬಹುದು ಎಂದು ಮಾಹಿತಿ ನೀಡಲಾಗುವುದು. ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಒಟ್ಟು ಐದು ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆ ಮಾಡಲಾಗುವುದು.
5 ಕೃಷಿ ಸಾಧಕರಿಗೆ ಸನ್ಮಾನ
ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಪ್ರಶಸ್ತಿ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಐವರು ಕೃಷಿ ಸಾಧಕರಿಗೆ ನೀಡಲಾಗುವುದು.
ಅಲ್ಲದೇ ಕೃಷಿ ಮೇಳದಲ್ಲಿ ಸಿರಿಧಾನ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಐದುಹೊಸ ತಳಿಗಳ ಬಿಡುಗಡೆ, ಬೀಜಸಂತೆ, ಸಿರಿಧಾನ್ಯಗಳ ಆಹಾರ ಮೇಳ, ಬರನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು, ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿಮತ್ತು ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ಒಟ್ಟು 625 ಈ ಬಾರಿ ಮಳಿಗೆಗಳಿರಲಿದೆ.
ಕೃಷಿ ಮೇಳ 2023 ಆ್ಯಪ್ : ಕೃಷಿ ಮೇಳ 2023 ಆ್ಯಪ್ ಡೆವಲಪ್ ಮಾಡಲಾಗಿದೆ. ಯಾವ ಯಾವ ಮೇಳಗಳು ಎಲ್ಲಿದೆ ಎಂದು ಮಾಹಿತಿ ಆ್ಯಪ್ ಮೂಲಕ ದೊರೆಯಲಿದೆ. ಜಿಯೋದಿಂದ ಟವರ್ ಎರೆಕ್ಟ್ ಮಾಡಲು ಕೋರಿದ್ದೇವೆ. ಆಫ್ ಲೈನ್ ನಲ್ಲೂ ಈ ಆ್ಯಪ್ ಕಾರ್ಯ ನಿರ್ವಹಿಸಲಿದೆ ಎಂದು ಎಸ್.ವಿ. ಸುರೇಶ್ ಅವರು ಮಾಹಿತಿ ನೀಡಿದ್ದಾರೆ.
ಪಾರ್ಕಿಂಗ್ ಗೆ ವ್ಯವಸ್ಥೆ
ಕೃಷಿ ಮೇಳ ನೋಡಲು ಬರುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೊರಗಿನಿಂದ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಜಕ್ಕೂರೂ ಏರೋಡ್ರಮ್ಸ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ಕಂಟ್ರೋಲ್ಗೆ ಪೊಲೀಸರ ನೆರವು ಪಡೆಯಲಾಗ್ತಿದೆ. ನವೆಂಬರ್ 18 ರಂದು ರಾತ್ರಿ 8.30 ಗಂಟೆಯವರೆಗೂ ಕೃಷಿ ಮೇಳ ವಿಸ್ತರಣೆ ಮಾಡಲಾಗುತ್ತೆ. ಅಂದು ದಿನ ಪೂರ್ತಿ ಮಿಲ್ಲೆಟ್ಸ್ ಕುರಿತ ಊಟ ಇರಲಿದೆ.