ಸುದ್ದಿಮೂಲ ವಾರ್ತೆ
ಸಿರುಗುಪ್ಪ, ನ-17: ಅಖಿಲ ಭಾರತೀಯ ಅಸಂಘಟಿತ ಪುರೋಹಿತ ಕಾರ್ಮಿಕರ ಪರಿಷತ್ತು ನೋಂದಾಯಿತ ದೆಹಲಿ. ಇವರಿಂದ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಡಾ. ವೇದಮೂರ್ತಿ ಜೋಯಿಸ್ ಶ್ರೀನಿವಾಸ ಮೂರ್ತಿ ಇವರನ್ನು ಪರಿಷತ್ತಿಗೆ ರಾಜ್ಯದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ರಾಷ್ಟ್ರೀಯ ಆಡಳಿತ ಮಂಡಳಿಯವರು ಇವರಿಗೆ ಸೂಚನೆ ನೀಡಿದ್ದು ಸಂಘಟನೆಯನ್ನು ಬಲಪಡಿಸುತ್ತಾ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಪರಿಷತ್ತಿನ ಶ್ರೇಯಸ್ಸಿಗಾಗಿ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದ್ದಾರೆ.
ಇವರ ಈ ಆಯ್ಕೆಗೆ ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಂಘ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.