ಸುದ್ದಿಮೂಲ ವಾರ್ತೆ
ಶ್ರೀರಂಗಪಟ್ಟಣ, ನ.19:ವಿಹಾರಕ್ಕೆ ಮೈಸೂರಿನಿಂದ ಬಂದಿದ್ದ ಮೂವರು ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೈಸೂರಿನ ಕಾರುಣ್ಯ ಮನೆ ಟ್ರಸ್ಟ್ನ ಸಿಬ್ಬಂದಿಗಳಾದ ಹರೀಶ್(32), ನಂಜುಂಡ(18) ಹಾಗೂ ಜ್ಯೋತಿ(18) ಎಂಬು ಮೂವರು ವ್ಯಕ್ತಿಗಳು ಜಲ ಸಮಾಧಿಯಾಗಿದ್ದಾರೆ.
ಈ ಪೈಕಿ ಹರೀಶ್ ಮತ್ತು ನಂಜುಂಡ ಅವರ ಶವಗಳು ಪತ್ತೆಯಾಗಿದ್ದು ನೀರಿನಿಂದ ಹೊರ ತೆಗೆಯಲಾಗಿದೆ. ಜ್ಯೋತಿ ಅವರ ಶವ ಸಿಕ್ಕಿಲ್ಲ ಎಂದು ಕೆಆರ್ಎಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮೈಸೂರಿನ ಕಾರುಣ್ಯ ಮನೆ ಟ್ರಸ್ಟನ 15 ಜನರ ತಂಡ ಮೈಸೂರಿನಿಂದ ಕೆಆರ್ಎಸ್ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಜಲಾಶಯದ ಹಿನ್ನೀರಿನಲ್ಲಿ ನೀರಾಟವಾಡುತ್ತಿದ್ದ ವೇಳೆ ಮೂವರು ನೀರಿನಲ್ಲಿ ಮುಳುಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆ.ಆರ್.ಎಸ್ ಠಾಣೆಯ ಪೋಲಿಸರು ಹಾಗೂ ಡಿವೈಎಸ್ಪಿ ಮುರಳಿ, ಸಿಪಿಐ ಪುನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.