ಸುದ್ದಿಮೂಲ ವಾರ್ತೆ
ನೆಲಮಂಗಲ,ನ.21:ನೆಲಮಂಗಲ ತಾಲೂಕು ಕುರುಬರ ಸಂಘದಿಂದ ಕುರುಬ ಸಮಾಜದ ಪ್ರತಿಭಾ ಪುರಸ್ಕಾರವನ್ನು 536ನೇ ದಾಸ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಪ್ರಯುಕ್ತ ಪ್ರತಿಭಾವಂತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆಲಮಂಗಲ ತಾಲೂಕು ಕುರುಬರ ಸಂಘದ ಕ್ಷೇತ್ರಗಳಾದ ನೆಲಮಂಗಲ ನಗರ ಮತ್ತು ನೆಲಮಂಗಲ ಕಸಬಾ, ದಾಸನಪುರ, ತ್ಯಾಮಗೊಂಡ್ಲು ಮತ್ತು ಸೋಂಪುರ ಹೋಬಳಿಯ ಸಮಾಜದ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ 85% ಮತ್ತು ಪಿಯುಸಿಯಲ್ಲಿ 80% ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿರುವುದರಿಂದ ದಿನಾಂಕ 28-11-2023ರ ಒಳಗೆ ಆಯಾ ಹೋಬಳಿಯ ಮಕ್ಕಳ ದಾಖಲಾತಿಗಳನ್ನು ಸಂಘದ ಕಚೇರಿಗೆ ತಲುಪಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ದಾಖಲಾತಿಗಳು ಈ ಕೆಳಕಂಡಂತಿದೆ
1. ಟಿಸಿ / ಜಾತಿ ಪ್ರಮಾಣ ಪತ್ರ 2.ಎಸ್ ಎಸ್ ಎಲ್ ಸಿ ಅಂಕಪಟ್ಟಿ 3. ಒಂದು ಪೋಟೋ ಸಂಪರ್ಕಿಸಬೇಕಾದ ವಿವರ, ನೆಲಮಂಗಲ ತಾಲೂಕು ಕುರುಬರ ಸಂಘ
ಪರ್ವತಪ್ಪ ಲೇಔಟ್ ಗಾಂಧಿನಗರ ನೆಲಮಂಗಲ ಖಜಾಂಚಿ ಲಕ್ಷ್ಮಯ್ಯದೂ:9980975982 ಎಂದು ನೆಲಮಂಗಲ ತಾಲೂಕು ಕುರುಬರ ಸಂಘದ ನಿರ್ದೇಶಕರಾದ ಬರಗೇನಹಳ್ಳಿ ಚಿಕ್ಕರಾಜು ತಿಳಿಸಿದ್ದಾರೆ.