ಸುದ್ದಿಮೂಲ ವಾರ್ತೆ
ದೇವನಹಳ್ಳಿ, ನ. 21 : ಪಟ್ಟಣದ ಎಸ್.ಎಲ್.ಎಸ್ ಶಾಲೆಯ 10 ವಿದ್ಯಾರ್ಥಿಗಳು ಈ ದಿನ ಬೆಂಗಳೂರಿನ ದ ಕ್ಯಾಪಿಟಲ್ ಹೋಟೆಲ್ನಲ್ಲಿ ನ್ಯೂಸ್ ಒನ್ ಚ್ಯಾನೆಲ್ ನ ಸಹಯೋಗದೊಂದಿಗೆ ನಡೆದ “ಕನ್ನಡ 50 ಸಂಭ್ರಮ” ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ನಾಡು, ನುಡಿಯ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಜೊತೆ ಎಲ್ಲಾ ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎಸ್.ಎಲ್.ಎಸ್. ಶಾಲೆಯ 10 ವಿದ್ಯಾರ್ಥಿಗಳಾದ ಅಭಿಷೇಕ್ ಡಿ, ಸಾತ್ವಿಕ್ ಕೆ.ಆರ್., ತೇಜಸ್ ಗೌಡ ಕೆ.ಎಲ್., ವೇದಿಕಾ ಡಿ.ಜೆ., ನಮಿತ ಎಂ., ಮನಿಷ್ ಗೌಡ ಹೆಚ್.ಎ. ರಚನ ಬಿ.ಆರ್., ಸುಹಾಸ್ ಎಸ್.ಎಂ., ಉಜ್ವಲ್ ಪಾಂಡೆ, ಹಾಗೂ ಪ್ರಜ್ವಲ್ ಬಿ. ಎಸ್. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಣ ಕ್ಷೇತ್ರ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಸ್.ಎಲ್.ಎಸ್. ಶಾಲೆಯ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪ್ರತ್ಯುತ್ತರ ನೀಡಿ, ಹಲವು ಭರವಸೆಗಳನ್ನು ನೀಡಿ ಮುಂದೆ ಅವುಗಳನ್ನು ಈಡೇರಿಸುವಂತೆ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಎಸ್.ಎಲ್.ಎಸ್. ಶಾಲೆಯ ಮಕ್ಕಳ ವಾಕ್ಚಾತುರ್ಯವನ್ನು ಮೆಚ್ಚಿ ಅವರೊಂದಿಗೆ ಭಾವಚಿತ್ರವನ್ನು ತೆಗೆಸಿಕೊಂಡರು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳೊಂದಿಗೆ ಶಾಲೆಯ ಕಾರ್ಯದರ್ಶಿಯವರಾದ ಡಾ. ಡಿ.ಎಸ್. ಧನಂಜಯರವರು ಹಾಜರಿದ್ದರು.