ಸುದ್ದಿಮೂಲ ವಾರ್ತೆ
ಹೊಸಕೋಟೆ, ನ. 25: ನಗರದ ಅಂಬೇಡ್ಕರ್ ಕಾಲೋನಿಯ ಪಕ್ಕದ ಸರ್ವಿಸ್ ರಸ್ತೆ ಬದಿಯ ಚರಂಡಿಯ ನೀರು ನಿತ್ಯ ತುಂಬಿ ರಸ್ತೆ ಮೇಲೆ ಹರಿಯುತ್ತಿದೆ.
ಹೆದ್ದಾರಿ ನಿರ್ವಹಣೆ ಮಾಡುತ್ತಿರುವ ಲ್ಯಾಂಕೋ ಕಂಪನಿಯವರು ನಿರ್ಲಕ್ಷ್ಯದಿಂದಾಗಿ ಈ ರೀತಿ ಕೊಳಚೆ ನೀರು ಕಾಲುವೆ ತುಂಬಿ ರಸ್ತೆಗೂ ನುಗ್ಗುತ್ತಿದೆ. ಪ್ರಯಾಣಿಕರಿಗೂ ತೊಂದರೆಯಾಯಾಗುತ್ತಿದೆ ಎಂದು ಸುತ್ತಮುತ್ತಲಿನ ಜನರು ಆರೋಪ ಮಾಡುತ್ತಿದ್ದಾರೆ.
ಟೋಲ್ಗೇಟ್ನಿಂದ ಒಂದಲ್ಲ ಒಂದು ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ನುಗತ್ತಲೇ ಇರುತ್ತವೆ. ಇವುಗಳನ್ನು ನಿರ್ವಹಣೆ ಮಾಡಬೇಕಾದ ಕಂಪನಿಗಳ ಕಂಡು ಕಾಣದಂತೆ ಜಾಣ ಕುರುಡು ತನವನ್ನು ಪ್ರದರ್ಶಿಸುತ್ತಿವೆ.
ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ದಿನ ನಿತ್ಯ ಕಿರಿಕಿರಿಯಾಗುತ್ತಿದೆ. ಅಲ್ಲದೆ, ಚರಂಡಿಗಳ ಮೇಲೆ ಕಳಪೆ ಗುಣ ಮಟ್ಟ ಸ್ಲ್ಯಾಬ್ಗಳನ್ನು ಹಾಕಿದ್ದು ಅವುಗಳು ದ್ವಿಚಕ್ರ ವಾಹನಗಳು ಓಡಾಡಿದರೆ ಮುರಿದು ಬೀಳುತ್ತವೆ. ಇದರಿಂದ ಪ್ರಯಾಣಿಕರಿಗೂ ಸಹ ಅಪಾಯ ಎನ್ನುವಂತಾಗಿದೆ.
ರಸ್ತೆ ನಿರ್ವಹಣೆ ಮಾಡುವ ಕಂಪೆನಿ ಈ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಚರಂಡಿಗಳನ್ನು ದುರಸ್ತಿ ಮಾಡುವ ಮೂಲಕ ರಸ್ತೆಗೆ ನೀರು ನುಗ್ಗುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.