ಸುದ್ದಿಮೂಲ ವಾರ್ತೆ
ಮೈಸೂರು, ನ.28:ರಾಜ್ಯದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಯೋಜನೆಯಡಿ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ 2 ಸಾವಿರ ಅರ್ಪಣೆಯಾಗಿದೆ.
1.18 ಲಕ್ಷ ರೂಪಾಯಿ ಹಣ ದೇಗುಲಕ್ಕೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಹಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯವಾಗಿದೆ. ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಸಚಿವೆ ಅರ್ಪಣೆ ಮಾಡಿದ್ದಾರೆ.
ದೇವಿಗೆ ಹಣ ನೀಡುವ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರು ಪತ್ರ ಬರೆದಿದ್ದರು. ನಂತರ ಈ ಬಗ್ಗೆ ಕ್ರಮ ವಹಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸೂಚಿಸಿದ್ದ ಡಿ ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದ್ದು, ಅದರಂತೆ 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಾಗಿದೆ.