ಸುದ್ದಿಮೂಲವಾರ್ತೆ
ಕೊಪ್ಪಳ,ನ.29:ಇತ್ತೀಚಿಗೆ ಕೊಪ್ಪಳ ಜಿಲ್ಲೆಯಲ್ಲಿ ಕರಡಿಗಳ ದಾಳಿ ವಿಪರೀತವಾಗಿದೆ. ಇಲ್ಲಿ ಕರಡಿ ಧಾಮ ನಿರ್ಮಿಸಬೇಕೆಂದು ಸುಗ್ರೀವಾ ಜನಸೇವಾ ಸಮಿತಿಯ ಅಧ್ಯಕ್ಷ ಸಂಗಮೇಶ ಸುಗ್ರೀವಾ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕರಡಿ ಹಠಾವೊ. ಕಿಸಾನ ಬಚವೊ ಅಂದೋಲನ ಮಾಡಲಾಗಿದೆ. 2019 ರಲ್ಲಿ ಇಲ್ಲಿ ಕರಡಿ ಧಾಮ ನಿರ್ಮಿಸಲು ಹಣ ನೀಡುವುದಾಗಿ ಘೋಷಿಸಿದ್ದರು. ಆದರೆ ಈಗಲೂ ಕರಡಿ ಧಾಮ ನಿರ್ಮಾಣವಾಗಿಲ್ಲ. ಇದರಿಂದ ಇರಕಲಗಡ ಭಾಗ ಸೇರಿ ಹಲವರು ಜೀವ ಹಾನಿಯಾಗಿದೆ. ರೈತರ ಬದುಕು ದುಸ್ತರವಾಗಿದೆ. ಈ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಗಂಗಾವತಿ ಶಾಸಕ ಗಾಲಿ ಜನಾರ್ಧನರಡ್ಡಿ ಈಗ ಕರಡಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.ಚುನಾವಣೆಯ ಮುನ್ನ ಕರಡಿ ನಿಯಂತ್ರಿಸುವುದಾಗಿ ಹೇಳಿ ಮತ ಕೇಳಿ ಆಯ್ಕೆಯಾಗಿದ್ದಾರೆ. ಆದರೆ ಅವರು ಈಗ ಬೆಂಗಳೂರಿನಲ್ಲಿ ಕುಳಿತಿದ್ದಾರೆ. ಮುಂದಿನ ದಿನಗಳಲ್ಲಿ ಕರಡಿ ದಾಳಿ ನಿರ್ಮಿಸದಿದ್ದರೆ ಜನಪ್ರತಿನಿಧಿಗಳಿಗೆ ಕೇಳುವ ಹಂತಕ್ಕೆ ಜನ ಬಂದಿದ್ದಾರೆ ಎಂದು ಹೇಳಿದರು.
ಜನವರಿ ತಿಂಗಳಲ್ಲಿ ಕರಡಿ ಧಾಮ ಮಾಡದಿದ್ದರೆ ಚಿಕ್ಕಬೊಮ್ಮನಾಳ ದಿಂದ ಇರಕಲಗಡದಲ್ಲಿ ಪಾದಯಾತ್ರೆ ಮಾಡಿ ಜನಪ್ರತಿನಿಧಿಯನ್ನು ಜಾಗೃತಿ ಮೂಡಿಸಲಾಗುವುದು ಎಂದರು.
ಜನಾರ್ಧನರಡ್ಡಿ ಕೇವಲ ಆಶ್ವಾಸನೆಯ ಆತ್ಮ ಅವರು ಎಲ್ಲಿಯೂ ಕೆಲಸ ಮಾಡಿಲ್ಲ. ಕೇವಲ ಅವರು ಭರವಸೆ ನೀಡುವದಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ಮುಕ್ಕುಂಪಿ, ಶರಣಪ್ಪ ಮಾಳೆ. ಮುತ್ತು ತಾಳಕನಕಾಪುರ, ರೇಣುಕಪ್ಪ ಕೊಳಜಿ