ಸುದ್ದಿಮೂಲ ವಾರ್ತೆ
ನಂದಗುಡಿ,ನ.30: ಕನಕದಾಸರ ಜೀವನ ಸಂದೇಶ ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತಾಗಿದೆ ಎಂದು ಪಿಡಿಒ ಕೆಂಪಣ್ಣ ಹೇಳಿದರು.
ಅವರು ನಂದಗುಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 536ನೇ ಕನಕ ಜಯಂತಿ ಕಾರ್ಯಕ್ರಮನ ಉದ್ದೇಶಿಸಿ ಮಾತನಾಡಿದ ಅವರು, ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡಿರುವ ಕನಕದಾಸರು ಒಬ್ಬರಾಗಿದ್ದು, ಇವರಿಗೆ ದಾಸ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ ಎಂದು ಹೇಳಿದರು.
ಕನಕದಾಸರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳ ಜಾತಿಯವರ ನೋವಿನ ಅರಿವು ಮೇಲ್ವರ್ಗದವರ ವೈಭವ ಜೀವನದ ಅನುಭವ ಚೆನ್ನಾಗಿ ಗೊತ್ತಿತ್ತು. ತಮ್ಮ ಕಾವ್ಯ ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಸಾಮಾಜಿಕ ಸಮಾನತೆ ಹಾಗೂ ಧರ್ಮ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿಂತನೆಯಲ್ಲಿ ಬದಲಾವಣೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಮಲಾ ಶಿವು, ಸದಸ್ಯರಾದ ಸುನೀತಾ ರಾಮೇಗೌಡ, ಮುನಿರತ್ನಮ್ಮ ಶಿವು ಕಾರ್ಯದರ್ಶಿ ವೆಂಕಟೇಶ್, ಲೆಕ್ಕಾಧಿಕಾರಿ ಸಂಪತ್ ಕುಮಾರ್, ಕರ ವಸೂಲಿಗಾರರಾದ ಮನೋಜ್ ಕುಮಾರ್, ವಾಟರ್ ಮ್ಯಾನ್ಗಳಾದ ನಟರಾಜಪ್ಪ, ನಯಾಜ್, ರಾಮು, ರಾಜೇಶ್, ಶಿವು, ಶ್ಯಾಮಲಾ ಹಾಗೂ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.