ಸುದ್ದಿಮೂಲ ವಾರ್ತೆ
ದೇವನಹಳ್ಳಿ, ನ.30: ಕನ್ನಡ ಪವಿತ್ರವಾದ ಭಾಷೆ. ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ನಾವು ಇತರೆ ಯಾವುದೇ ಭಾಷೆಯನ್ನು ಕಲಿತರು ನಮ್ಮ ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಅಂಬರೀಶ್ಗೌಡ ತಿಳಿಸಿದರು.
ಪಟ್ಟಣದ ರಾಣಿಕ್ರಾಸ್ನಲ್ಲಿ ಕರ್ನಾಟಕ ರಕ್ಷಣಾವೇದಿಕೆ ಹಾಗೂ ಪುನಿತ್ ರಾಜ್ಕುಮಾರ್ ಅಭಿಮಾನಗಳ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಪರಂಪರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಕನ್ನಡ ಭಾಷೆಯನ್ನು ಗಗನದೆತ್ತರಕ್ಕೆ ಬೆಳೆಸಬೇಕು. ಆಂಗ್ಲ ಭಾಷೆಯನ್ನು ಕೇವಲ ವ್ಯವಹಾರಿಕ ಭಾಷೆಯನ್ನಾಗಿ ಉಪಯೋಗಿಸಬೇಕೆ ಹೊರತು ಅದಕ್ಕೆ ಜನರು ಮಾರು ಹೋಗಬಾರದು ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಇಲ್ಲಿನ ನೀರು, ಗಾಳಿ, ಆಹಾರ ಪಡೆಯುವ ನಾವುಗಳು ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಕನ್ನಡವನ್ನು ಮಾತನಾಡುವ ಮೂಲಕ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ತಿಳಿಸಿದರು.
ಕರವೇ ರಾಜ್ಯ ಪ್ರಧಾನ ಸಂಚಾಲಕ ಬಿ.ಕೆ. ನಾರಾಯಣ ಸ್ವಾಮಿ ಮಾತನಾಡಿ, ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ನೆರೆ ಹೊರೆಯ ರಾಜ್ಯದವರು ಅವರದೇ ಆದ ಭಾಷೆಗಳಲ್ಲಿ ಮಾತನಾಡುತ್ತಾರೆ. ಕನ್ನಡಿಗರು ಕನ್ನಡ ಭಾಷೆಗೆ ಹೆಚಿನ ಆದ್ಯತೆ ಕೊಡಬೇಕು. ಕನ್ನಡ ನೆಲ ಜಲದ ಬಗ್ಗೆ ಪೀತಿ ಇರಬೇಕು. ಅನೇಕ ಕನ್ನಡ ಸಾಹಿತಿಗಳು ಮಹನೀಯರು ಅವರದೇ ಕೊಡುಗೆಗಳನ್ನು ನಮ್ಮ ನಾಡಿಗೆ ನೀಡಿದ್ದಾರೆ. ಕನ್ನಡವನ್ನು ಉಳಿಸಿ ಬೆಳಸಿ ಅನ್ನುವ ಕಾಲ ನಿರ್ಮಾಣವಾಗಿದೆ ಎಂದು ಹೇಳೀದರು.
ಇದೆ ವೇಳೆ ಕರವೇ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ವೀರ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಬಿ.ಟಿ.ಅನಿಲ್ ಕುಮಾರ್, ಉಪಾಧ್ಯಕ್ಷ ಎಂ.ಜೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರಾಧ್ಯ, ಯುವ ಘಟಕದ ಅಧ್ಯಕ್ಷ ಗೊಕರೆ ಸತೀಶ್, ಮಾಧ್ಯಮ ಘಟಕದ ಅಧ್ಯಕ್ಷ ಮಧುಚಂದ್ರ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರ,ಉಪಾಧ್ಯಕ್ಷೆ ಶೈಲಜಾ, ಸದಸ್ಯರಾದ ಶಿವಕುಮಾರ್, ವೇಣುಗೋಪಾಲ್,ಉಮೇಶ್ ಸೇರಿದಂತೆ ಕನ್ನಡದ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ನವೀನ್, ಅಧ್ಯಕ್ಷ ಚರಣ್, ಸದಸ್ಯರಾದ ಮುರಳಿ, ವಾಸು, ಪಿಳ್ಳಪ್ಪಯ್ಯ, ಮುನಿರಾಜು, ನವೀನ್, ಪ್ರಶಾಂತ್,ಮುಂತಾದವರು ಇದ್ದರು.