ಇಂದಿನಿಂದ ಲೋಕಸಭೆ ಮುಂಗಾರು ಅಧಿವೇಶನ
ಸುದ್ದಿಮೂಲ ವಾರ್ತೆ ನವದೆಹಲಿ, ಜು.21:
ಲೋಕಸಭೆ ಮುಂಗಾರು ಅಧಿವೇಶನ ಸೋಮವಾರ (ಜು.22)ರಿಂದ ಆರಂಭವಾಗಿ ಆಗ್ಟ್ 12 ರವರೆಗೂ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜು.23ರಂದು ಸತತ ಏಳನೇ ಬಾರಿಗೆ ಕೇಂದ್ರದ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅಧಿವೇಶನ ಇದಾಗಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನು ತಿದ್ದುಪಡಿ ಮಾಡುವುದು ಸೇರಿದಂತೆ 6 ಹೊಸ ಮಸೂದೆಗಳನ್ನು ಮಂಡನೆಯಾಗುವ ನಿರೀಕ್ಷೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ, ಸೀತಾರಾಮನ್ ಈ ವರ್ಷದ ೆಬ್ರವರಿಯಲ್ಲಿ ಮಧ್ಯಂತರ ಸೇರಿದಂತೆ ಸತತ 6 ಬಜೆಟ್ಗಳನ್ನು ಮಂಡಿಸಿದ್ದಾರೆ. ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರ ಪಡೆದ ಬಳಿಕ ಪೂರ್ಣಾವಧಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಅವರದು ಇದು ಸತತ 7ನೇ ಬಜೆಟ್ ಅಗಲಿದೆ.
ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕ ಮಸೂದೆ, ಕಾಫಿ (ಪ್ರಚಾರ ಮತ್ತು ಅಭಿವೃದ್ಧಿಿ) ಮಸೂದೆ, ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿಿ) ಮಸೂದೆ ಮಂಡನೆ ಯಾಗಲಿದೆ ಯಾಗಲಿದೆ ಎಂದು ಹೇಳಲಾಗುತ್ತಿಿದೆ.
ಈ ಮಧ್ಯೆೆ ನೀಟ್ ಪರೀಕ್ಷೆ ಅಕ್ರಮ, ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಮಣಿಪುರ ಹಿಂಸಾಚಾರ, ರೈಲ್ವೆೆ ಅಪಘಾತಗಳು ಹೆಚ್ಚುತ್ತಿಿರುವುದು ಸೇರಿ ಹಲವು ವಿಚಾರಗಳೊಂದಿಗೆ ಆಡಳಿತ ಪಕ್ಷವನ್ನು ಕಟ್ಟಿಿ ಹಾಕಲು ಕಾಂಗ್ರೆೆಸ್ ನೇತೃತ್ವದ ವಿರೋಧ ಪಕ್ಷಗಳ ‘ಇಂಡಿಯಾ ಒಕ್ಕೂಟ’ ಸಜ್ಜಾಾಗಿದೆ. ಈ ಮಧ್ಯೆೆ ಯುಪಿಎಸ್ಸಿಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ವಿಷಯವೂ ಸಹ ಚರ್ಚೆಗೆ ಬರುವ ಸಾಧ್ಯತೆ ಇದೆ.
ಅಧಿವೇಶನಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಭಾನುವಾರ ಸಂಜೆ ವಿಪಕ್ಷಗಳ ನಾಯಕ ಸಭೆ ನಡೆಸಿ ಸರ್ಕಾರದ ವಿರುದ್ಧ ಮುಗಿಬೀಳಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಅಧಿವೇಶನದಲ್ಲಿ ಕಾಂಗ್ರೆೆಸ್ನ ಗೌರವ್ ಗೊಗೊಯ್ ಅವರು ಲೋಕಸಭೆಯ ಉಪಸಭಾಪತಿ ಸ್ಥಾಾನ ನೀಡುವಂತೆ ಕೋರಿದ್ದು, ನಾಳೆ ಈ ಬಗ್ಗೆೆ ನಿರ್ಧಾರವಾಗುವ ಸಾಧ್ಯತೆ ಇದೆ.
ಈ ಮಧ್ಯೆೆ ಸಂಸತ್ತಿಿನ ಉಭಯ ಸದನಗಳ ಕಲಾಪವು ಸುಗಮವಾಗಿ ಜರುಗಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಸರ್ವಪಕ್ಷಗಳ ಸಭೆ ನಡೆಸಿದರು. ಎನ್ಡಿಎ ಮತ್ತು ಇಂಡಿಯಾ ಮೈತ್ರಿಿಕೂಟದ ಹಲವು ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಸಂಸತ್ತಿಿನ ಉಭಯ ಸದನಗಳು ಸುಗಮವಾಗಿ ನಡೆಯಲು ಎಲ್ಲಾ ಪಕ್ಷದ ನಾಯಕರಿಂದ ಸಹಕಾರವನ್ನು ಕೋರಿದರು ಮತ್ತು ಎಲ್ಲಾ ವಿಷಯಗಳ ಬಗ್ಗೆೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಬಿಹಾರದ ಜೆಡಿಯು, ಆಂಧ್ರಪ್ರದೇಶ ವೈಎಸ್ಆರ್ ಕಾಂಗ್ರೆೆಸ್ ಮತ್ತು ಒಡಿಶಾದ ಬಿಜೆಡಿ ಸಂಸದರು ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾಾನಮಾನ ನೀಡುವಂತೆ ಬೇಡಿಕೆ ಇಟ್ಟಿಿದ್ದಾರೆ.