ಸುದ್ದಿಮೂಲ ವಾರ್ತೆ ನವದೆಹಲಿ, ಜು.22:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 6.5ರಿಂದ 7ಕ್ಕೆೆ ಅಂದಾಜಿಸಲಾಗಿದೆ. ಏಪ್ರಿಿಲ್ನ ವಲ್ಡರ್ ಎಕನಾಮಿಕ್ ಔಟ್ ಲುಕ್ ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇಕಡಾ 3.2 ರಷ್ಟಿಿರುತ್ತದೆ ಎಂದು ಸಮೀಕ್ಷೆಯಲ್ಲಿ ಪ್ರಸ್ತಾಾಪಿಸಲಾಗಿದೆ.
ದೇಶಗಳ ನಡುವೆ ವಿಭಿನ್ನ ಬೆಳವಣಿಗೆಯ ಮಾದರಿಗಳು ಹೊರಹೊಮ್ಮಿಿವೆ. ದೇಶೀಯ ರಚನಾತ್ಮಕ ಸಮಸ್ಯೆೆಗಳು, ಭೌಗೋಳಿಕ ರಾಜಕೀಯ ಸಂಘರ್ಷಗಳ ವಿಭಿನ್ನ ಪರಿಣಾಮ ಮತ್ತು ವಿತ್ತೀಯ ನೀತಿಗಳ ಬಿಗಿಗೊಳಿಸುವಿಕೆಯ ಪರಿಣಾಮದಿಂದಾಗಿ ದೇಶಗಳ ಬೆಳವಣಿಗೆಯ ದರದಲ್ಲಿ ತೀವ್ರ ವ್ಯತ್ಯಾಾಸವಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಬಾಹ್ಯ ಸವಾಲುಗಳ ಪರಿಣಾಮ ಕಡಿಮೆ : ಬಾಹ್ಯ ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಹಣಕಾಸು ವರ್ಷ 2023ರಲ್ಲಿ ಸಾಧಿಸಿದ ಆವೇಗ 2024ರ ಹಣಕಾಸು ವರ್ಷದವರೆಗೆ ಕಾಪಾಡಿಕೊಂಡಿದೆ. ಭಾರತದ ನೈಜ ಜಿಡಿಪಿ 2024ರ ಹಣಕಾಸು ವರ್ಷದಲ್ಲಿ ಶೇಕಡಾ 8.2ರಷ್ಟು ಬೆಳೆದಿದೆ. ಇದು ಹಣಕಾಸು ವರ್ಷ 2024ರ ನಾಲ್ಕು ತ್ರೈಮಾಸಿಕಗಳ ಪೈಕಿ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ 8ರ ಗಡಿ ಮೀರಿದೆ. ಸ್ಥೂಲ ಆರ್ಥಿಕ ಸ್ಥಿಿರತೆ ಕಾಪಾಡಿಕೊಳ್ಳುವತ್ತ ಗಮನ ಹರಿಸಿದ್ದರಿಂದ ಬಾಹ್ಯ ಸವಾಲುಗಳು ಭಾರತದ ಆರ್ಥಿಕತೆಯ ಮೇಲೆ ಕನಿಷ್ಠ ಪರಿಣಾಮ ಬೀರಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಹಣದುಬ್ಬರ ಶೇ. 5.4ಕ್ಕೆೆ ಇಳಿಕೆ : ಸೂಕ್ತ ಸಮಯದಲ್ಲಿ ಸರಿಯಾದ ನೀತಿಗಳನ್ನು ಜಾರಿಗೊಳಿಸಿದ್ದರಿಂದ ಮತ್ತು ರಿಸರ್ವ್ ಬ್ಯಾಾಂಕ್ ಆ್ ಇಂಡಿಯಾದ (ಆರ್ಬಿಐ) ಬೆಲೆ ಸ್ಥಿಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರ ಶೇಕಡಾ 5.4ಕ್ಕೆೆ ಇಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ 2023-2024 ಸೋಮವಾರ ತಿಳಿಸಿದೆ. ಹಣಕಾಸು ವರ್ಷ 2022 ಮತ್ತು 2023ರ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಾಮಿಕ, ಭೌಗೋಳಿಕ ರಾಜಕೀಯ ಉದ್ವಿಿಗ್ನತೆಗಳು ಮತ್ತು ಪೂರೈಕೆ ಅಡೆತಡೆಗಳು ಜಾಗತಿಕವಾಗಿ ಹಣದುಬ್ಬರದ ಒತ್ತಡ ಹೆಚ್ಚಿಿಸಲು ಕಾರಣವಾಗಿವೆ ಎಂದು ಸಮೀಕ್ಷೆ ಹೇಳಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಅಂತಾರಾಷ್ಟ್ರೀಯ ಸಂಘರ್ಷಗಳು ಮತ್ತು
ಆಹಾರ ವೆಚ್ಚಗಳ ಮೇಲೆ ಪರಿಣಾಮ ಬೀರುವಂಥ ಪ್ರತಿಕೂಲ ಹವಾಮಾನ ಪರಿಸ್ಥಿಿತಿಗಳಿಂದಾಗಿ ಭಾರತದಲ್ಲಿ ಗ್ರಾಾಹಕ ಸರಕು ಮತ್ತು ಸೇವೆಗಳು ದುಬಾರಿಯಾಗಿವೆ. ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳ ಹಣದುಬ್ಬರ ದರ ಹೆಚ್ಚಾಾಗಿದ್ದರೂ ಒಟ್ಟಾಾರೆ ಹಣದುಬ್ಬರ ದರವು ಬಹುತೇಕ ನಿಯಂತ್ರಣದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.
ಚಾಲ್ತಿಿ ಖಾತೆ ಕೊರತೆ: ಜಾಗತಿಕವಾಗಿ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಬಾಹ್ಯ ಸಮತೋಲನವು ಒತ್ತಡಕ್ಕೊೊಳಗಾಗಿದೆ. ಆದರೆ ಹೆಚ್ಚಳವಾದ ಸೇವೆಗಳ ರ್ತುಗಳು ಇದನ್ನು ಬಹುತೇಕ ಸಮತೋಲನಗೊಳಿಸಿವೆ. ಇದರ ಪರಿಣಾಮವಾಗಿ, ಚಾಲ್ತಿಿ ಖಾತೆ ಕೊರತೆ (ಸಿಎಡಿ) 2024ರ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇಕಡಾ 0.7ರಷ್ಟಿಿದೆ. ಇದು ಹಣಕಾಸು ವರ್ಷ 2023ರಲ್ಲಿ ಇದ್ದ ಜಿಡಿಪಿಯ ಶೇಕಡಾ 2.0ಗಿಂತ ಉತ್ತಮವಾಗಿದೆ.