ಪಂಚ ಗ್ಯಾಾರಂಟಿಗಳಿಗೆ ಪರಿಶಿಷ್ಟರ ಮೀಸಲು ಹಣ ಬಳಕೆ, ಆರೋಪಿಸಿ ಪರಿಷತ್ನಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ
ಸುದ್ದಿಮೂಲ ವಾರ್ತೆ ಬೆಂಗಳೂರು, ಜು.22:
ಪಂಚ ಗ್ಯಾಾರಂಟಿಗಳಿಗೆ ಪರಿಶಿಷ್ಟ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಕೇಂದ್ರ ಸರ್ಕಾರ ಹಾಗೂ ನೀತಿ ಆಯೋಗದ ಮಾರ್ಗಸೂಚಿ ಅನುಸಾರವೇ ಆ ಸಮುದಾಯಕ್ಕೆೆ ಮೀಸಲಿಟ್ಟ ಹಣ ಅದೇ ಸಮುದಾಯಕ್ಕೆೆ ಬಳಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಪರಿಷತ್ನಲ್ಲಿಂದು ಸಭಾತ್ಯಾಾಗ ಮಾಡಿದರು.
ಪ್ರತಿಪಕ್ಷದ ಚೆಲುವಾದಿ ನಾರಾಯಣಸ್ವಾಾಮಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು ರಾಜ್ಯದಲ್ಲಿ ಪರಿಶಿಷ್ಟರ ಜನಸಂಖ್ಯೆೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟು ಆ ಜನಾಂಗದ ಅಭಿವೃದ್ಧಿಗೆ ತಮ್ಮ ಬದ್ದತೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆೆಸ್ ಸರ್ಕಾರ ತೋರಿಸುತ್ತಿದೆ. ಈ ಕಾಯಿದೆ ಇಡೀ ದೇಶದಲ್ಲಿಯೇ ನಮ್ಮ ಸರ್ಕಾರ ಜಾರಿಗೆ ತಂದ 2ನೇ ರಾಜ್ಯವಾಗಿದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆೆ ಬಳಸಿಕೊಳ್ಳಲು ಎಸ್ಸಿಪಿ ಮತ್ತು ಟಿಎಸ್ಪಿ ಕಾಯಿದೆ ಉಪಯೋಜನೆ ಅನುದಾನ ಹಂಚಿಕೆ ನಿಯಮ 7ಡಿ ಜಾರಿಗೆ ತಂದು ಅನ್ಯ ಉದ್ದೇಶಕ್ಕೆೆ ಹಣ ಬಳಕೆ ಮಾಡಿಕೊಂಡು ಪರಿಶಿಷ್ಟರಿಗೆ ದ್ರೋಹ ಬಗೆದಿತ್ತುಘಿ. ಆದರೆ ಕಾಂಗ್ರೆೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆೆ ಬಂದ ತಕ್ಷಣವೇ 7ಡಿ ರದ್ದುಪಡಿಸಿ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆೆ ಬಳಕೆ ಮಾಡಿಕೊಳ್ಳದಂತೆ ತಡೆಯಲಾಗಿದೆ ಎಂದು ವಿವರ ನೀಡಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯ ಹಣ ಬಳಕೆಯೇ 7ಎ, 7ಬಿ ಮತ್ತು 7ಸಿ ನಲ್ಲಿ ನಿಗದಿಪಡಿಸಿದ ಅನುದಾನವನ್ನು ಅದೇ ಸಮುದಾಯಕ್ಕೆೆ ಬಳಸಿಕೊಳ್ಳಲು ಅವಕಾಶವಿದ್ದುಘಿ, ಅದರ ಅನುಸಾರ ಪಂಚ ಗ್ಯಾಾರಂಟಿ ಯೋಜನೆಯಲ್ಲಿ ಲಾನುಭವಿಗಳಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲಾನುಭವಿಗಳಿಗೆ ಮಾತ್ರ ಖರ್ಚು ಮಾಡಲಾಗುತ್ತಿಿದೆ ಎಂದು ದೃಢಪಡಿಸಿದರು.
2001 ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯ 17.1, ಪರಿಶಿಷ್ಟ ಪಂಗಡದ 6.9 ಜನಸಂಖ್ಯೆೆ ಇದ್ದುಘಿ, ಅದರನುಸಾರ ರಾಜ್ಯದ ಮುಂಗಡಪತ್ರದ ಶೇ.24.1 ಅನುದಾನ ಪರಿಶಿಷ್ಟರ ಅಭಿವೃದ್ಧಿಿಗೆ ಮೀಸಲಿಟ್ಟಿಿದ್ದುಘಿ, ಅದರಲ್ಲಿ 14 ಸಾವಿರದ ಕೋ. ರೂ. ಪಂಚ ಗ್ಯಾಾರಂಟಿ ಯೋಜನೆಯ 1 ಕೋ.10ಲಕ್ಷ ಲಾನುಭವಿಗಳಿಗೆ ವೆಚ್ಚ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ ಮಾರ್ಗಸೂಚಿಯಂತೆ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ಅದೇ ಸಮುದಾಯದವರಿಗೆ ಖರ್ಚು ಮಾಡಲು ಆಯಾ ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಅದರ ಅನುಸಾರವೇ ಈ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿಿದೆ ಆದರೆ ಈ ಹಿಂದೆ ಬಿಜೆಪಿ ಸರ್ಕಾರ 7ಡಿ ದುರ್ಬಳಕೆ ಮಾಡಿಕೊಂಡು ಪರಿಶಿಷ್ಟ ರಿಗೆ ಮೀಸಲಿಟ್ಟ ಅನುದಾನ ಅನ್ಯರಿಗೆ ಬಳಕೆ ಮಾಡಿಕೊಂಡಿತ್ತು ಎಂದು ಆರೋಪ ಮಾಡಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿಯ ಚೆಲುವಾದಿ ನಾರಾಯಣಸ್ವಾಾಮಿ, ಎನ್.ರವಿಕುಮಾರ್, ಸಿ.ಟಿ.ರವಿ, ಕೇಶವ ಪ್ರತಾಪ್, ಡಿ.ಎಸ್. ಅರುಣ್, ಸಾಬಣ್ಣ ತಳವಾರ್. ಸುನಿಲ್ ವಲ್ಯಾಾಪುರೆ, ಜೆಡಿಎಸ್ನ ಪುಟ್ಟಸ್ವಾಾಮಿ ಆಕ್ಷೇಪ ವ್ಯಕ್ತಪಡಿಸಿ ಪಂಚ ಗ್ಯಾಾರಂಟಿಗಳಿಗೆ ನೀಡುವ ಅನುದಾನ ರಾಜ್ಯ ಸರ್ಕಾರ ಎಲ್ಲಾಾ ಸಮುದಾಯದವರಿಗೆ ನೀಡಿದಂತೆ ಪರಿಶಿಷ್ಟರಿಗೂ ನೀಡುತ್ತಿಿದೆ. ಆದರೆ ಪರಿಶಿಷ್ಟರಿಗೆ ಖರ್ಚಾಗುವ ಅನುದಾನವನ್ನು ಎಸ್ಸಿಪಿ ಮತ್ತು ಟಿಎಸ್ಪಿಗೆ ಲಭ್ಯವಾಗುವ ಅನುದಾನದಲ್ಲಿ ಏಕೆ ಬಳಕೆ ಮಾಡಿಕೊಲ್ಳುತ್ತೀರಿ ಎಂದು ಪ್ರಶ್ನೆೆ ಮಾಡಿದರು.
ಮುಂಗಡ ಪತ್ರದ ಶೇ.24.1 ರಷ್ಟು ಅನುದಾನದಿಂದ 39 ಸಾವಿರ ಕೋ.ರೂ ಲಭ್ಯವಾಗುತ್ತಿಿದೆ. ಆ ಅನುದಾನದಲ್ಲಿ ಪಂಚ ಗ್ಯಾಾರಂಟಿಗಳ 14 ಸಾವಿರ ಕೋ.ರೂ. ಬಳಕೆ ಮಾಡಿಕೊಳ್ಳಲಾಗಿದೆ. ಇಷ್ಟು ಅನುದಾನ ಪರಿಶಿಷ್ಟರ ಇತರೆ ಶೈಕ್ಷಣಿಕ, ಆರ್ಥಿಕ, ಮೂಲಭೂತ ಸೌಲಭ್ಯ, ನೀರಾವರಿ ಸೌಲಭ್ಯಕ್ಕೆೆ ಬಳಸಿಕೊಂಡಿದ್ದರೆ ಅವರ ಜೀವನ ಸುಧಾರಣೆಯಾಗುತ್ತಿಿತ್ತುಘಿ. ಆದರೆ, ಅದನ್ನು ಬಿಟ್ಟು ರಾಜಕೀಯ ಉದ್ದೇಶಕ್ಕಾಾಗಿ ನೀಡಿದ ಭರವಸೆಗಳಾದ ಪಂಚ ಗ್ಯಾಾರಂಟಿಗೆ ಪರಿಶಿಷ್ಟರ ಹಣ ಬಳಕೆ ಮಾಡಿಕೊಳ್ಳುತಿರುವುದಕ್ಕೆೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಸಚಿವ ಪ್ರಿಿಯಾಂಕ್ ಖರ್ಗೆ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಾಗ ಪ್ರಧಾನ ಮಂತ್ರಿಿ ಕೃಷಿ ಸಿಂಚಾಯಿ ಯೋಜನೆ, ಪೋಷಣ್ ಅಭಿಯಾನ, ಅಮೃತ ನಗರ, ಪ್ರಧಾನ ಮಂತ್ರಿಿ ರೈತ ಸಮ್ಮಾಾನ್, ಭಾಗ್ಯಲಕ್ಷ್ಮಿಿ ಯೋಜನೆಗಳಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲಾನುಭವಿಗಳಿಗೆ ಎಸ್ಸಿಪಿ ಮತ್ತು ಟಿಎಸ್ಪಿ ಯಲ್ಲಿ ಮೀಸಲಾದ ಅನುದಾನವೇ ಬಳಕೆ ಮಾಡಿಕೊಂಡಿತ್ತುಘಿ. ಆಗ ಬಿಜೆಪಿಯವರಿಗೆ ಈ ಪರಿಜ್ಞಾನ ಇರಲಿಲ್ಲವೇ ಎಂದು ತಿರುಗೇಟು ನೀಡಿದರು.
ಕಾಂಗ್ರೆೆಸ್ನ ಪ್ರಕಾಶ್ ರಾಥೋಡ್, ಸುಧಾಮ್ ದಾಸ್ ಮಾತನಾಡಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡು ನೀತಿ ಆಯೋಗದ ನಿಯಮದಂತೆಯೇ ರಾಜ್ಯ ಸರ್ಕಾರ ಪರಿಶಿಷ್ಟರಿಗಾಗಿಯೇ ಈ ಅನುದಾನ ಬಳಕೆ ಮಾಡಿಕೊಂಡಿದ್ದುಘಿ, ಇದರಲ್ಲಿ ಯಾವುದೇ ತಪ್ಪಿಿಲ್ಲ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾನಾಯಕ ಎನ್.ಎಸ್.ಭೋಸರಾಜು ಸರ್ಕಾರದ ನಿರ್ಧಾರ ಸರಿಯಾಗಿದೆ. ಪರಿಶಿಷ್ಟರಿಗಾಗಿಯೇ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿಿದೆ ಎಂದು ಹೇಳುತ್ತಿಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಾಗ ಮಾಡಿದರು.