ಒಟ್ಟಾರೆ 32 ಪ್ರಕರಣ ದಾಖಲಾಗಿದ್ದರಿಂದ ಚಟುವಟಿಕೆ ನಿಯಂತ್ರಿಸಲು ಗಡಿಪಾರು ಆದೇಶ : ಇಂದು ಮಾನ್ವಿ ತಲುಪುವ ಸಾಧ್ಯತೆ
ಸುದ್ದಿಮೂಲ ವಾರ್ತೆ ಮೈಸೂರು, ಸೆ.23:
ಸೌಜನ್ಯ ಪರ ಹೋರಾಟಗಾರ ಮತ್ತು ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆಯುತ್ತಿಿರುವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹೇಶ್ ಶೆಟ್ಟಿಿ ತಿಮರೋಡಿ ಅವರನ್ನು ಬೆಳ್ತಂಗಡಿಯಿಂದ ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿಿಗೆ ಗಡಿಪಾರು ಮಾಡಲಾಗಿದೆ.
ಬೆಳ್ತಂಗಡಿ ಪೊಲೀಸರ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ ಒಂದು ವರ್ಷ ಕಾಲ ತಿಮರೋಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಸದ್ಯ ಬೆಳ್ತಂಗಡಿಯಲ್ಲಿ ವಾಸ ಆಗಿರುವ ತಿಮರೋಡಿ ಮುಂದಿನ ಒಂದು ವರ್ಷಗಳ ಕಾಲ ಮಾನ್ವಿಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವಾಸಿಸಬೇಕಾಗುತ್ತದೆ.
ಮಹೇಶ್ ಶೆಟ್ಟಿಿ ತಿಮರೋಡಿ ವಿರುದ್ಧ ಕೊಲೆ ಯತ್ನ, ಹಲ್ಲೆ, ಬೆದರಿಕೆ, ಸಾರ್ವಜನಿಕ ಆಸ್ತಿಿಗೆ ಹಾನಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ 32 ಪ್ರಕರಣಗಳು ದಾಖಲಾಗಿವೆ. ಅವರ ಚಟುವಟಿಕೆಗಳು ಸಮಾಜಕ್ಕೆೆ ಅಪಾಯಕಾರಿ ಎಂದು ಬೆಳ್ತಂಗಡಿ ಪೊಲೀಸರು ವರದಿ ಮಾಡಿದ್ದರು. ಪೊಲೀಸರ ವರದಿ ಆಧರಿಸಿ ಪುತ್ತೂರು ಸಹಾಯ ಆಯುಕ್ತರಾದ ಸ್ಟೆೆಲ್ಲಾ ವರ್ಗಿಸ್ ಅವರು ತಿಮರೋಡಿ ಅವರನ್ನು ಒಂದು ವರ್ಷಗಳ ಕಾಲ ಮಾನ್ವಿಿಗೆ ಗಡಿಪಾರು ಮಾಡಿ ಆದೇಶ ಹೊರಿಡಿಸಿದ್ದಾರೆ.
ಈ ಆದೇಶದ ಪ್ರಕಾರ, ಮಹೇಶ ಶೆಟ್ಟಿಿ ತಿಮರೋಡಿ ಅವರು ಮುಂದಿನ ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗಕ್ಕೆೆ ಪ್ರವೇಶಿಸುವಂತಿಲ್ಲ. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಗಡಿಪಾರು ಮಾಡಿದ ಆದೇಶ ಪ್ರತಿ ಬಂಟ್ವಾಾಳ ಉಪವಿಭಾಗ ಡಿವೈಎಸ್ಪಿಗೆ ತಲುಪಿದ ಬಳಿಕ ಗಡಿಪಾರು ಮಾಡುವ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಚಿನ್ನಯ್ಯಗೆ ಆಶ್ರಯ ನೀಡಿದ್ದ ತಿಮರೋಡಿ :
ಸದ್ಯ ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಪ್ರಕರಣ ತನಿಖೆ ನಡೆಯುತ್ತಿಿದ್ದು, ನೂರಾರು ಮಂದಿಯನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ ಚಿನ್ನಯ್ಯ ಅವರಿಗೆ ಚಿನ್ನಯ್ಯನಿಗೆ ತಿಮರೋಡಿ ಆಶ್ರಯ ನೀಡಿದ್ದರು. ಹೀಗಾಗಿ ತಿಮರೋಡಿ ಎಸ್ಐಟಿ ತನಿಖೆಯನ್ನೂ ಸಹ ಎದುರಿಸಿದ್ದರು.
ಆದರೆ, ಸದ್ಯ ತಿಮರೋಡಿ ಅವರನ್ನು ಗಡಿಪಾರು ಮಾಡಿರುವ ಪ್ರಕರಣಗಳು ತುಂಬಾ ಹಳೆಯವು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರೂ ಆಗಿರುವ ಮಹೇಶ್ ಶೆಟ್ಟಿಿ ತಿಮರೋಡಿ ಕೋಮುಗಲಭೆ, ಗೋಸಾಗಾಟ ಮಾಡುವವರ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ ಕೇಸ್ ದಾಖಲು ಮಾಡಲಾಗಿತ್ತು.
ಕೆಲ ವರ್ಷಗಳಿಂದೀಚೆಗೆ ತಿಮರೋಡಿ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಈಗ ಧರ್ಮಸ್ಥಳ ಪ್ರಕರಣದಲ್ಲೂ ಸಹ ಕಾಣಿಸಿಕೊಂಡು ಪ್ರಮುಖ ಪಾತ್ರ ವಹಿಸಿದ್ದರಿಂದ ಹಲವು ಗುಮಾನಿಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ತಿಮರೋಡಿ ಮನೆಯಲ್ಲಿ ಶಸಾಸಗಳು ಪತ್ತೆೆಯಾಗಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧವೂ ಸಹ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊೊಳಗಾಗಿ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದಾರೆ.
ತಿಮರೋಡಿ ವಿರುದ್ಧ ಹಲವು ವರ್ಷಗಳಿಂದ ಒಟ್ಟಾಾರೆ 32 ಪ್ರಕರಣ ಇರುವುದರಿಂದ ಜಿಲ್ಲೆಯಲ್ಲಿ ಇವರ ಚುಟವಟಿಕೆಗಳನ್ನು ನಿಯಂತ್ರಿಿಸಲು ಮಾನ್ವಿಿಗೆ ಗಡಿಪಾರು ಮಾಡಲಾಗಿದೆ. ಆದರೆ, ಗಡಿಪಾರು ಆದೇಶ ತಿಮರೋಡಿ ಅವರಿಗೆ ಖುದ್ದಾಗಿ ತಲುಪಿಸಿದ ಬಳಿಕ ಅವರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಿಯೆ ಬುಧವಾರ ನಡೆಯುವ ಸಾಧ್ಯತೆ ಇದೆ.