ಸುದ್ದಿಮೂಲ ವಾರ್ತೆ ಯಾದಗಿರಿ, ಸೆ.25:
ಪಾಪಿ ತಂದೆಯಿಂದಲೇ ಇಬ್ಬರ ಮಕ್ಕಳ ಬರ್ಬರ ಹತ್ಯೆೆ ನಡೆದ ಅತ್ಯಂತ ಅಮಾನುಷ ಕೃತ್ಯ ಇಲ್ಲಿಗೆ ಸಮೀಪದ ಹತ್ತಿಿಕುಣಿ ಗ್ರಾಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಶರಣಪ್ಪ ದುಗನೂರ ಎಂಬ ಕಟುಕ ತಂದೆಯೇ ತನ್ನ ಇಬ್ಬರು ಮಕ್ಕಳನ್ನೇ ಕೊಲೆ ಮಾಡಿದ ಕೊಲೆಪಾತಕ. ನಾಲ್ಕು ವರ್ಷದ ಮಗಳು ಸ್ವಾಾನಿ ಮತ್ತು ಮೂರು ವರ್ಷದ ಭಾರ್ಗವ ಎಂಬಿಬ್ಬ ಎಳೆ ಮಕ್ಕಳು ಮೃತಪಟ್ಟರೆ, ಎಂಟು ವರ್ಷದ ಹೇಮಂತ ಎಂಬ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನನ್ನು ಚಿಕಿತ್ಸೆೆಗಾಗಿ ಆಸ್ಪತ್ರೆೆಗೆ ದಾಖಲಿಸಲಾಗಿದೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಕೊಲೆಗಳು ನಡೆದಿವೆ ಎಂದು ಹೇಳಲಾಗುತ್ತಿಿದ್ದು, ಗುರುವಾರ ಬೆಳಗ್ಗೆೆ ಕೊಲೆಗಡುಕ ಶರಣಪ್ಪನ ಹೆಂಡತಿ ನಿಸರ್ಗದ ಕರೆಗೆ ಹೊರಗೆ ಹೋದಾಗ ಕೊಡಲಿಯಿಂದ ಮಕ್ಕಳನ್ನು ಕೊಲೆ ಮಾಡಿದ್ದಾಾನೆ. ಕೊಲೆ ಮಾಡಿದ ಬಳಿಕ ಶರಣಪ್ಪ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆೆ ಯಾದಗಿರಿ ಗ್ರಾಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಹಣಮಂತ ಬಂಕಲಗಿ ಭೇಟಿ ತನಿಖೆ ನಡೆಸಿದ್ದಾಾರೆ. ಈ ಭಯಾನಕ ಘಟನೆಯಿಂದ ಗ್ರಾಾಮದಲ್ಲಿ ಕೊಲೆ ಮಾಡಿದ ಪಾಪಿಯ ಬಗ್ಗೆೆ ಆಕ್ರೋೋಶ ವ್ಯಕ್ತವಾಗಿದೆ. ಕುಟುಂಬಸ್ಥರು, ಮೃತ ಮಕ್ಕಳ ಶವಗಳ ಮುಂದೆ ನಲುಗಿ ಕಣ್ಣೀರು ಹಾಕುವ ದೃಶ್ಯ ಮನಕಲಕುವಂತೆ ಮಾಡಿದೆ.

