ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.25:
ಕಲ್ಯಾಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಿಸಿ ನೀರಿನ ಲಭ್ಯತೆ ಸುಧಾರಿಸುವ ಉದ್ದೇಶದಿಂದ, ಸಣ್ಣ ನೀರಾವರಿ ಹಾಗೂ ಕೆಕೆಆರ್ಡಿಬಿ ಸಹಭಾಗಿತ್ವದಲ್ಲಿ ಶಿರಪುರ ಮಾದರಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾಾನಗೊಳಿಸಲು ಚಿಂತನೆ ನಡೆಸಲಾಗುತ್ತಿಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರ ಗ್ರಾಾಮಕ್ಕೆೆ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಸಚಿವರು ಭೇಟಿ ನೀಡಿ ಯೋಜನೆಯ ಸಮಗ್ರ ಮಾಹಿತಿ ್ನ ಪಡೆದುಕೊಂಡರು.
ಶಿರಪುರ ಮಾದರಿ ಯೋಜನೆ (ಖಜ್ಟಿ್ಠ್ಟಿ ಟಛ್ಝಿಿ – ಮಳೆ ನೀರಿನ ಸಂಗ್ರಹಣೆಯ ಮೂಲಕ ಭೂಗರ್ಭ ಜಲಮಟ್ಟ ಹೆಚ್ಚಿಿಸುವ ಮಾದರಿ) ಎಂಬುದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರ ಗ್ರಾಾಮದಲ್ಲಿ ಯಶಸ್ವಿಿಯಾಗಿ ಅನುಷ್ಠಾಾನಗೊಂಡ ಜಲ ಸಂರಕ್ಷಣೆ ಮತ್ತು ಮಳೆ ನೀರಿನ ಸಂಗ್ರಹಣೆಯ ಆಧಾರಿತ ಯೋಜನೆಯಾಗಿದೆ. ಇದರ ಉದ್ದೇಶ ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಿಸುವುದು ಮತ್ತು ನೀರಿನ ಲಭ್ಯತೆ ಸುಧಾರಿಸುವುದು. ಈ ಮಾದರಿ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರಿನ ಭದ್ರತೆ ಒದಗಿಸುವಲ್ಲಿ ಮಾದರಿಯಾಗಿದೆ. ಹಳ್ಳಗಳನ್ನು ಅಭಿವೃದ್ಧಿಿಪಡಿಸಿ ವೈಜ್ಞಾನಿಕವಾಗಿ ಸರಣಿ ಚೆಕ್ ಡ್ಯಾಾಂಗಳನ್ನು ನಿರ್ಮಿಸುವ ಮೂಲಕ ಮಳೆ ನೀರನ್ನು ಹರಿದು ಹೋಗದಂತೆ ತಡೆದು ಅಂತರ್ಜಲ ಮಟ್ಟವನ್ನು ಹೆಚ್ಚಿಿಸುವಲ್ಲ ಯಶಸ್ವಿಿಯಾಗಿದೆ. ಇದರಿಂದ ಬರಪೀಡಿತ ಶಿರಪುರ ತಾಲ್ಲೂಕು ಇಂದು ಹಸಿರಿನಿಂದ ನಳನಳಿಸುತ್ತಿಿದೆ.
ಈ ಯೋಜನೆಯ ಬಗ್ಗೆೆ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿಿನಲ್ಲಿ ಶಿರಪುರ ತಾಲ್ಲೂಕಿನ ಹಳ್ಳಿಿಗಳಿಗೆ ಭೇಟಿ ನೀಡಲಾಯಿತು. ಈ ವೇಳೆ, ಈ ಯೋಜನೆಯ ರೂವಾರಿಗಳಾದ ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವರು ಹಾಗೂ ಪ್ರಸ್ತುತ ವಿಧಾನಪರಿಷತ್ ಸದಸ್ಯ ಅಮರೀಶ್ ಬಾಯಿ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.
ಈಗಾಗಲೇ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸುಮಾರು 16 ಗ್ರಾಾಮಗಳಲ್ಲಿ ಈ ಮಾದರಿಯನ್ನು ಪ್ರಾಾಯೋಗಿಕವಾಗಿ ಅನುಷ್ಠಾಾನಗೊಳಿಸಲಾಗಿದೆ. 56 ಕಿ.ಮೀ ಉದ್ದದ ನಾಲೆಗಳಲ್ಲಿ 52 ಚೆಕ್ಡ್ಯಾಾಂಗಳನ್ನು ನಿರ್ಮಿಸಲಾಗಿದೆ. ಇದೇ ಮಾದರಿಯನ್ನು ಕಲ್ಯಾಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿ ಅನುಷ್ಠಾಾನಗೊಳಿಸುವ ಉದ್ದೇಶ ಹೊಂದಿದ್ದೇವೆ. ಕರ್ನಾಟಕವನ್ನು ಜಲಸುಸ್ಥಿಿರ ರಾಜ್ಯವನ್ನಾಾಗಿ ರೂಪಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಕೆಕೆಆರ್ಡಿಬಿ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾಾನಗೊಳಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಿಗಳೊಂದಿಗೆ ಚರ್ಚಿಸಿ ಈ ಬಗ್ಗೆೆ ತೀರ್ಮಾನ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು.