ಸುದ್ದಿಮೂಲ ವಾರ್ತೆ ಬೀದರ, ಸೆ.25:
ತಾಲೂಕಿನ ಇಮಾಮಪೂರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ-2025ರ ಮತದಾನವು ದಿನಾಂಕ: 27-09-2025 ರಂದು ಬೆಳಿಗ್ಗೆೆ 9 ರಿಂದ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ನಾರಂಜಾ ಸ.ಸಾ.ಕ.ನಿ.ಇಮಾಪೂರ ಹಾಗೂ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಅಂತಿಮ ಅರ್ಹ ಮತದಾರರ ಪಟ್ಟಿಿಯಲ್ಲಿ ಒಟ್ಟು 4438 ಮತದಾರರು ಇರುತ್ತಾಾರೆ. ಸುಗಮವಾಗಿ ಮತ ಚಲಾವಣೆಗಾಗಿ ಒಟ್ಟು 10 ಮತದಾನ ಕೇಂದ್ರಗಳು (ಬೂತ್) ಸ್ಥಾಾಪಿಸಲಾಗಿದೆ. ಇದರಲ್ಲಿ ಔರಾದ ತಾಲ್ಲೂಕ: 02, ಬಸವಕಲ್ಯಾಾಣ ತಾಲ್ಲುಕ: 01, ಭಾಲ್ಕಿಿ ತಾಲ್ಲೂಕ: 01, ಬೀದರ ತಾಲ್ಲೂಕ: 04, ಹುಮನಾಬಾದ ತಾಲ್ಲೂಕ: 02 ಇರುತ್ತವೆ. ಆಯಾ ತಾಲ್ಲೂಕಿನ ಮತದಾರರು ತಮ್ಮ ತಾಲ್ಲೂಕಿನ ಮತ ಕೇಂದ್ರದಲ್ಲಿ ಮತ ಚಲಾವಣೆ ಮಾಡುವುದು. ಮತ ಚಲಾವಣೆಗಾಗಿ ಕಾರ್ಖಾನೆ ನೀಡಿರುವ ಅಧಿಕೃತ ಗುರುತಿನ ಚೀಟಿ ಮೂಲಕ ಮತ ಚಲಾವಣೆ ಮಾಡುವುದು. ಮತದಾನ ಸುಗಮವಾಗಿ ನಡೆಸುವ ಸಂಬಂಧ ಸಕಲ ಸಿದ್ಧತೆ ಹಾಗೂ ಸೂಕ್ತ ಪೊಲೀಸ್ ಬಂದೊಬಸ್ತ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಕ್ಸ್
4 ಅವಿರೋಧ ಆಯ್ಕೆೆ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿಿ ಸೇರಿ ನಾಲ್ವರು ಅವಿರೋಧವಾಗಿ ಆಯ್ಕೆೆಯಾಗಿದ್ದಾರೆ.
ಒಟ್ಟು 13 ಸ್ಥಾಾನಗಳಿವೆ. ಉಳಿದ 9 ಸ್ಥಾಾನಗಳಿಗೆ ಮತದಾನ ನಡೆಯಲಿದ್ದು, ಉಮಾಕಾಂತ್ ನಾಗಮಾರಪಳ್ಳಿಿ ಪೆನಾಲ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮಧ್ಯೆೆ ಪೈಪೋಟಿ ಏರ್ಪಟ್ಟಿಿದೆ. ಸದ್ಯದ ವಾತಾವರಣ ನೋಡಿದರೆ ನಾಗಮಾರಪಳ್ಳಿಿ ಸಹೋದರರ ಪೆನಾಲ್ ಪರ ಬೆಂಬಲ ವ್ಯಕ್ತವಾಗುತ್ತಿಿದೆ. ಕಳೆದ ಎರಡು ದಶಕಗಳಿಗಿಂತ ಹೆಚ್ಚುಕಾಲದಿಂದ ನಾಗಮಾರಪಳ್ಳಿಿ ಕುಟುಂಬದ ಹಿಡಿತದಲ್ಲೇ ಕಾರ್ಖಾನೆ ನಡೆಯುತ್ತಾಾ ಬಂದಿದೆ.
ಬಾಕ್ಸ್
ಮತದಾರರ ಪಟ್ಟಿಿಯಲ್ಲಿ ಅಕ್ರಮ
ನಾರಂಜಾ ಸಹಕಾರ ಸಕ್ಕರೆ ಚುನಾವಣೆ ಮತದಾರರ ಪಟ್ಟಿಿಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಚುನಾವಣೆ ತಡೆ ಕೋರಿ ಕಲಬುರಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದ ಪತ್ರಿಿಕಾಗೋಷ್ಟಿಿಯಲ್ಲಿ ಅವರು ಮಾತನಾಡಿದರು.
ಅಂದಾಜು 25 ಸಾವಿರದಷ್ಟಿಿದ್ದ ಮತದಾರರ ಪೈಕಿ ಕೇವಲ 4300 ಮತದಾರರು ಮಾತ್ರ ಮತದಾನಕ್ಕೆೆ ಅರ್ಹತೆ ಹೊಂದಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಿಯಲ್ಲಿ ಅವ್ಯವಹಾರ ನಡೆಸಿರುವ ಹಾಗೇ ಕಾಣುತ್ತಿಿದೆ. ಸಹಕಾರಿ ಕ್ಷೇತ್ರದಲ್ಲಿ ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಪಕ್ಷದ ಮುಖಂಡರಾದ , ಈಶ್ವರಸಿಂಗ್ ಠಾಕೂರ್, ರಾಜಶೇಖರ್ ನಾಗಮೂರ್ತಿ, ಬಾಬು ವಾಲಿ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ್ ಪಾಟಿಲ್ ಉತ್ತಂಗಿ, ಸಂಜು ರೆಡ್ಡಿಿ ಸಿದ್ದಾ ರೆಡ್ಡಿಿ,, ಶ್ರೀಧರ ತಂದೆ ಚಂದ್ರಪ್ಪ, ವೀರಣ್ಣ ಹಲಗೆ, ಸುರಜಸಿಂಗ್ ರಾಜಪುತ, ಪಕ್ಷದ ಮಾಧ್ಯಮ ಪ್ರಮುಖ ಶ್ರೀನಿವಾಸ್ ಚೌಧರಿ ಹಾಗೂ ಇತರರು ಪತ್ರಿಿಕಾಗೋಷ್ಠಿಿಯಲ್ಲಿದ್ದರು.

