ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.25:
ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪಡೆದರು.
ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಹಿತಿಗಳು ಹಾಗೂ ಸಾರ್ವಜನಿಕರು ಪಡೆದರು.
ಸಾಹಿತ್ಯಾಾಸಕ್ತರು, ಅವರ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ ಎಸ್. ಎಲ್. ಬೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಭೈರಪ್ಪನವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರಿನಲ್ಲೇ ಎಸ್. ಎಲ್. ಭೈರಪ್ಪ ಅವರ ಸ್ಮಾಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಬಿಜೆಪಿ ನಾಯಕರು ಹೇಳುತ್ತಿಿದ್ದಾರೆ ಅಂತ ನಾವು ಸ್ಮಾಾರಕ ಮಾಡುತ್ತಿಿಲ್ಲ.ಭೈರಪ್ಪ ಅವರ ಕರ್ಮ ಕ್ಷೇತ್ರದಲ್ಲೇ ಸ್ಮಾಾರಕ ಮಾಡುತ್ತೇವೆ. ಅನೇಕ ವಿಚಾರಗಳಲ್ಲಿ ಭಿನ್ನಾಾಭಿಪ್ರಾಾಯ ಇದ್ದರೂ ಕೂಡ, ಅದು ಬೇರೆ . ಅವರ ಸಾಹಿತ್ಯ, ಜ್ಞಾನಕ್ಕಾಾಗಿ ಸ್ಮಾಾರಕ ಮಾಡುತ್ತೇವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾಾರ ನೆರವೇರುತ್ತದೆ ಎಂದು ತಿಳಿಸಿದರು.
ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ. ಅವರು ಸುಮಾರು 25 ಕಾದಂಬರಿ ಬರೆದಿದ್ದಾರೆ. ಮೈಸೂರಲ್ಲಿ ಹೆಚ್ಚು ಕಾಲ ವಾಸವಾಗಿದ್ದರು. ಪ್ರೌೌಢಶಾಲೆಯಿಂದ – ಎಂಎವರೆಗೆ ಮೈಸೂರಲ್ಲಿ ವಿದ್ಯಾಾಭ್ಯಾಾಸ ಮಾಡಿದ್ದಾರೆ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆ ಆಗಿವೆ ಎಂದರು.
ಬಹಳ ಕಷ್ಟಪಟ್ಟು ಮೇಲೆ ಬಂದ ಅವರು ಬಹಳ ಓದುಗರನ್ನು ಸಂಪಾದನೆ ಮಾಡಿದ್ದರು. ಅವರ ವಿಷಯ ತತ್ವಶಾಸ ಆಶ್ಚರ್ಯ ಏನಂದ್ರೆೆ ಬೋಧನೆ ಮಾಡುತ್ತಲೇ ಸಾಹಿತ್ಯ ಕೃಷಿ ಮಾಡಿದರು. ಕಾದಂಬರಿ ಬರೆಯೋದು ತಮ್ಮ ಆತ್ಮತೃಪ್ತಿಿಗಾಗಿ ಅಂತ ಹೇಳ್ತಿಿದ್ದರು. ಅವರ ಬದುಕಿನ ಅನುಭವದ ಮೇಲೆ ಕಾದಂಬರಿ ಬರೆದರು.
ಡಿಸಿಎಂ ಡಿ. ಕೆ. ಶಿವಕುಮಾರ್ ಮಾತನಾಡಿ, ಎಸ್. ಎಲ್. ಭೈರಪ್ಪ ಅವರ ಆತ್ಮಕ್ಕೆೆ ಶಾಂತಿ ಸಿಗಲಿ ಎಂದು ಶ್ರದ್ಧಾಾಂಜಲಿ ಸಲ್ಲಿಸಿದ್ದೇನೆ. ಕನಕಪುರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಭೈರಪ್ಪ. ಆಗ ಭೈರಪ್ಪ ಅವರು ಪರಿಚಯವಾಗಿದ್ದು. ಅವರು ಬರವಣಿಗೆಯಲ್ಲಿ ರಾಜಿ ಆಗುತ್ತಿಿರಲಿಲ್ಲ. ಅವರ ಕಾದಂಬರಿ ಹೊರ ದೇಶದಲ್ಲಿ ಭಾಷಾಂತರ ಆಗಿದ್ದು, ವಿಭಿನ್ನ ಭಾಷೆಯಲ್ಲಿ ಭಾಷಾಂತರ ಆಗಿದ್ದು, ಕಾದಂಬರಿಗಳು ಸಿನಿಮಾಗಳಾಗಿರುವುದು ನಾವು ಮೆಲುಕು ಹಾಕುವಂತಹ ವಿಷಯ ಎಂದು ಸ್ಮರಿಸಿದರು.
ದೇಶದ ಎಲ್ಲಾ ಗಣ್ಯರು ಕೂಡ ಕಂಬನಿ ಮಿಡಿದಿದ್ದಾರೆ. ಅವರ ಸಿದ್ಧಾಾಂತ, ನಿಲುವು, ನಡೆ, ಸಾಹಿತ್ಯ ಲೋಕಕ್ಕೆೆ ಮಾತ್ರವಲ್ಲದೆ ಎಲ್ಲಾ ವರ್ಗಕ್ಕೂ ಮಾರ್ಗದರ್ಶನ. ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಸ್ಮಾಾರಕ ನಿರ್ಮಾಣ ಮಾಡುವುದು ವೈಯಕ್ತಿಿಕ ನಿರ್ಧಾರ ಅಲ್ಲ. ಕ್ಯಾಾಬಿನೆಟ್ ಅಲ್ಲಿ ತೀರ್ಮಾನ ಮಾಡಬೇಕು. ಸ್ಮಾಾರಕ ನಿರ್ಮಿಸುವಂತೆ ಮನವಿಗಳು ಬರುತ್ತಿಿವೆ. ಈ ಬಗ್ಗೆೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಭೈರಪ್ಪ ನಾಡಿನ ಸಾಕ್ಷಿ ಪ್ರಜ್ಞೆ:
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮಾತನಾಡಿ, ಅದ್ವಿಿತೀಯ ಸಾಹಿತಿ ಎಸ್. ಎಲ್. ಭೈರಪ್ಪ ವಿಧಿವಶರಾಗಿದ್ದಾರೆ. ಅವರು ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದರು. ಸಾರಸ್ವತ ಲೋಕಕ್ಕೆೆ ಅಪಾರ ಕೊಡುಗೆ ನೀಡಿದ ಅವರ ನಿಧನದಿಂದ ಕನ್ನಡ ನಾಡು ಅನಾಥವಾಗಿದೆ. ದೇಶ-ವಿದೇಶದ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ದೇವರು ಅವರ ಆತ್ಮಕ್ಕೆೆ ಸದ್ಗತಿ ಕರುಣಿಸಲಿ ಎಂದು ತಿಳಿಸಿದರು.