ಸುದ್ದಿಮೂಲ ವಾರ್ತೆ ರಾಯಚೂರು, ಸೆ.25:
ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರತಿಯೊಂದು ಸಮಾಜವೂ ತಮ್ಮದೇಯಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿಿತ ಯುವಕರಿಗೆ ವೇದಿಕೆ ಕಲ್ಪಿಿಸುವ ಮೂಲಕ ಈ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ದೊರೆಯುವಂತೆ ಮಾಡುವ ಅಗತ್ಯವಿದೆಯೆಂದು ಸಾಂಸ್ಕೃತಿಕ ರೂವಾರಿ, ಮುನ್ನೂರುಕಾಪು ಸಮಾಜದ ಹಿರಿಯರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿಿ ಅವರು ಹೇಳಿದರು.
ಅವರು ಗುರುವಾರ ನಗರದ ಗದ್ವಾಾಲ್ ರಸ್ತೆೆಯಲ್ಲಿರುವ ಶ್ರೀಲಕ್ಷಮ್ಮದೇವಿ ಮತ್ತು ಕಾಳಿಕಾಂಬ ದೇವಸ್ಥಾಾನದಲ್ಲಿ ಆಯೋಜಿಸಿದ ನವರಾತ್ರಿಿ ಉತ್ಸವದ ಅಂಗವಾಗಿ ನಡೆದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ಪರಂಪರೆ ರಕ್ಷಣೆಯೊಂದಿಗೆ ಇಂತಹ ಈ ಕಾರ್ಯಕ್ರಮಗಳಿಂದ ಈ ಭಾಗದ ಸಾಂಸ್ಕೃತಿಕ ಪ್ರತಿಭೆ, ಕ್ರೀೆಡಾಪ್ರತಿಭೆಗಳಿಗೆ ಅವಕಾಶ ದೊರೆಯುವಂತೆ ಮಾಡಬೇಕು. ಆದರೆ, ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು ಅನೇಕ ಪ್ರತಿಭೆಗಳು ಅವಕಾಶ ವಂಚಿತಗೊಳ್ಳುವಂತಾಗಿವೆ.
ಆದರೆ, ಮುನ್ನೂರುಕಾಪು ಸಮಾಜ ಕಳೆದ 25 ವರ್ಷಗಳಿಂದ ಸಾಂಸ್ಕೃತಿಕ ರೂವಾರಿಯಾಗಿ ಮುಂಗಾರು ಸಾಂಸ್ಕೃತಿಕ ಹಬ್ಬದೊಂದಿಗೆ ಈಗ ದಸರಾ ನವರಾತ್ರೋೋತ್ಸವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಭಾಗದಲ್ಲಿ ಪ್ರತಿಭಾನ್ವಿಿತ ಸಾಂಸ್ಕೃತಿಕ ತಂಡಗಳಿಗೆ ವೇದಿಕೆ ಕಲ್ಪಿಿಸಿದೆ. ಈ ರೀತಿ ವಿವಿಧ ಸಮುದಾಯಗಳು ಕಾರ್ಯಕ್ರಮಗಳನ್ನು ರೂಪಿಸುವತ್ತ ಗಮನ ಹರಿಸಬೇಕು. ನಗರದಲ್ಲಿ ಕೋಟ್ಯಾಾಂತರ ರೂ.ಸಂಪಾದಿಸುವ ಶ್ರೀಮಂತರು ತಮ್ಮ ತಮ್ಮ ಸಮಾಜದಲ್ಲಿ ಕಾರ್ಯಕ್ರಮ ರೂಪಿಸಲು ಉದಾತ್ತವಾಗಿ ನೆರವು ನೀಡಿ, ಸಾಂಸ್ಕೃತಿಕ ಮೆರಗು ಎತ್ತಿಿ ಹಿಡಿಯಬೇಕಾಗಿದೆ.ಸಾಂಸ್ಕೃತಿಕ ನಿರ್ವಹಿಸಬೇಕೆಂಬ ಉದ್ದೇಶದಿಂದ ಸಮಾಜವೂ ಈ ಕಾರ್ಯಕ್ರಮ ನಡೆಸುತ್ತಿಿದೆಂದು ಹೇಳಿದ ಅವರು, ಹೆಚ್ಚಿಿನ ಸಂಖ್ಯೆೆಯಲ್ಲಿ ವಿವಿಧ ಸಮಾಜಗಳು ಕಾರ್ಯಕ್ರಮ ಆಯೋಜನೆಗೆ ಮುಂದಾಗಲಿ ಎಂದು ಕರೆ ನೀಡಿದರು.
ಸ್ಥಳೀಯ ಕಾಲೇಜು ವಿದ್ಯಾಾರ್ಥಿಗಳು ಸೇರಿ ರಾಜ್ಯದ ವಿವಿಧ ಕಾಲೇಜು ವಿದ್ಯಾಾರ್ಥಿಗಳು ಅತ್ಯುತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. ಧಾರ್ಮಿಕ ಮತ್ತು ಗ್ರಾಾಮೀಣ ಸೊಗಡಿನ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.
ಟ್ಯಾಾಗೋರ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಆರ್. ಕೆ .ಅಮರೇಶ ಅವರು ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ,ದಸರಾ ಹಬ್ಬ ಎಂದರೆ ಸಂಸ್ಕೃತಿ ಉತ್ಸವದ ಉದ್ದೇಶ ಹೊಂದಿದೆ.ದಸರಾ ಹಬ್ಬ ಎಲ್ಲಾ ಜನಾಂಗದ ಶಾಂತಿ ತೋಟ, ಮುನ್ನೂರು ಕಾಪು ಸಮಾಜದ ಪಾಪಾರೆಡ್ಡಿಿ ಅವರು ಸಾಂಸ್ಕೃತಿಕ ರೂವಾರಿ, ಮುನ್ನೂರು ಕಾಪು ಸಮಾಜದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ನವರಾತ್ರಿಿ ಉತ್ಸವ ಅತ್ಯಂತ ಅದ್ದೂರಿಯಾಗಿ ನಡೆಸಲಾಗುತ್ತಿಿದೆ ಎಂದರು.
ನಂತರ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಮಿರ್ಜಾಪೂರು ಅವರು ಮಾತನಾಡಿ, ಮುನ್ನೂರು ಕಾಪು ಸಮಾಜ ನವರಾತ್ರಿಿ ಹಬ್ಬವನ್ನು ವರ್ಷದಿಂದ ವರ್ಷಕ್ಕೆೆ ಬಹಳ ಅಚ್ಚುಕಟ್ಟಾಾಗಿ ನಿರ್ವಹಿಸಲಾಗುತ್ತಿಿದೆ.ಕರ್ನಾಟಕ ಕಿರೀಟ ಎ. ಪಾಪಾರೆಡ್ಡಿಿ ಎಂದೇ ಹೇಳುವುದು ತಪ್ಪಾಾಗಲಾರದು, ಪಾಪಾರೆಡ್ಡಿಿ ಅವರು ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಿಸುವ ಕಾರ್ಯ ಅತ್ಯಂತ ಶ್ಲಾಾಘನೀಯ ಎಂದರು.
ಉಪನ್ಯಾಾಸಕರಾಗಿ ಆಗಮಿಸಿದ ಹಿರಿಯ ಸಾಹಿತಿ ವೀರ ಹನುಮಾನ್ ಅವರು ಮಾತನಾಡಿ, ಮುಂಗಾರು ಹಬ್ಬದ ವೈಭವದ ನಂತರ ನವರಾತ್ರಿಿ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಅದ್ದೂರಿ ಆಚರಿಸಲಾಗುತ್ತಿಿದೆ. ಸಾಂಸ್ಕೃತಿಕವಾಗಿ ಇದ್ದರೆ ಮಾತ್ರ ಅಂತಹ ನಾಡು ಶ್ರೀಮಂತಿಕೆಯಿಂದ ಉಳಿಯಲು ಸಾಧ್ಯವಾಗುತ್ತಿಿದೆ. ಹಬ್ಬದ ಹರಿದಿನಗಳಲ್ಲಿ ಹಬ್ಬ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಭಾರತ ಇತಿಹಾಸದಲ್ಲಿ ಹಬ್ಬದಲ್ಲಿ ಹೆಣ್ಣು ದೇವತೆಗಳಿಗೆ ಹೆಚ್ಚಿಿನ ರೀತಿಯಲ್ಲಿ ಪೂಜೆ ಕಾರ್ಯಕ್ರಮ ನಡೆಸಲಾಗುವುದು. ಮೈಸೂರ ಮತ್ತು ನವರಾತ್ರಿಿ ಬಗ್ಗೆೆ ಸುವಿಸ್ತಾಾರವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿಿ, ಉಟ್ಕೂರು ಕೃಷ್ಣಮೂರ್ತಿ, ಗದಾರ ಬೆಟ್ಟಪ್ಪ, ನಂದಾ ಕಟ್ಟಿಿಮನಿ, ಷಣ್ಮುಖಪ್ಪ , ವೆಂಕಟಪೂರು, ಮಹಾನಗರ ಪಾಲಿಕೆ ಸದಸ್ಯ ಎನ್ ಕೆ ನಾಗರಾಜ, ಪೋಗಲ್ ಶ್ರೀನಿವಾಸ್ ರೆಡ್ಡಿಿ, ಬುಡತಪಗಾರು ರಾಘವೇಂದ್ರ ರೆಡ್ಡಿಿ, ಆರ್. ಕೆ ಅಮರೇಶ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ರೆಡ್ಡಿಿ, ಮಹೇಂದ್ರರೆಡ್ಡಿಿ, ಜಿ.ಶೇಖರ್ ರೆಡ್ಡಿಿ, ಪಾಳ್ಯ ಮಲ್ಲೇಶ, ಪುಂಡ್ಲ ರಾಜೇಂದ್ರರೆಡ್ಡಿಿ, ಬಂಗಿ ಮುನಿರೆಡ್ಡಿಿ,ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಸೇರಿದಂತೆ ಉಪಸ್ಥಿಿತರಿದ್ದರು.
ಮುನ್ನೂರುಕಾಪು ಸಮಾಜ : ದಸರಾ ನವರಾತ್ರೋೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸಮಾಜಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ -ಎ.ಪಾಪಾರೆಡ್ಡಿಿ
