ಸುದ್ದಿಮೂಲ ವಾರ್ತೆ ಸಿಂಧನೂರು, ಸೆ.27:
ಕಲ್ಯಾಾಣ ಕರ್ನಾಟಕ ಭಾಗದಲ್ಲಿಯೇ ಅತಿ ದೊಡ್ಡ ತಾಲೂಕೆಂದೇ ಖ್ಯಾಾತಿಯಾದ ಸಿಂಧನೂರಿನಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಶನಿವಾರ ಉದ್ಘಾಾಟಿಸಿದರು.
ನಂತರ ಆಸ್ಪತ್ರೆೆಯೊಳಗೆ ಭೇಟಿ ನೀಡಿ, ವಿವಿಧ ಸೌಲಭ್ಯಗಳ ಬಗ್ಗೆೆ ಮಾಹಿತಿ ಪಡೆದರು. ಇದಕ್ಕೂ ಮುನ್ನ ಸತ್ಯಗಾರ್ಡನ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಿಲ್ಲಾಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರೊಂದಿಗೆ 53 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಶಂಕುಸ್ಥಾಾಪನೆ ಹಾಗೂ ಉದ್ಘಾಾಟನೆ ನೆರವೇರಿಸಿದರು. 28.5 ಕೋಟಿ ವೆಚ್ಚದಲ್ಲಿ ಜಿಲ್ಲಾಾಸ್ಪತ್ರೆೆ ನಿರ್ಮಾಣ, 6 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣ, 20 ಕೋಟಿ ವೆಚ್ಚದಲ್ಲಿ ಸರಕಾರಿ ಮಹಾವಿದ್ಯಾಾಲಯದ ಕಟ್ಟಡ ನಿರ್ಮಾಣ, 1.48 ಕೋಟಿ ವೆಚ್ಚದಲ್ಲಿ ತಾ.ಪಂ.ನಲ್ಲಿ ತರಬೇತಿ ಕೇಂದ್ರ ಹಾಗೂ ಕಲ್ಚರಲ್ ಹಾಲ್ ನಿರ್ಮಾಣ, 1.46 ಕೋಟಿ ವೆಚ್ಚದಲ್ಲಿ ಸರಕಾರಿ ಬಾ.ಪ.ಪೂ ಕಾಲೇಜು ಕಟ್ಟಡ ನಿರ್ಮಾಣ ಹಾಗೂ 10 ಕೋಟಿ ವೆಚ್ಚದಲ್ಲಿ ಅಕ್ಕಮಹಾದೇವಿ ಮಹಿಳಾ ಸ್ನಾಾತಕೋತ್ತರ ಕೇಂದ್ರದ ವಸತಿ ನಿಲಯದ ಶಂಕುಸ್ಥಾಾಪನೆ ನೆರವೇರಿಸಿ, 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತಾ.ಪಂ.ನ ನೂತನ ಕಟ್ಟಡ ಉದ್ಘಾಾಟಿಸಿದರು.