ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.27:
ರಾಜ್ಯ ಸರ್ಕಾರಿ ಸ್ವಾಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಾಷನಲ್ ಲಿಮಿಟೆಡ್ (ಎಂಎಸ್ಐಎಲ್) ವಾರ್ಷಿಕ 10,000 ಕೋಟಿ ರೂ. ವಹಿವಾಟು ಗುರಿಯ ಚಿಟ್ ಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಂಎಸ್ಐಎಲ್ ಸದ್ಯಕ್ಕೆೆ ವಾರ್ಷಿಕ 500 ಕೋಟಿ ರೂ. ಮೊತ್ತದ ಚಿಟ್ ಂಡ್ ನಡೆಸುತ್ತಿಿದೆ, ಕೇರಳ ಸರ್ಕಾರ ವರ್ಷಕ್ಕೆೆ ಒಂದು ಲಕ್ಷ ಕೋಟಿ ರೂ. ಮೊತ್ತದ ಚಿಟ್ ಂಡ್ ನಡೆಸುತ್ತಿಿದೆ. ಎಂಎಸ್ಐಎಲ್ ಉಪಕ್ರಮ ಸಂಪೂರ್ಣ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ, ಈ ಸಂಬಂಧ ಮುಖ್ಯಮಂತ್ರಿಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಾಟನೆ ಮಾಡಲಾಗುವುದು ಎಂದು ಹೇಳಿದರು.
ಒಂದು ಶತಮಾನದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸೋಸಲೆ ಗರಳಪುರಿ ಶಾಸಿಗಳು ಒಟ್ಟಾಾಗಿ ಮೈಸೂರು ಸ್ಯಾಾಂಡಲ್ ಸೋಪ್ ಕಾರ್ಖಾನೆ ಆರಂಭಿಸಿದ್ದು, ಸಂಸ್ಥೆೆ ‘ಕಾಂತಾರ- ಚಾಪ್ಟರ್-1’ ಚಲನಚಿತ್ರಕ್ಕೆೆ ಸುಗಂಧ ಭಾಗೀದಾರ ಆಗಿದೆ. ಸಂಸ್ಥೆೆ ಉತ್ಪನ್ನಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಮಾರುಕಟ್ಟೆೆ ಸಿಗಲಿದೆ, ಜೊತೆಗೆ ಚಿತ್ರ ಬಿಡುಗಡೆ ಮಾಡುವ 30 ದೇಶಗಳಲ್ಲಿ ಸಂಸ್ಥೆೆ ಉತ್ಪನ್ನಗಳು ಜನರನ್ನು ತಲುಪಲಿವೆ, ’ಕಾಂತಾರ’ ಸುಗಂಧ ಭಾಗೀದಾರ ಆಗುವ ಮೂಲಕ ಮಾರುಕಟ್ಟೆೆ ವಿಭಾಗ ಮತ್ತಷ್ಟು ಶಕ್ತಗೊಳ್ಳಲಿದೆ ಎಂದು ಅಭಿಪ್ರಾಾಯಪಟ್ಟರು.
ಕೆಎಸ್ಡಿಎಲ್ 1,700 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿಿದ್ದು, 415 ಕೋಟಿ ರೂ. ಲಾಭ ಗಳಿಸಿದೆ, ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ.ಗೆ ಕೊಂಡೊಯ್ಯಲಾಗುವುದು ಎಂದರು.
ಔಷಧೋತ್ಪನ್ನಗಳ ಮೇಲೆ ಅಮೆರಿಕ ಸುಂಕ
ಭಾರತದ ಔಷಧೋತ್ಪನ್ನಗಳ ಮೇಲೆ ಅಮೆರಿಕ ಹೇರುತ್ತಿಿರುವ ವಿಪರೀತ ಸುಂಕ ಸಮಸ್ಯೆೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಾಯಿಸಿದರು.
ಉತ್ಪಾಾದನೆ ಹಾಗೂ ರಫ್ತಿಿನಲ್ಲಿ ಚೀನಾ, ವಿಯಟ್ನಾಾಂ ನಮಗಿಂತ ಮುಂದಿವೆ, ಈ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹಾಕಿದ್ದಾರೆ, ಆದರೆ, ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿರುವುದು ನಮ್ಮ ದೇಶದ ಉತ್ಪಾಾದಕರಿಗೆ ಭಾರೀ ಹೊಡೆತ ಬೀಳುತ್ತಿಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ‘ಅಬ್ ಕೀ ಬಾರ್ ಟ್ರಂಪ್’ ಎಂದು ಪ್ರಚಾರ ಮಾಡಿದ್ದರಾದರೂ, ಜೋ ಬೈಡನ್ ಗೆದ್ದರು, ಅವರು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ, ಈ ಬಾರಿ ಗೆದ್ದು ಬಂದ ಟ್ರಂಪ್ ಭಾರತದ ಉತ್ಪನ್ನಗಳ ಆಮದು ಮೇಲೆ ಅತಾರ್ಕಿಕ ಸುಂಕ ವಿಧಿಸುತ್ತಿಿದ್ದು, ನಾವು ಇದರ ದುಷ್ಪರಿಣಾಮ ಎದುರಿಸಬೇಕಾಗಿದೆ ಎಂದು ಹೇಳಿದರು.

