ಸುದ್ದಿಮೂಲ ವಾರ್ತೆ ಸಿಂಧನೂರು, ಸೆ.27:
ಅತಿವೃಷ್ಠಿಿಯಿಂದ ರಾಯಚೂರು ಜಿಲ್ಲೆೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆ ಮಾಡಿ ಸರಕಾರಕ್ಕೆೆ ವರದಿ ಸಲ್ಲಿಸುವಂತೆ ಜಿಲ್ಲಾಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ರಾಯಚೂರು ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ವಿವಿಧ ಕಾಮಗಾರಿಗಳ ಉದ್ಘಾಾಟನೆಗೆ ಹಾಗೂ ಶಂಕುಷ್ಠಾಾಪನೆಗೆ ಆಗಮಿಸಿದ್ದ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸುಮಾರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿಿದೆ. ಇದರಿಂದ ಹತ್ತಿಿ, ಭತ್ತ, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಕ-ಕ ಭಾಗದಲ್ಲಿ ಅತಿವೃಷ್ಠಿಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿವೆ. ಈ ಹಿಂದೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸಹ ಬೆಳೆಹಾನಿ ವೀಕ್ಷಣೆ ಮಾಡಿದ್ದಾಾರೆ. ರಾಯಚೂರು ಜಿಲ್ಲೆೆಯ ಬೆಳೆಹಾನಿ ವರದಿ ಸರಕಾರಕ್ಕೆೆ ಸೇರುತ್ತಿಿದ್ದಂತೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.
ಶೀಘ್ರ ತೀರ್ಮಾನ:
ಅತಿಥಿ ಉಪನ್ಯಾಾಸಕರ ನೇಮಕಕ್ಕೆೆ ಬಂಧಿಸಿದಂತೆ ನ್ಯಾಾಯಾಲಯದಲ್ಲಿ ಇರುವುದರಿಂದ ತೊಂದರೆಯಾಗಿದೆ. ಉನ್ನತ ಶಿಕ್ಷಣ ಹಾಗೂ ಕಾನೂನು ಇಲಾಖೆಯ ಸಚಿವರ ನೇತೃತವ್ವದಲ್ಲಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಲಿದೆ. ಶೀಘ್ರವೇ ಸರಕಾರ ತೀರ್ಮಾನ ಕೈಗೊಂಡು ವಿದ್ಯಾಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಗೊಂದಲ ಸಲ್ಲ:
ಮಸ್ಕಿಿ ವಿಧಾನಸಭಾ ಕ್ಷೇತ್ರದ ಸಿಂಧನೂರು ತಾಲೂಕಿನ 19 ಹಳ್ಳಿಿಗಳನ್ನು ಮಸ್ಕಿಿ ತಾಲೂಕಿಗೆ ಸೇರ್ಪಡೆ ಮಾಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಪರಿಶೀಲಿಸುವಂತೆ ಜಿಲ್ಲಾಾಧಿಕಾರಿಗಳಿಗೆ ಸೂಚನೆ ನೀಡಿದ್ದೇನು. ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೇರ್ಪಡೆ ಸಲ್ಲ ಎನ್ನುವ ಬಗ್ಗೆೆ ಅವರು ಪತ್ರ ಬರೆದಿದ್ದರು. ಇಲ್ಲಿ ಇಬ್ಬರ ಶಾಸಕರ ಅಭಿಪ್ರಾಾಯಕ್ಕಿಿಂತ ಆಡಳಿತಾತ್ಮಕ ದೃಷ್ಠಿಿಯಿಂದ ಸ್ಥಳೀಯ ಅಭಿಪ್ರಾಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದರು.
ಸಾಮಾಜಿಕ ಬದ್ದತೆ:
ರಾಜ್ಯ ಸರಕಾರ ಕೈಗೊಂಡಿರುವ ಗಣತಿ ಜಾತಿಗೆ ಸಿಮೀತವಾಗಿಲ್ಲ. ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿಿತಿಗತಿ ಅರಿತು ಸಾಮಾಜಿಕ ನ್ಯಾಾಯದಡಿ ಮುಂದೆ ಯೋಜನೆಗಳನ್ನು ರೂಪಿಸಲು ಅನುಕೂಲವಾಗುವಂತೆ ಗಣತಿ ಮಾಡಲಾಗುತ್ತಿಿದೆ. ಬಿಜೆಪಿಗೆ ಸಾಮಾಜಿಕ ನ್ಯಾಾಯ ಬೇಕಿಲ್ಲ. ಬಡವರ ಬಗ್ಗೆೆ ಕಾಳಜಿಯಿಲ್ಲ. ನಮ್ಮದು ಬಡವರ ಪರ ಇರುವದು ನಮ್ಮ ಸಾಮಾಜಿಕ ಬದ್ಧತೆ ಎಂದರು.
ಅಂತಿಮ ನಿರ್ಧಾರ:
ರಾಜ್ಯ ಸರಕಾರ ಆರಂಭಿಸಿರುವ ಗಣತಿಯಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ ಬೇಡ. ಈಗಾಗಲೇ ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರದಂತೆ ಧರ್ಮದ ಕಲಂನಲ್ಲಿ ಹಿಂದು, ಜಾತಿ ಕಲಂ ನಲ್ಲಿ ಲಿಂಗಾಯತ, ಉಪಜಾತಿ ಕಲಂ ನಲ್ಲಿ ತಮ್ಮ ತಮ್ಮ ಉಪಜಾತಿಗಳನ್ನು ಬರೆಯಿಸಲು ಅಂತಿಮ ನಿರ್ಧಾರವಾಗಿದೆ. ಲಿಂಗಾಯತ ಸಮಾಜದ ಎಲ್ಲಾಾ ಉಪಪಂಗಡಗಳು ಇದನ್ನೇ ಅನುಸರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಶಾಸಕ ಹಂಪನಗೌಡ ಬಾದರ್ಲಿ, ಜಿಲ್ಲಾಾಧಿಕಾರಿ ನಿತೀಶ ಕೆ, ಜಿ.ಪಂ. ಸಿಇಓ ಈಶ್ವರ್ ಕಾಂದೂ ಹಾಗೂ ಇತರರು ಇದ್ದರು.

