ಸುದ್ದಿಮೂಲ ವಾರ್ತೆ ಬೀದರ್, ಸೆ.27:
ಸದಾ ಸಮಸ್ಯೆೆಗಳ ಆಗರದ ಸುದ್ದಿಯಿಂದಲೇ ಕುಖ್ಯಾಾತಿ ಗಳಿಸಿರುವ ನಗರದ ಬ್ರಿಿಮ್ಸ್ ಆಸ್ಪತ್ರೆೆ ಮತ್ತೆೆ ಸುದ್ದಿಯಲ್ಲಿದೆ.
ಸತತ ಮಳೆ ಹಿನ್ನಲೆ ಟಾಯ್ಲೆೆಟ್ ನೀರು ಹೊರಗಡೆ ಹೋಗದೇ ಬ್ರಿಿಮ್ಸ್ ಆಸ್ಪತ್ರೆೆಯ ಬಾಣಂತಿಯರ ವಾರ್ಡ್ಗೆ ಶುಕ್ರವಾರ ರಾತ್ರಿಿ ನುಗ್ಗಿಿ ರಾದ್ಧಾಾಂತ ಸೃಷ್ಟಿಿಯಾಗಿದೆ. ಕೆಲ ಬಾಣಂತಿಯರಿಗೆ ಬೇರೆಡೆ ಶ್ಟ್ಿ ಮಾಡಿದ್ದು, ಇನ್ನೂ ಕೆಲವರಿಗೆ ಸ್ಥಳಾವಕಾಶ ಕೊರತೆಯಿಂದ ಅದೇ ವಾರ್ಡ್ ನಲ್ಲಿ ಇರಿಸಿದ್ದಾರೆ. ಗಬ್ಬು ನಾರುತ್ತಿಿರುವ ಟಾಯ್ಲೆೆಟ್ ನೀರಿನ ವಾಸನೆಯಲ್ಲೇ ಬಾಣಂತಿಯರೊಂದಿಗೆ ಸಂಬಂಧಿಗಳು ಎಚ್ಚರ ಸ್ಥಿಿತಿಯಲ್ಲೇ ರಾತ್ರಿಿ ಕಳೆದಿರುವುದಾಗಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆೆ ರಾತ್ರಿಿಯೇ ಬ್ರಿಿಮ್ಸ್ ನ ಸಿಬ್ಬಂದಿಗಳ ಗಮನಕ್ಕೆೆ ತಂದರೂ ಯಾರೊಬ್ಬರೂ ಕ್ರಮಕ್ಕೆೆ ಮುಂದಾಗಿಲ್ಲ ಎಂದು ಆಸ್ಪತ್ರೆೆ ಆಡಳಿತ ಮಂಡಳಿ ವಿರುದ್ಧ ಬಾಣಂತಿಯರ ಸಂಬಂಧಿಗಳು ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಚಿಕಿತ್ಸೆೆ ಹಾಗೂ ಔಷಧೋಪಚಾರ ಕೊರತೆಯಿಂದ ಸದಾ ಸುದ್ದಿಯಲ್ಲಿರುವ ಬ್ರಿಿಮ್ಸ್ ಆಸ್ಪತ್ರೆೆ ಸುಧಾರಿಸುವುದು ಯಾವಾಗ ? ಎಂಬ ಪ್ರಶ್ನೆೆ ಉದ್ಭವವಾಗಿದೆ.
ನಿಲ್ಲದ ಬ್ರಿಿಮ್ಸ್ ಅವಾಂತರ ಬಾಣಂತಿಯರ ವಾರ್ಡ್ ಗೆ ನುಗ್ಗಿಿದ ಟಾಯ್ಲೆೆಟ್ ನೀರು !
