ಸುದ್ದಿಮೂಲ ವಾರ್ತೆ ಕಲಬುರಗಿ, ಸೆ.28:
ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ನದಿ ಪಾತ್ರದ ಗ್ರಾಾಮಗಳು ತತ್ತರಿಸಿಹೋಗಿದ್ದು, ಪ್ರವಾಹದಿಂದ ಹಲವು ಗ್ರಾಾಮಗಳು ಜಲಾವೃತಗೊಂಡು ಸಂಪೂರ್ಣ ಜನ ಜೀವನ ಅಸ್ತವ್ಯಗೊಂಡಿದೆ.
ಕಲಬುರಗಿ ತಾಲೂಕಿನ ಸರಡಗಿ(ಬಿ), ಜೇವರ್ಗಿ ತಾಲೂಕಿನ ಕಟ್ಟಿಿ ಸಂಗಾವಿ, ಕೂಡಿ, ಕೋಬಾಳ್, ಮಲ್ಲಾ ಕೆ, ಮಲ್ಲಾ ಬಿ, ಬೀರಾಳ, ಹೊತ್ತಿಿನಮಡು, ಹೊನ್ನಾಾಳ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತುತ್ತಾಾಗಿದ್ದು, ಜನರು ಸಂಕಷ್ಟಕ್ಕೆೆ ಸಿಲುಕಿದ್ದಾರೆ.
ಕಲಬುರಗಿ ತಾಲೂಕಿನ ಸರಡಗಿ(ಬಿ) ಗ್ರಾಾಮವು ಭೀಮೆಯ ಪ್ರವಾಹಕ್ಕೆೆ ತುತ್ತಾಾಗಿ ಅಕ್ಷರಶಃ ನಲುಗಿಹೋಗಿದೆ. ಸಂಪೂರ್ಣ ಗ್ರಾಾಮ ಜಲಾವೃತಗೊಂಡಿದ್ದು, ಹಲವು ಮನೆಗಳು ಅರ್ಧದಷ್ಟು ಮುಳುಗಡೆಗೊಂಡಿದ್ದು, ಗ್ರಾಾಮವು ದ್ವೀಪಪ್ರದೇಶದಂತಾಗಿದೆ.
ಸರಡಗಿ(ಬಿ) ಗ್ರಾಾಮಕ್ಕೆೆ ಭೀಮಾ ನದಿ ನೀರು ನುಗ್ಗಿಿ ನಾಲ್ಕು ದಿನಗಳು ಆದರೂ ನಮ್ಮ ಗ್ರಾಾಮಕ್ಕೆೆ ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ್ ಅವರು ಭೇಟಿ ನೀಡಿಲ್ಲ ಎಂದು ಗ್ರಾಾಮಸ್ಥರು ಭಾರಿ ಆಕ್ರೋೋಶ ವ್ಯಕ್ತಪಡಿಸಿದರು.
ಮತ ಕೇಳಲು ಬರುವ ಶಾಸಕರು, ಜನಪ್ರತಿನಿಧಿಗಳು, ಕಳೆದ ನಾಲ್ಕು ದಿನಗಳಿಂದ ಗ್ರಾಾಮದಲ್ಲಿ ನೀರು ಹೊಕ್ಕಿಿವೆ, ಆದರೆ ಇಲ್ಲಿಯವರೆಗೆ ಯಾರು ಬಂದಿಲ್ಲ. ನಮ್ಮ ಸಮಸ್ಯೆೆ ಕೇಳುತ್ತಿಿಲ್ಲ. ಸರಿಯಾಗಿ ಊಟ ಸಹ ನೀಡಿಲ್ಲ ಎಂದು ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದರು.
ಭೀಮಾ ನದಿ ಪ್ರವಾಹದಿಂದ ನಮ್ಮ ಮನೆಗಳಿಗೆ ನೀರು ನುಗ್ಗಿಿ ಮನೆಗಳು ಸಂಪೂರ್ಣ ಹಾಳಾಗಿವೆ, ನಮ್ಮಗೆ ಮನೆಗಳನ್ನು ಕಲ್ಪಿಿಸಬೇಕು ಎಂದು ಗ್ರಾಾಮದ ಅನೇಕ ಮಹಿಳೆಯರು ಸರ್ಕಾರಕ್ಕೆೆ ಮನವಿ ಮಾಡಿದರು.
ಪ್ರವಾಹದಲ್ಲಿ ಕೊಚ್ಚಿಿ ಹೋದ ಮೀನುಗಾರರ ಬದುಕು:
ಸರಡಗಿ(ಬಿ) ಗ್ರಾಾಮದ ಭೀಮಾ ನದಿ ಪಾತ್ರದಲ್ಲಿ ಮೀನುಗಾರಿಕೆ ಮೂಲಕ ಜೀವನ ಕಟ್ಟಿಿಕೊಂಡಿದ ಮೀನುಗಾರರ ಕುಟುಂಬದ ಬದುಕು ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿಿಕೊಂಡು ಹೋಗಿದೆ.
ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿಿದ ಮೀನುಗಾರರ 8 ಮನೆಗಳಿಗೆ ನದಿ ನೀರು ನುಗ್ಗಿಿ, ಮೀನುಗಾರಿಕೆ ಬಲೆ, ಕಿಸ್ತಿಿ ನೀರಿನಲ್ಲಿ ಕೊಚ್ಚಿಿಕೊಂಡು ಹೋಗಿ ನದಿ ಪಾಲಾಗಿವೆ ಎಂದು ಮೀನುಗಾರರ ಕುಟುಂಬದವರು ತಮ್ಮ ನೋವು ತೋಡಿಕೊಂಡರು.
ಭೀಮಾ ನದಿ ಪ್ರವಾಹದಿಂದಾಗಿ ಕುಟುಂಬದಲ್ಲಿನ ಮಕ್ಕಳು, ಗರ್ಭಿಣಿ ಮಹಿಳೆ ಜತೆಗೆ ಕಾಳಜಿ ಕೇಂದ್ರದಲ್ಲಿ ಬಂದು ಉಳಿದ್ದಿದ್ದೇವೆ. ನಮಗೆ ಶಾಶ್ವತ ಪುನರ್ ವಸತಿ ಕಲ್ಪಿಿಸಬೇಕು. ಕಳೆದ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ನಮ್ಮಗೆ ಪುನರ ವಸತಿ ಕಲ್ಪಿಿಸುತ್ತೇವೆ ಎಂದು ಹೇಳಿದರು. ಆದರೆ ಇಲ್ಲಿಯವರೆಗೂ ಕಲ್ಪಿಿಸಿಲ್ಲ. ಈ ಬಾರಿ ನಮ್ಮಗೆ ಪುನರ ವಸತಿ ಕಲ್ಪಿಿಸಬೇಕು ಎಂದು ಮೀನುಗಾರ ಕುಟುಂಬ ಮಹಿಳೆ ಭೀಮಭಾಯಿ ಸರ್ಕಾರಕ್ಕೆೆ ಮನವಿ ಮಾಡಿದರು.
ರಾಷ್ಟೀಯ ಹೆದ್ದಾರಿ ಬಂದ್ :
ಭೀಮಾ ನದಿ ಪ್ರವಾಹದ ಹಿನ್ನಲೆ ಬೀದರ್ – ಶ್ರೀರಂಗಪಟ್ಟಣ ರಾಷ್ಟೀಯ ಹೆದ್ದಾರಿಯನ್ನು ಕಟ್ಟಿಿ ಸಂಗಾವಿ ಹಾಗೂ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಭೀಮಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಾಗಿ ಕಟ್ಟಿಿ ಸಂಗಾವಿ ಸೇತುವೆ ಮೇಲಿಂದ ನೀರು ಹರಿದಿದ್ದರಿಂದ ಸಂಚಾರ ಬಂದ್ ಮಾಡಲಾಗಿತ್ತು. ಇನ್ನೂ, ರಾಷ್ಟೀಯ ಹೆದ್ದಾರಿಯ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿಯ ಖಣಿ ಬಳಿ ಸಣ್ಣ ಸೇತುವೆ ಜಲಾವೃತಗೊಂಡಿದರಿಂದ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿಯೇ ಸಂಚಾರ ಬಂದ್ ಮಾಡಲಾಗಿತ್ತು. ಕಲಬುರಗಿ ಜೇವರ್ಗಿ ತೆರಳು ಪ್ರಯಾಣಿಕರು ಕೂಡಿ ಮಾರ್ಗವಾಗಿ ಸಂಚರಿಸಿದರು.

