ಸುದ್ದಿಮೂಲ ವಾರ್ತೆ ಕರೂರು, ಸೆ.28:
ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ತಮಿಳಿಗ ವೆಟ್ರಿಿ ಕಳಗಮ್ (ಟಿವಿಕೆ) ಪಕ್ಷದ ನಾಯಕ ವಿಜಯ್ ಅವರ ರ್ಯಾಾಲಿಯಲ್ಲಿ ನಡೆದ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆೆ 40ಕ್ಕೆೆ ಏರಿಕೆಯಾಗಿದೆ. ಮತ್ತೊೊಂದೆಡೆ ಘಟನೆಯ ಬಗ್ಗೆೆ ತನಿಖೆಗೆ ನಿವೃತ್ತ ನ್ಯಾಾಯಮೂರ್ತಿಯೊಬ್ಬರನ್ನು ನೇಮಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ನಟ ವಿಜಯ್ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ವಿಜಯ್ ಕರೂರು ತಲುಪಿ ಅಲ್ಲಿ ನೆರೆದಿದ್ದ ಬೃಹತ್ ಜನಸ್ತೋೋಮ ಉದ್ದೇಶಿಸಿ ಮಾತನಾಡುತ್ತಿಿದ್ದಂತೆ ಕೆಲವರು ಅಸ್ವಸ್ಥಗೊಂಡು ಮೂರ್ಛೆ ಹೋದರು. ಈ ವೇಳೆ ಉಂಟಾದ ಗದ್ದಲದಿಂದ ಕಾಲ್ತುಳಿತ ಉಂಟಾಗಿ ಸಾವಿನ ಸರಣಿ ಭಾನುವಾರವೂ ಮುಂದುವರಿದಿತ್ತು. ಘಟನೆಯಲ್ಲಿ 16 ಜನ ಮಹಿಳೆಯರು, 11 ಮಕ್ಕಳು ಸೇರಿ ಒಟ್ಟಾಾರೆ 40 ಮಂದಿ ಮೃತಪಟ್ಟರೆ, ಒಟ್ಟು 111 ಮಂದಿ ಗಾಯಗೊಂಡು ಆಸ್ಪತ್ರೆೆಗಳಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಿ ಎಂ.ಕೆ. ಸ್ಟಾಾಲಿನ್ ಅವರು ಭಾನುವಾರ ಘಟನಾ ಸ್ಥಳಕ್ಕೆೆ ಭೇಟಿ ನೀಡಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರಲ್ಲದೆ, ಗಾಯಾಳುಗಳನ್ನು ಭೇಟಿ ಮಾಡಿ ಶೀಘ್ರ ಚೇತರಿಕೆಗೆ ಹಾರೈಸಿದರು. ಈ ಮಧ್ಯೆೆ ಹೈಕೋರ್ಟ್ ನಿವೃತ್ತ ನ್ಯಾಾಯಮೂರ್ತಿ ಅರುಣಾ ಜಗದೀಶನ್ ಅವರನ್ನು ಘಟನೆಯ ಬಗ್ಗೆೆ ನ್ಯಾಾಯಾಂಗ ತನಿಖೆಗೆ ನೇಮಿಸಲಾಗಿದೆ.
ಪರಿಹಾರ ಘೋಷಿಸಿದ ವಿಜಯ್:
ಮೃತಪಟ್ಟವರ ಕುಟುಂಬಕ್ಕೆೆ ನಟ ವಿಜಯ್ ಅವರು 20 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸದ್ಯಕ್ಕೆೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ ಜೊತೆಗೆ ಅವರ ಚಿಕಿತ್ಸೆೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ವಿಜಯ್ ಹೇಳಿದ್ದಾರೆ.
‘ಕಾಲ್ತುಳಿತ ಘಟನೆಯಿಂದ ನಾನು ದುಃಖಿತನಾಗಿದ್ದೇನೆ. ನನ್ನನ್ನು ನೋಡಲು ಬಂದಿದ್ದ ನನ್ನ ಅಪ್ಪಟ ಅಭಿಮಾನಿಗಳು ಕಾಲ್ತುಳಿತಕ್ಕೆೆ ಒಳಗಾಗಿದ್ದು ನಿಜಕ್ಕೂ ದುರ್ದೈವದ ಸಂಗತಿ. ಅವರ ಅಗಲಿಕೆಯ ದುಃಖ ಅವರ ಕುಟುಂಬಕ್ಕೆೆ ಭರಿಸಲಾಗದ್ದು. ಅವರ ನೋವು ನನಗೆ ಅರ್ಥವಾಗುತ್ತೆೆ. ಇಂಥ ಸಂದರ್ಭದಲ್ಲಿ ನಾನು ನನ್ನ ಅಭಿಮಾನಿಗಳ ಕುಟುಂಬದೊಂದಿಗೆ ಇರುವುದು ನನ್ನ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ.
ಹೈಕೋರ್ಟ್ ಮೆಟ್ಟಿಿಲೇರಿದ ಟಿವಿಕೆ ಪಕ್ಷ
ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಷಡ್ಯಂತ್ರ ಎಂಬ ಅನುಮಾನ ಬರುತ್ತಿಿದ್ದು, ಈಬಗ್ಗೆೆ ಸೂಕ್ತ ತನಿಖೆ ನಡೆಸಬೇಕು ಎಂದು ಮದ್ರಾಾಸ್ ಹೈಕೋರ್ಟ್ ಮೊರೆ ಹೋಗಿದೆ. ನ್ಯಾಾಯಾಲಐವು ಸ್ವಯಂ ಪ್ರೇೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
ಕಾಲ್ತುಳಿತದ ವಿಡಿಯೋ ದೃಶ್ಯಾಾವಳಿಗಳಲ್ಲಿ ವಿಜಯ್ ಅವರು ಸಮಾರಂಭಕ್ಕೆೆ ಆಗಮಿಸುತ್ತಲೇ ಕಾಲ್ತುಳಿತ ಸಂಭವಿಸಿರುವುದು ಕಂಡುಬಂದಿದೆ. ವಿಜಯ್ ಅವರು ಬಹಿರಂಗ ಸಭೆಗೆ ಬರುತ್ತಲೇ ಜನಗಳ ಮಧ್ಯದಲ್ಲಿದ್ದ ಕೆಲವರು ಪೊಲೀಸರ ಕಡೆಗೆ ಕಲ್ಲು ತೂರಾಟ ನಡೆಸಿರುವುದು ಕಂಡುಬಂದಿದ್ದು ಇಡೀ ಕಾಲ್ತುಳಿತ ಪ್ರಕರಣ ಷಡ್ಯಂತ್ರವೇ ಎಂಬ ಅನುಮಾನ ಬರುತ್ತಿಿದೆ ನ್ಯಾಾಯಾಲಯಕ್ಕೆೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ