ವೃಷಭೇಂದ್ರಸ್ವಾಾಮಿ ನವಲಿ ಹಿರೇಮಠ ಕಾರಟಗಿ, ಸೆ.28:
ತುಂಗಭದ್ರಾಾ ಎಡದಂಡೆ ಮುಖ್ಯ ನಾಲಾ ವ್ಯಾಾಪ್ತಿಿಯ 31ನೇ ಉಪ ಮತ್ತು ಇದರ ಕೆಳಭಾಗದ ವಿವಿಧ ವಿತರಣಾ ಕಾಲುವೆಗಳ ವ್ಯಾಾಪ್ತಿಿಯ ಕಾರಟಗಿ ಮತ್ತು ಸಿಂಧನೂರು ತಾಲೂಕಿನ ನಾನಾ ಗ್ರಾಾಮಗಳ 15,605 ಎಕರೆಯಷ್ಟು ನೀರು ಬಾಧಿತ ಪ್ರದೇಶಕ್ಕೆೆ 62.61 ಕೋಟಿರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಉಳೇನೂರು ಏತ ನೀರಾವರಿ ಯೋಜನೆ ಕಾಮಗಾರಿ ಸೋಮವಾರ ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಲೋಕಾರ್ಪಣೆಗೊಳಿಸಲಿದ್ದಾಾರೆ.
ತುಂಗಭದ್ರಾಾ ಎಡದಂಡೆ ಮುಖ್ಯ ಕಾಲುವೆ ವ್ಯಾಾಪ್ತಿಿಯ 31ನೇ ಉಪ ಕಾಲುವೆಯ ಮೇಲ್ಭಾಾಗದ ರೈತರು ಕೃಷಿ ಚಟುವಟಿಕೆಗೆ ಅಕ್ರಮವಾಗಿ ಹೇರಳವಾಗಿ ನೀರು ಬಳಸುತ್ತಿಿದ್ದರಿಂದ ಅನೇಕ ವರ್ಷಗಳಿಂದ ಈ ಉಪ ಕಾಲುವೆ ಕೆಳಭಾಗದ ಕಾರಟಗಿ ತಾಲೂಕಿನ ಬೂದಗುಂಪಾ, ತಿಮ್ಮಾಾಪುರ, ಹಾಲಸಮುದ್ರ, ಯರಡೋಣ, ಈಳಿಗನೂರು, ಈಳಿಗನೂರು ಕ್ಯಾಾಂಪ್, ಉಳೇನೂರು, ಊಳೇನೂರು ಕ್ಯಾಾಂಪ್, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿಿ ಹಾಗೂ ಸಿಂಧನೂರು ತಾಲೂಕಿನ ಸಿಂಗಾಪುರ, ಮುಕ್ಕುಂದಾ, ಹುಡಾ ಹಾಗೂ ಸಿದ್ರಾಾಂಪುರ ಗ್ರಾಾಮಗಳ ರೈತರು ಪ್ರತಿ ವರ್ಷ ಕಾಲುವೆಗೆ ನೀರು ಹರಿಸಿದಾಗ ತಮ್ಮ ಭೂಮಿಗೆ ಸಮರ್ಪಕ ನೀರು ಪಡೆಯಲು ಎಡದಂಡೆ ಮುಖ್ಯ ಕಾಲುವೆ ಮೇಲಿನ 31ನೇ ಉಪ ಕಾಲುವೆ ಹತ್ತಿಿರ ನಿರಂತರ ಬೃಹತ್ ಪ್ರತಿಭಟನೆ ಮಾಡುತ್ತಾಾ ಬಂದಿದ್ದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಮೊದಲ ಬಾರಿಯ ಕಾಂಗ್ರೆೆಸ್ ಸರ್ಕಾರದ ಅವಧಿಯಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಇಂದಿನ ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಾಣ ಸಚಿವ ಶಿವರಾಜ ತಂಗಡಗಿ ಅವರು 31ನೇ ಉಪ ಕಾಲುವೆಯ ಕೆಳ ಭಾಗದ ರೈತರ ಭೂಮಿಗೆ ಸರ್ಮಕ ನೀರು ಹರಿಸಿ ನೀರಿನ ಸಮಸ್ಯೆೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾರಟಗಿ ತಾಲೂಕಿನ ಉಳೇನೂರು ಬಳಿಯ ತುಂಗಭದ್ರಾಾ ನದಿ ಪಾತ್ರದಲ್ಲಿ ಏತ ನೀರಾವರಿ ಯೋಜನೆ ನಿರ್ಮಾಣಕ್ಕೆೆ ಕ್ರೀೆಯಾ ಯೋಜನೆ ಸಿದ್ಧಪಡಿಸಿ ಅಗತ್ಯ ಅನುದಾನಕ್ಕಾಾಗಿ ಆಗಿನ ಸರ್ಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಿದ್ದರು. ನಂತರ ಆಗಿನ ಸರ್ಕಾರದ ಅವಧಿ ಮುಗಿಯಿತು. ನಂತರ ನಡೆದ ಚುನಾವಣೆಯಲ್ಲಿ ಶಿವರಾಜ ತಂಗಡಗಿ ಪರಾಭವಗೊಂಡರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆೆಗೊಂಡ ಬಸವರಾಜ ದಢೇಸೂಗೂರು ಈ ಯೋಜನೆಗೆ ಸರ್ಕಾದರ ಮೇಲೆ ಒತ್ತಡ ಹೇರಿ ರಾಜ್ಯ ಜಲ ಸಂಪನ್ಮೂಲ ಇಲಾಖೆ, ನೀರಾವರಿ ನಿಗಮ ನಿಯಮಿತದ 4701ರ ಯೋಜನೆಯಲ್ಲಿ 62.61ಕೋಟಿರೂ. ಅನುದಾನ ಮಂಜೂರು ಮಾಡಿಸಿ ಕಳೆದ 2019ರಲ್ಲಿ ಸದರಿ ಯೋಜನೆ ಕಾಮಗಾರಿಗೆ ದಢೇಸೂಗೂರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.
ಟೆಂಡರ್ ಷರತ್ತಿಿನಂತೆ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಗುತ್ತಿಿಗೆ ಪಡೆದ ಗುತ್ತಿಿಗೆದಾರರು ಕಳೆದ ಅಗಷ್ಟ್ 2019ರಲ್ಲಿ ಕಾಮಗಾರಿ ಆರಂಭಿಸಿದರು. ಮೊದಲು ಪಂಪ್ಹೌಸ್ ನಿರ್ಮಿಸಿ, ಬಳಿಕ 1250 ಹೆಚ್.ಪಿ. ಸಾಮರ್ಥ್ಯದ ನಾಲ್ಕು ಮೋಟಾರ್, ಜಾಕವೆಲ್, ರೈಸಿಂಗ್ ಮೇನ್ ಅಳವಡಿಸಿದರು. ಬಳಿಕ 33 ಕೆ.ವಿ.ಸಾಮರ್ಥ್ಯದ ವಿದ್ಯುತ್ ಘಟಕ ನಿರ್ಮಿಸಿದರು. ನಂತರ 13.19 ಕಿ.ಮೀಟರ್ ಉದ್ದಷ್ಟು ಪೈಪ್ಲೈನ್ ಕಾಮಗಾರಿ ಆರಂಭಿಸಲು ಮುಂದಾದಾಗ ರೈತರು ಪೈಪ್ ಅಳವಡಿಕೆ ಮಾರ್ಗ ಬದಲಿಸಲೇಬೇಕೆಂದು ಪಟ್ಟು ಹಿಡಿದು ಕಾಮಗಾರಿ ಸ್ಥಗಿತಗೊಳಿಸಿದರು. ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅನೇಕ ತಿಂಗಳುಗಳ ಬಳಿಕ ಪೈಪ್ಲೈನ್ ಮಾರ್ಗ ಬದಲಾವಣೆ ಮಾಡಿ ಪುನಃ ಸಕಾರದಿದ ಅಧಿಕೃತ ಅನುಮೋದನೆ ಪಡೆದರು. ಆ ಬಳಿಕ ಗುತ್ತೇದಾರರು ಬದಲಾದ ಮಾರ್ಗದಲ್ಲಿ ಪೈಪ್ಲೈನ್ ಮಾಡಿ ಕೊನೆಯಲ್ಲಿ ವಿದ್ಯುತ್ ಘಟಕಕ್ಕೆೆ ವಿದ್ಯುತ್ ಸಂಪರ್ಕಕ್ಕೆೆ ವಿದ್ಯುತ್ ಕಂಬ, ತಂತಿ ಅಳವಡಿಸಿದ್ದಾಾರೆ.
ಟೆಂಡರ್ ಪ್ರಕಾರ ಕಳೆದ 2021ಕ್ಕೆೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ನಾನಾ ತಾಂತ್ರಿಿಕತೆ ಮತ್ತು ರೈತರ ಅಡಚಣೆ, ಪೈಪ್ಲೈನ್ ಅಳವಡಿಕೆ ಮಾರ್ಗ ಬದಲಾವಣೆಯಿಂದಾಗಿ ಕೊನೆಗೂ ಆರು ವರ್ಷದ ಬಳಿಕ ಮತ್ತು ಹಿಂದೆ 2017ರಲ್ಲಿ ಈ ಯೋಜನೆಯ ಕ್ರಿಿಯಾ ಯೋಜನೆ ಸಿದ್ಧಪಡಿಸಿ ಅನುದಾನ ತಂದು ಅನುಷ್ಠಾಾನಕ್ಕೆೆ ಮುಂದಾಗಿದ್ದ ಈಗಿನ ಸಚಿವ ಶಿವರಾಜ ತಂಗಡಗಿ ಅವರಿಂದಲೇ ಇಂದು ಲೋಕಾರ್ಪಣೆಗೊಳ್ಳಲಿದೆ.
ತುಂಗಭದ್ರಾಾ ನದಿಯಲ್ಲಿ ನೀರು ಹರಿಯುವ ಸಮಯದಲ್ಲಿ ಮಾತ್ರ ಎಡದಂಡೆ ನಾಲಾ 31ನೇ ಉಪ ಕಾಲುವೆಯ 31/4ರ ಬಳಿ ಮತ್ತು 31/8ರ ಕೆಳ ಭಾಗದ ವಿತರಣಾ ಕಾಲುವೆಗಳಿಗೆ ನಿರಂತರ 98 ಕ್ಯೂಸೆಕ್ ಪ್ರಮಾಣದಷ್ಟು ಪೈಪ್ಲೈನ್ ಮೂಲಕ ಉಳೇನೂರು ಬಳಿಯ ಪಂಪ್ಹೌಸ್ನಿಂದ ನೀರು ಪೂರೈಕೆಯಾಗುತ್ತದೆ. ಈ ಯೋಜನೆ ಇಂದು ಲೋಕಾರ್ಪಣೆಗೊಳ್ಳುತ್ತಿಿರುವುದರಿಂದ ಈ ಯೋಜನೆಗೊಳಪಡುವ ಎಲ್ಲ ಗ್ರಾಾಮಗಳ ರೈತರು ಇನ್ನು ಮುಂದೆ ತಮ್ಮ ಜಮೀನಿಗೆ ಸಮರ್ಪಕ ಮತ್ತು ಸಕಾಲಕ್ಕೆೆ ನೀರು ಹರಿಯುತ್ತಿಿವೆ ಎಂದು ಹರ್ಷಿತರಾಗಿದ್ದಾಾರೆ.
15 ಸಾವಿರ ಅಧಿಕ ಎಕರೆ ನೀರು ಬಾಧಿತ ಪ್ರದೇಶಕ್ಕೆೆ ನೀರುಣಿಸುವ 62.60ಕೋಟಿ ರೂ. ವೆಚ್ಚದ ಉಳೇನೂರು ಏತ ನೀರಾವರಿ ಯೋಜನೆಗೆ ಇಂದು ಕೊಪ್ಪಳ ಜಿಲ್ಲಾಾ ಸಚಿವ ಶಿವರಾಜ ತಂಗಡಗಿಯವರಿಂದ ಲೋಕಾರ್ಪಣೆ
