ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.28:
ಖ್ಯಾಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನದ ಮಾತು (ಮನ್ ಕೀ ಬಾತ್) ನಲ್ಲಿ ಶನಿವಾರ ಸ್ಮರಿಸಿದರು.
ರೇಡಿಯೋದ ಮಾಸಿಕ ಕಾರ್ಯಕ್ರಮ ಮನದ ಮಾತು 125 ನೇ ಸಂಚಿಕೆಯಲ್ಲಿ ಭೈರಪ್ಪ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ.
ಯುವಜನತೆ ಭೈರಪ್ಪ ಅವರ ಕೃತಿಗಳನ್ನು ಓದಬೇಕೆಂದು ಮನವಿ ಮಾಡಿದ್ದಾರೆ. ದೇಶವು ಕೆಲವೇ ದಿನಗಳ ಹಿಂದೆ ಮಹಾನ್ ವಿಚಾರವಾದಿ, ಮತ್ತು ಚಿಂತಕ ಡಾ. ಎಸ್. ಎಲ್. ಭೈರಪ್ಪ ಅವರನ್ನು ಕಳೆದುಕೊಂಡಿತು. ಭೈರಪ್ಪ ಅವರೊಂದಿಗೆ ವೈಯಕ್ತಿಿಕ ಸಂಪರ್ಕ ಹೊಂದಿದ್ದ ತಾವು ಹಲವಾರು ಸಂದರ್ಭಗಳಲ್ಲಿ ವಿವಿಧ ವಿಷಯಗಳ ಕುರಿತು ಗಂಭೀರ ಮಾತುಕತೆಗಳನ್ನು ನಡೆಸಿದ್ದೇವೆ. ಎಸ್.ಎಲ್. ಭೈರಪ್ಪ ಅವರಿಗೆ ಹೃತ್ಪೂರ್ವಕ ಶ್ರದ್ಧಾಾಂಜಲಿ ಸಲ್ಲಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಆರ್ಎಸ್ಎಸ್ಗೆ ನೂರು ವರ್ಷ: ಕೊಂಡಾಡಿದ ಮೋದಿ
ವಿಜಯದಶಮಿಯಂದು ಸ್ಥಾಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸ್ಥಾಾಪನೆಯಾಗಿ ನೂರು ವರ್ಷ ಪೂರೈಸಲಿದೆ. ಸಂಘದ ಅಭೂತ ಪೂರ್ವ ಮತ್ತು ಸ್ಪೂರ್ತಿದಾಯಕ ಪ್ರಯಾಣವಾಗಿದೆ ಎಂದು ಮೋದಿ ಶ್ಲಾಾಘಿಸಿದರು.
ಆರ್ಎಸ್ಎಸ್ ಸ್ಥಾಾಪನೆಯಾದ ವೇಳೆ ದೇಶ ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲ್ಪಟ್ಟಿಿತ್ತು. ಈ ಗುಲಾಮಗಿರಿಯು ನಮ್ಮ ಸ್ವಾಾಭಿಮಾನ ಮತ್ತು ಆತ್ಮವಿಶ್ವಾಾಸವನ್ನು ತೀವ್ರವಾಗಿ ನೋಯಿಸಿತ್ತು. ವಿಶ್ವದ ಅತ್ಯಂತ ಹಳೆಯದಾದ ನಾಗರಿಕತೆಯು ಅಸ್ಮಿಿತೆ ಬಿಕ್ಕಟ್ಟನ್ನು ಎದುರಿಸುತ್ತಿಿತ್ತು. ನಮ್ಮ ನಾಗರಿಕರು ಕೀಳಿರಿಮೆಯಿಂದ ಬಲಿಯಾಗುತ್ತಿಿದ್ದರು ಎಂದು ಅವರು ಹೇಳಿದ್ದಾರೆ.
ತ್ಯಾಾಗ ಸೇವೆಯ ಮನೋಭಾವ ಮತ್ತು ಶಿಸ್ತಿಿನ ಬೋಧನೆಗಳು ಆರ್ಎಸ್ಎಸ್ ನಿಜವಾದ ಶಕ್ತಿಿಯಾಗಿದೆ. ಸಂಘ ನೂರು ವರ್ಷಗಳಿಂದ ಅವಿಶ್ರಾಾಂತವಾಗಿ ಹಾಗೂ ನಿರಂತರವಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಾಗಿಯೇ ದೇಶದಲ್ಲಿ ಎಲ್ಲಿಯಾದರೂ ನೈಸರ್ಗಿಕ ವಿಕೋಪ ಸಂಭವಿಸಿದಾಗ ಎಲ್ಲರಿಗಿಂತ ಮೊದಲು ಆರ್ಎಸ್ಎಸ್ ಸ್ವಯಂ ಸೇವಕರು ಅಲ್ಲಿಗೆ ಹೋಗಿರುತ್ತಾಾರೆ. ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡುತ್ತಿಿರುತ್ತಾಾರೆ ಎಂದು ಮೋದಿ ಬಣ್ಣಿಿಸಿದರು.