ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.28:
ಸರಿಯಾದ ತರಬೇತಿ ಮತ್ತು ಪೂರ್ವ ಸಿದ್ಧತೆಯಿಲ್ಲದೇ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಒಂದೆರಡಲ್ಲ, ನಾನಾ ಸಮಸ್ಯೆೆಗಳು ತಲೆ ದೋರಿವೆ. ಸಮೀಕ್ಷೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಬಹುತೇಕ ಕ್ಷೀಣವಾಗಿದೆ.
ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗ ಪೂರ್ವ ತಯಾರಿ ಇಲ್ಲದೇ, ಸಮಗ್ರ ತರಬೇತಿ ಇಲ್ಲದೇ ತರಾತುರಿಯಲ್ಲಿ ಮತ್ತು ದಸರಾ ಹಬ್ಬದ ರಜೆಯ ಸಂದರ್ಭದಲ್ಲಿ ಕೈಗೊಂಡಿರುವ ಸಮೀಕ್ಷೆ ನಿರೀಕ್ಷಿತ ಪ್ರಗತಿ ಕಾಣುತ್ತಿಿಲ್ಲ. ಸೆ.22ರಿಂದ ಆರಂಭಗೊಂಡು ಒಂದು ವಾರ ಕಳೆದರೂ ಸಮೀಕ್ಷೆ ಇನ್ನೂ ಕುಂಟುತ್ತಾಾ ಸಾಗುತ್ತಿಿದೆ.
ಶಾಲಾ ಕಾಲೇಜುಗಳ ರಜೆ ಹಿನ್ನೆೆಲೆಯಲ್ಲಿ ಬಹುತೇಕ ಮಂದಿ ಪ್ರವಾಸ ಇಲ್ಲವೆ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿಿರುವ ಸಮೀಕ್ಷೆಯಲ್ಲಿ ತಾಂತ್ರಿಿಕ ಸಮಸ್ಯೆೆ ಇನ್ನೂ ನಿವಾರಣೆಯಾಗಿಲ್ಲ. ಇಂಟರ್ನೆಟ್, ನೆಟ್ ವರ್ಕ್, ಓಟಿಪಿ ನಾವಿಗೇಶನ್ ಸಮಸ್ಯೆೆಗಳು ಹೀಗೆ ನಾನಾ ರೀತಿಯ ಅಡೆತಡೆಗಳ ನಡುವೆ ಸಮೀಕ್ಷೆ ನಡೆಯುತ್ತಿಿದೆ. ಆದರೆ ಸಮೀಕ್ಷೆ ನಿಗದಿತ ಕಾಲಮಿತಿಯಲ್ಲಿ ಅಂದರೆ ಅ.7ಕ್ಕೆೆ ಪೂರ್ಣಗೊಳ್ಳುವ ವಿಶ್ವಾಾಸ ಕಾಣಿಸುತ್ತಿಿಲ್ಲ.
ಈ ಮಧ್ಯೆೆ ಸಮೀಕ್ಷೆ ನಡೆಸುವಾಗ ಸಾರ್ವಜನಿಕರನ್ನು ಒತ್ತಾಾಯ ಮಾಡದೇ ಸ್ವಯಂಪ್ರೇೇರಿತರಾಗಿ ಮಾಹಿತಿ ನೀಡಿದರೆ ಮಾತ್ರ ವರದಿ ಪಡೆಯಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಸಮೀಕ್ಷೆಗೆ ಸಂಬಂಧಪಟ್ಟಂತೆ ವಿವರಗಳನ್ನು ನೀಡುವುದು ಸಾರ್ವಜನಿಕರ ಇಚ್ಚೆೆಗೆ ಬಿಟ್ಟದ್ದು ಎಂದು ಹೇಳಿದೆ.
ಈ ಸಮೀಕ್ಷೆಗೆ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಪಾತ್ರ ಮುಖ್ಯವಾದದ್ದು ಆದರೆ ಸದರಿ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಸಚಿವರ ಆಪ್ತ ಶಾಖೆಗಳಲ್ಲಿರುವ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಸಾರ್ವಜನಿಕ ಉಪಯುಕ್ತ ಇಲಾಖೆಗಳಾದ ಕಾರ್ಮಿಕ, ಆರೋಗ್ಯ, ಮತ್ತಿಿತರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಈ ಸಮೀಕ್ಷೆಗೆ ನಿಯೋಜಿಸಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಎದುರಾಗಿದೆ. ವಿಧಾನಸಭೆ, ವಿಧಾನ ಪರಿಷತ್, ರಾಜ್ಯ ಲೆಕ್ಕಪತ್ರ ಇಲಾಖೆ ಒಳಗೊಂಡಂತೆ ಇನ್ನೂ ಅನೇಕ ಇಲಾಖೆಗಳಲ್ಲಿರುವ ಸಿಬ್ಬಂದಿಗಳನ್ನು ಈ ಸಮೀಕ್ಷೆಗೆ ನಿಯೋಜಿಸಿಲ್ಲ.
ಸಚಿವರ ಕಚೇರಿ ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜಿಸಿರುವುದನ್ನು ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಆಯೋಗಕ್ಕೆೆ ಪತ್ರವನ್ನು ಸಹ ಬರದಿದ್ದಾರೆ. ಸಮೀಕ್ಷೆಗೆ ಹಾಜರಾಗದಿದ್ದರೆ ಅಮಾನತು ಮಾಡುವ ಜೊತೆಗೆ ಎ್.ಐ.ಆರ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ಸರ್ಕಾರಿ ಸಿಬ್ಬಂದಿ ಜಿಜ್ಞಾಸೆಗೆ ಒಳಗಾಗಿದೆ.
ಕಡ್ಡಾಾಯ ಸಾರ್ವಜನಿಕ ಉಪಯುಕ್ತ ಸೇವೆಯನ್ನು ಒದಗಿಸುವ ಇಲಾಖೆಗಳಾದ ಆರೋಗ್ಯ, ಕಾರ್ಮಿಕ ಇಲಾಖೆ ಮತ್ತು ಸಚಿವರುಗಳ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಿರುವ ಸಿಬ್ಬಂದಿಗಳನ್ನು ತಕ್ಷಣ ಈ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕೆಂಬ ಒತ್ತಡ ಕೇಳಿ ಬಂದಿದೆ. ಹಲವು ಸ್ತರಗಳಲ್ಲಿ ಸಮಸ್ಯೆೆಗಳು ಕಂಡು ಬಂದಿರುವುದರಿಂದ ನಿಗದಿತ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಸಾಧ್ಯತೆಗಳು ಕ್ಷೀಣಿಸಿವೆ.

