ಸುದ್ದಿಮೂಲ ವಾರ್ತೆ ರಾಯಚೂರು, ಸೆ.28:
ದೇಶ ಆಪತ್ತು ಎದುರಿಸುತ್ತಿಿದೆ ಅರಾಜಕತೆ ಸೃಷ್ಟಿಿಸುವ ರಾಜಕಾರಣ ವಿರೋಧ ಪಕ್ಷದವರು ಮಾಡುತ್ತಿಿರುವ ಈ ಸಂದರ್ಭದಲ್ಲಿ ಬಿಜೆಪಿ ದೇಶ ಕಟ್ಟುವ ಕೆಲಸ ಮಾಡುತ್ತಿಿದೆ ಇಂತಹ ಕೆಲಸಕ್ಕೆೆ ಕಾರ್ಯಕರ್ತರು ಹೆಗಲಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಅವರು ನಗರದ ಹೊರ ವಲಯದ ರಾಯಲ್ೆರ್ಟ್ ಆವರಣದಲ್ಲಿ ರಾಯಚೂರು ಗ್ರಾಾಮೀಣ ಮಂಡಲ ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿಿಘಿ, ಪ್ರಧಾನ ಕಾರ್ಯದರ್ಶಿ ನವೀನ್ಕುರ್ಡಿ ಮತ್ತಿಿತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಬಿಜೆಪಿಯ ಪದಾಧಿಕಾರಿ, ಜವಾಬ್ದಾಾರಿ ಎಂದು ಹೇಳಿದರೆ ಅದು ಪದವಿ ಪಡೆದವನ ನೆಮ್ಮದಿಗಿಂತ ಸಮಾಜ ನೆಮ್ಮದಿಯಾಗಿರುವಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾಾರಿ ಎಂದು ಭಾವಿಸುತ್ತೇವೆ ವಿನಃ ಉಳಿದ ಪಕ್ಷಗಳಂತೆ ಅದೊಂದು ಅಧಿಕಾರ, ಆರಾಮಾಗಿರುವ ಗದ್ದುಗೆ ಎಂದು ಭಾವಿಸುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆೆಸ್ಗೆ ಟಾಂಗ್ ನೀಡಿದರು.
75 ವರ್ಷಗಳ ಅಳ್ವಿಿಕೆಯಲ್ಲಿ ಕಾಂಗ್ರೆೆಸ್ ಪ್ರಜಾಪ್ರಭುತ್ವಕ್ಕೆೆ ಮಾರಕ , ಕುಟುಂಬದ ಆಡಳಿತ ನಡೆಸಿದೆಯೇ ವಿನಃ ಪ್ರಜಾಪ್ರಭುತ್ವಕ್ಕೆೆ ಪೂರಕವಾಗಿ ಅಲ್ಲಘಿ. ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಶ್ರೀರಾಮಮಂದಿರಕ್ಕಾಾಗಿ ಸಂಕಲ್ಪ ಮಾಡಿ ದೇಶ ಸುತ್ತಿಿದ ಲಾಲ್ಕೃಷ್ಣ ಅಡ್ವಾಾಣಿ ಅವರ ಅಧಿಕಾರದ ನಂತರ ಅವರ ವಾರಸುದಾರರು ಪಕ್ಷದ ಅಥವಾ ಸರ್ಕಾರ ಅಧಿಕಾರದ ಮುಂಚೂಣಿಯಲ್ಲಿಲ್ಲಘಿ. ನರೇಂದ್ರ ಮೋದಿಯವರು ಸಹಿತ ಉತ್ತರಾಧಿಕಾರಿಗೆ ಅಧಿಕಾರ ನೀಡುವುದಿಲ್ಲ ಅಂತಹ ಬದ್ದತೆಯ ಪಕ್ಷವಾಗಿದೆ. ಈ ದೇಶವನ್ನು ನಾವು ಕಟ್ಟದಿದ್ದರೆ ಯಾರು ಕಟ್ಟಬೇಕು ಪಶ್ಚಿಿಮ ಬಂಗಾಳ ಮುಂದಿನ 30 ವರ್ಷ ಭಾರತದ ಭಾಗವಾಗಿರಲಿದೆಯೇ, ಕೇರಳದಲ್ಲಿ ಅಧಿಕಾರ ನಡೆಸುವವರು ನಮ್ಮವರೇನಾ, ಜಮ್ಮು ಕಾಶ್ಮೀರ ಅಖಂಡ ಭಾರತದಲ್ಲಿರದಂತೆ ಮಾಡಿದ್ದು ಯಾರು ಇಂತಹ ಸಂದಿಗ್ಧತೆ ಕಾಲದಲ್ಲಿ ರಾಜಕಾರಣ ಅಧಿಕಾರಕ್ಕಾಾಗಿ ಬಿಜೆಪಿ ಮಾಡುವುದಿಲ್ಲ ದೇಶ ಕಟ್ಟಲು ರಾಜಕೀಯ ಮಾಡುತ್ತೇವೆ ಮತ್ತೊೊಬ್ಬರ ಮನೆ ಕಾಯುವ ಕೆಲಸ ಬಿಜೆಪಿ ಮಾಡುವುದಿಲ್ಲ ಎಂದು ಪ್ರತಿಪಾದಿಸಿದರು.
ಭೀಮಾ ತೀರದಲ್ಲಿ ಪ್ರವಾಹ, ಜನ ಜೀವನ ಸಂಕಷ್ಟದಲ್ಲಿರುವಾಗ ಈ ರಾಜ್ಯದಲ್ಲಿ ಅಧಿಕಾರ ನಡೆಸುವ ಕಾಂಗ್ರೆೆಸ್ನವರಿಗೆ ಮಾನವೀಯತೆ ಇದೇನಾ, ಅವರು ಅನ್ನ ಊಟ ಮಾಡುತ್ತಿಿದ್ದಾಾರೆಯೆ ಎಂದು ಪ್ರಶ್ನಿಿಸಿದರು. ಏನಾದರೂ ಕೇಳಿದರೆ ಕೇಂದ್ರದ ಕಡೆಗೆ ಕೈ ತೋರಿಸುವವರಿಗೆ ಈ ಹಿಂದೆ ಯಡಿಯೂರಪ್ಪನವರು ಪ್ರವಾಹ ಬಂದಾಗ ಮಾಡಿದ ಕೆಲಸ ನೆನಪಾಗುತ್ತಿಿಲ್ಲವೆ. ಈ ರಾಜ್ಯದಲ್ಲಿ ರೈತರಿಗೆ, ದಲಿತರಿಗೆ ಕಾಂಗ್ರೆೆಸ್ ಸರ್ಕಾರ ಮಾಡಿದಷ್ಟು ಅನ್ಯಾಾಯ, ಮೋಸ ಹಿಂದೆ ಯಾರೂ ಮಾಡಿಲ್ಲಘಿ. ಇಂತಹ ಕಾಲದಲ್ಲಿ ಪ್ರತಿಪಕ್ಷವಾಗಿ ಬಿಜೆಪಿಯ ಪ್ರತಿ ಕಾರ್ಯಕರ್ತ ಜನರ ಜೊತೆ ನಿಲ್ಲಬೇಕು ನಾವು ಮಾತನಾಡಬೇಕು ಎಂದ ಅವರು ಮುಂದಿನ ದಿನ ರಾಯಚೂರು ಗ್ರಾಾಮೀಣ ಸೇರಿ ಜಿಲ್ಲೆೆಯಲ್ಲಿ ಎಲ್ಲ ಕಡೆಗೂ ಗೆಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ವೈಲ್ಯಘಿ, ಅಭಿವೃದ್ದಿ ಶೂನ್ಯಘಿ, ಸರ್ಕಾರಿ ಆಸ್ತಿಿಗಳ ಮಾರಾಟದ ಬಗ್ಗೆೆ ವಿವರಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಎನ್.ಶಂಕ್ರಪ್ಪ ಮಾತನಾಡಿ, ಗ್ರಾಾಮಾಂತರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಿಸಿ , ಕ್ಷೇತ್ರದಾದ್ಯಂತ ಸರ್ವ ಸಮುದಾಯಗಳಿಗೆ ಒಳ್ಳೆೆಯ ಕಾರ್ಯ ಮಾಡಿದರೂ ಒಳ ಜಗಳ ಹಾಗೂ ನಮ್ಮ ನಮ್ಮ ನಡುವೆ ನಮ್ಮನ್ನೇ ಮುಳುಗಿಸುವ ಕೆಲಸ ಮಾಡಿದ್ದರಿಂದ ತಿಪ್ಪರಾಜುಗೆ ಸೋಲಾಯಿತು . ಮುಂದಿನ ಚುನಾವಣೆ ಗೆಲ್ಲಲು ಗ್ರಾಾಮಾಂತರದಲ್ಲಿ ಈಗಿನಿಂದಲೇ ಸಂಘಟನಾತ್ಮಕವಾಗಿ ಪಕ್ಷ ಕಟ್ಟುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಕಾರ್ಯಕರ್ತರಿಂದ ಮಾತ್ರ ಪಕ್ಷ ಕಟ್ಟಲು ಸಾಧ್ಯ. ಅವರಿಂದ ಅಧಿಕಾರ ಪಡೆಯಲು ಸಾಧ್ಯವೆ ಹೊರತು ವೇದಿಕೆ ಮೇಲೆ ಕುಳಿತುಕೊಳ್ಳುವ ನಮ್ಮಿಿಂದ ಎಲ್ಲ ಸಾಧ್ಯವಿಲ್ಲ ಎಂದರು.
ಮುಂದಿನ ಬಾರಿ ಖಂಡಿತವಾಗಿ ಚುನಾವಣೆಯಲ್ಲಿ ತಿಪ್ಪರಾಜು ಅವರ ಗೆಲುವು ತಪ್ಪಿಿಸಲು ಸಾಧ್ಯವಿಲ್ಲವೆಂದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆೆ ಬಂದ ಕಾಂಗ್ರೆೆಸ್ನ ಸಿದ್ದರಾಮಯ್ಯ ಸರ್ಕಾರ ಶೇ.80ರಷ್ಟು ಕಮಿಷನ್ ಪಡೆಯುತ್ತಿಿದೆ ಎಂದು ಆಪಾದಿಸಿದರು.
ಚುನಾವಣೆಗಳು ಬಂದಾಗ ಮಾತ್ರ ಗ್ಯಾಾರೆಂಟಿ ಹಣವನ್ನು ಮಹಿಳೆಯರ ಖಾತೆಗೆ ಹಾಕುತ್ತಿಿದ್ದು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಮ್ಮವರು ಮಾಡಿ ಎಂದರು.
ತಿಪ್ಪರಾಜು ಹವಾಲ್ದಾಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಆದ ಸೋಲು ನನ್ನ ತಪ್ಪಿಿನಿಂದವೆ ವಿನಃ ಕಾರ್ಯಕರ್ತರಿಂದ ಅಲ್ಲಘಿ.ಈಗ 10 ವರ್ಷ ವನವಾಸ ಆಗಿದೆ 3ನೇ ಬಾರಿ ಬಿಜೆಪಿಯ ಕಮಲ ಅರಳಿಸುವುದೆ ನನ್ನ ಹಾಗೂ ಗ್ರಾಾಮಾಂತರ ಘಟಕದ ಕೆಲಸವಾಗಿರಲಿದೆ ಎಂದರು.
ಶಿವನಗೌಡ ನಾಯಕರು ನೀಡಿದ ಅವಕಾಶದಿಂದ ಶಾಸಕನಾಗಿದ್ದೆೆ ಮುಂದೆ ಕ್ಷೇತ್ರದ ಜನ ಸೇವೆಗೆ ಅವಕಾಶ ಮಾಡಿಕೊಟ್ಟರೂ, ಕೊಡದಿದ್ದರೂ ಸಾಯುವವರೆಗೂ ಅವರೊಂದಿಗೆ ಇರುವುದಾಗಿ ಭಾವನಾತ್ಮಕವಾಗಿ ನುಡಿದರು.
ಗ್ರಾಾಮಾಂತರ ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿಿ ಮಾತನಾಡಿ, ಎಲ್ಲ ಹಿರಿಯರು ನನ್ನ ಮೇಲೆ ಇಟ್ಟ ವಿಶ್ವಾಾಸ ಉಳಿಸಿಕೊಳ್ಳುವಂತೆ ಪಕ್ಷ ಸಂಘಟಿಸುವುದಲ್ಲದೆ, 187 ಹಳ್ಳಿಿಗಳಲ್ಲಿನ 220ಕ್ಕೂ ಅಧಿಕ ಬೂತ್ಗಳಲ್ಲಿ 8 ಜಿ.ಪಂ, 27 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ನನ್ನ ಕಾರ್ಯಕರ್ತರ ಸಂಘಟಿಸುವ ಕೆಲಸ ಮಾಡುತ್ತೇನೆ. ಮುಂದೆ ಪಕ್ಷ ಹಾಗೂ ತಿಪ್ಪರಾಜು ಅವರ ಗೆಲ್ಲಿಸುವುದೆ ನಮ್ಮ ಗುರಿಯಾಗಿದೆ ಎಂದರು.
ಪ್ರಾಾಸ್ತಾಾವಿಕವಾಗಿ ಮಾತನಾಡಿದ ನೂತನ ಪ್ರಧಾನ ಕಾರ್ಯದರ್ಶಿ ಜಿ.ಎಚ್.ನವೀನಕುಮಾರ್ ಕುರ್ಡಿ, ಗ್ರಾಾಮಾಂತರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ ತಿಪ್ಪರಾಜು ಹವಾಲ್ದಾಾರ್ ಅವರನ್ನು 2028ಕ್ಕೆೆ ಪುನಃ ಗೆಲ್ಲಿಸಲು ನಾವೆಲ್ಲರೂ ಪಣ ತೊಡಬೇಕು.ಅದಕ್ಕೆೆ ಎಲ್ಲ ಕಾರ್ಯಕರ್ತರು ದುಡಿಯೋಣ ನಮಗೆ ಕೊಟ್ಟ ಜವಾಬ್ದಾಾರಿ ನಿಭಾಯಿಸುವುದಾಗಿ ಹೇಳಿದ ಅವರು ರಾಜ್ಯದ ನಾಯಕರು ನಮಗೆಲ್ಲ ಬಲ ತುಂಬಬೇಕು ಎಂದು ಕೋರಿದರು.
ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಮಾಜಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಬಿ.ವಿ.ನಾಯಕ,ಮಾಜಿ ಶಾಸಕರಾದ ಬಸನಗೌಡ ಬ್ಯಾಾಗವಾಟ್, ಗಂಗಾಧರ ನಾಯಕ, ದೇವದುರ್ಗದ ಅಧ್ಯಕ್ಷ ಶರಣಬಸವ ಪಾಟೀಲ, ಮುಖಂಡರಾದ ಜಗದೀಶ ವಕೀಲ, ಶಂಕರರೆಡ್ಡಿಿಘಿ, ಸುಲೋಚನಾ, ನಿಕಟಪೂರ್ವ ಅಧ್ಯಕ್ಷ ಶಂಕರರೆಡ್ಡಿಿ ಮತ್ತಿಿತರರು ಪಕ್ಷ ಸಂಘಟನೆ, ರಾಜ್ಯ ಕಾಂಗ್ರೆೆಸ್ ಜನವಿರೋಧಿ ಆಡಳಿತದ ಬಗ್ಗೆೆ ಮಾತನಾಡಿದರು.
ವೇದಿಕೆಯಲ್ಲಿ ಸಿದ್ಧನಗೌಡ ನೆಲಹಾಳ್ ,ಅಚ್ಯುತ್ ರೆಡ್ಡಿಿ , ರವೀಂದ್ರ ಜಲ್ದಾಾರ, ಕೇಶವರೆಡ್ಡಿಿ , ರಾಜಕುಮಾರ, ಸಂತೋಷ, ನಾರಾಯಣರಾವ್ ಕುಲಕರ್ಣಿ , ಕಡಗೋಲು ಆಂಜನೇಯ್ಯ, ವರಪ್ರಸಾದ್ ರೆಡ್ಡಿಿ ತಲಮಾರಿ , ಶಂಕರಗೌಡ ಆಲ್ಕೂರು , ಮರೇಗೌಡ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿನಾಯಕರಾವ್, ಜಂಬಣ್ಣ ನೀಲಗಲ್ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿಿತರಿದ್ದರು.
ಗ್ರಾಾಮಾಂತರ ಮಂಡಲ ಅಧ್ಯಕ್ಷರಾಗಿ ಮಹಾಂತೇಶ, ಪ್ರಘಿ.ಕಾರ್ಯದರ್ಶಿ ನವೀನಕುರ್ಡಿ ಪದಗ್ರಹಣ ಬಿಜೆಪಿಯ ದೇಶ ಕಟ್ಟುವ ಕೆಲಸಕ್ಕೆೆ ಕಾರ್ಯಕರ್ತರು ಹೆಗಲು ನೀಡಿ-ಪಿ.ರಾಜೀವ್
