ಸುದ್ದಿಮೂಲ ವಾರ್ತೆ ಯಾದಗಿರಿ, ಸೆ.28:
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಇಂದು ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಹಾನಿ ಬಗ್ಗೆೆ ಪರಿಶೀಲನೆ ನಡೆಸಿದರು.
ಭಾನುವಾರ ಬೆಳಿಗ್ಗೆೆ ಅಲಿಪುರ ತಾಂಡಾ, ಅಲಿಪುರಗಳಲ್ಲಿ ಅತಿ ವೃಷ್ಟಿಿಯಿಂದ ಹಾನಿಗೊಳಗಾದ ಭತ್ತ, ಇತರೆ ಬೆಳೆ ಪರಿಶೀಲಿಸಿದರು.ನಂತರ ಡಾನ್ ಬಾಸ್ಕೋೋ ಶಾಲೆ ಹತ್ತಿಿರದ ಸೇತುವೆ ಮುಳುಗಡೆಯಾದ ಬಗ್ಗೆೆ ಪರಿಶೀಲನೆಯನ್ನು ಅವರು ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅತೀವೃಷ್ಟಿಿ,ಭೀಮಾ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿಿರುವದರಿಂದ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಹಿಂದಿನ ಬೆಳೆ ಸಮೀಕ್ಷೆಯನ್ವಯ 25- ರಿಂದ 27 ಸಾವಿರ ಹೆಕ್ಟೆೆರ್ ಬೆಳೆನಾಶವಾದ ಬಗ್ಗೆೆ ವರದಿಯಾಗಿತ್ತು. ಈಗ ಸುಮಾರು 1.11 ಲಕ್ಷಕ್ಕೂ ಅಧಿಕ ಹೆಕ್ಟೆೆರ್ ಬೆಳೆ ನಾಶವಾದ ಬಗ್ಗೆೆ ಅಂದಾಜಿಸಲಾಗಿದೆ.ಆದರೆ ಈ ಕುರಿತು ಪುರ್ನ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ಬೆಳೆನಾಶ ವರದಿ ಸರ್ಕಾರಕ್ಕೆೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಎಲ್ಲ ಪರಿಸ್ಥಿಿತಿಗಳ ಬಗ್ಗೆೆ ಮಾನ್ಯ ಮುಖ್ಯಮಂತ್ರಿಿ ಗಳೊಂದಿಗೆ ಮೋಬೈಲ್ ಕರೆ ಮಾಡಿ ಗಮನಕ್ಕೆೆ ತರಲಾಗಿದೆ ಎಂದ ಸಚಿವರು , ಕಂದಾಯ ಸಚಿವರು ಕೂಡ ಜಿಲ್ಲೆಗೆ ಭೇಟಿ ನೀಡುವರು. ಜಿಲ್ಲೆಯ ಜನತೆಯೊಂದಿಗೆ ಪಕ್ಷಭೇದ ಮರೆತು ನಾವಿದ್ದೇವೆ.ವಿವಿಧ ಪಕ್ಷ,ಸಂಘಟನೆ ,ಜನ ಕೂಡ ಪರಸ್ಪರ ಸಹಾಯಕ್ಕೆೆ ಬರುತ್ತಿಿದ್ದಾರೆ ಎಂದರು.
ಅತಿವೃಷ್ಟಿಿ ಹಾಗೂ ಪ್ರವಾಹದಿಂದಾಗಿ ಹತ್ತಿಿ, ಭತ್ತ,ಹೆಸರು, ತೊಗರಿಬೇಳೆ ನಾಶವಾಗಿದೆ.ರೈತರು ಸಂಕಷ್ಟದಲ್ಲಿದ್ದು ,ಅವರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಬೆಳೆನಾಶ ಅನುಭವಿಸಿರುವ ಪ್ರತಿ ರೈತರ ಜಮೀನಿನ ಪುರ್ನ ಸಮೀಕ್ಷೆ ಆಗಲಿದೆ.ಜಿಲ್ಲಾಡಳಿತ ಕೂಡ ಈ ಹಿಂದೆ ಕೃಷ್ಣ ಹಾಗೂ ಭೀಮಾ ನದಿ ಪ್ರವಾಹ ನಿರ್ವಹಿಸಿದ ಅನುಭವ ಹೊಂದಿದ್ದು, ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿಿದೆ. ರೈತರು ಹಾಗೂ ಗ್ರಾಾಮೀಣ ಪ್ರದೇಶಕ್ಕೆೆ ನೆರವಾಗಲಿದ್ದಾರೆ ಎಂದ ಅವರು ಗುರುಮಠಕಲ್, ಯಾದಗಿರಿ ಹಾಗೂ ವಡಗೇರಾ ತೀವ್ರ ತೊಂದರೆಗೆ ಒಳಗಾಗಿದ್ದು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿಿದೆ ಎಂದು ಹೇಳಿದರು.
ಸಚಿವರು ನಂತರ, ಭೀಮಾ ನದಿ ಬ್ರೀೀಡ್ಜ ಕಮ್ ಬ್ಯಾಾರೇಜ್, ಮುಳುಗಡೆಯಾದ ಜಲಶುದ್ಧೀಕರಣ ಘಟಕ, ಹಾನಿಯಾದ ಭತ್ತದ ಬೆಳೆ,ಹಾಲಗೇರಾ ಕ್ರಾಾಸ್,ಗೋಡಿಯಾಳ,ಕುಮನೂರ, ಹುರುಸಗುಂಡಗಿ ಹಾಗೂ ರೋಜಾ ಶಿರವಾಳದಲ್ಲಿ ಕಾಳಜಿ ಕೇಂದ್ರಗಳಿಗೆ, ಮನೆಗಳಿಗೆ ಭೇಟಿ ನೀಡಿ ನಾಗರಿಕರಿಗೆ ಭೇಟಿ ಮಾಡಿದರು.ಅದರಂತೆ ನಾಯ್ಕಲ್,ಅಣಬಿಗಳಲ್ಲಿ, ಬೆಳೆ ಹಾನಿಯ ಬಗ್ಗೆೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ರಾದ ಚೆನ್ನಾಾರೆಡ್ಡಿಿ ಪಾಟೀಲ್ ತುನ್ನೂರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ, ಜಿಲ್ಲಾ ಪೋಲಿಸ್ ವರಿಷ್ಠಾಾಧಿಕಾರಿ ಪೃಥ್ವಿಿಕ್ ಶಂಕರ, ಸಹಾಯಕ ಆಯುಕ್ತ ಶ್ರೀಧರ ಗೋಟುರ,ಸಂಜೀವ್ ಸ್ಯಾಾಮ್ಸನ್ ಮಾಳಿಕೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಯಾದಗಿರಿ ಜಿಲ್ಲೆೆಯಲ್ಲಿ ಬೆಳೆಹಾನಿ, ಪ್ರವಾಹ ಪರಿಸ್ಥಿಿತಿ ಸ್ಥಳಗಳಿಗೆ ಭೇಟಿ ನೀಡಿ ಅವಲೋಕನ ಮಾಡಿದ ಸಚಿವರು ಬೆಳೆ ನಾಶದ ಬಗ್ಗೆೆ ಪುನರ್ ಸಮೀಕ್ಷೆ ನಡೆಸಿ ಸರ್ಕಾರಕ್ಕೆೆ ವರದಿ ಸಲಿಸಲು ಸೂಚನೆ – ದರ್ಶನಾಪೂರ
